Corona Song – Vijaya Prakash Lyrics
 
   
| Singer | Vijaya Prakash | 
About the song
▪ Lyrics – Yogaraj Bhat
▪ Singer – Vijay Prakash
▪ Music – Arjun Janya
CORONA SONG LYRICS
ಯಾರೊ ನೀನು ಮಾನವ ( ಕೊರೊನ ಹಾಡು ) 
ರಚನೆ : ಯೋಗರಾಜ್ ಭಟ್
ಊರಿಗೂ ಖಾಲಿ ದಾರಿ ತುಂಬಾ ಬೇಲಿ ,
 ತಿಳಿದುಕೊಳ್ಳುವ ಬನ್ನಿ ಬಾನ ಬಣ್ಣ ನೀಲಿ , 
ವಿಷಾದವೇ , ವಿನಾಶವೂ . . ತಿರುಗುತ್ತಿರುವ ಭೂಮಿ ಇಂದು , ನಿಲ್ಲಬಹುದೆ ಜ್ವರವು ಬಂದು , 
ಕಾಲ ನಿಂತರು ಬಾಳು ನಿಲ್ಲುವುದೇ . . . ? !
 ಯಾರೊ ನೀನು ಮಾನವಾ , ಕೇಳುತಿಹುದು ಕೊರೋನ . 
ಪುಟ್ಟ ಅಣುವಿನ ಪ್ರಶ್ನೆಗೆ , ದಿಟ್ಟ ಉತ್ತರ ಕೊಡೋಣ
 ಎಲ್ಲರೂ ಬಡವರೇ ಇಲ್ಲ ಅಂತರ , ಕೇಳಲೇ ಬೇಕಿದೆ ಸೃಷ್ಟಿ ಇಂಚರ . . ಒಂದು ಅಣುವಿನ ದಾಳಿಗೆ , ನಿಲ್ಲಬಾರದು ಏಳಿಗೆ , 
ನಮ್ಮ ಸುಂದರ ನಾಳೆಗೆ , ಹಿಡಿಯಬೇಕಿದೆ ಜೋಳಿಗೆ , ರೊಟ್ಟಿಯೊಂದನು ಹೊಟ್ಟೆ ಕೇಳುತಿದೆ . !
 ಯಾರೊ ನೀನು ಮಾನವಾ , ಕೇಳುತಿಹುದು ಕೊರೋನ , 
ಕನ್ನ ಹೊಡೆಯುವ ಧನಿಕರು , ಸುಮ್ಮನಿರುವುದು ಸರೀನಾ . . ?
 ಪ್ರಾಣಕೆ ಬೇಕಿದೆ , ಅಪೂರ್ವ ಅಮೃತ , 
ಬಾಳಿಗೆ ಬೇಕಿದೆ , ವಿಶಾಲ ಒಮ್ಮತ . . ರೋಗ ಕೇಳುತ ಬರುವುದೆ , ಮನುಜನಾ ಕುಲಗೋತ್ರವ . ! ? ಸಾವು ನೋಡುತ ನಗುತಿದೆ , 
ಬ್ಯಾಂಕ್ ಅಕೌಂಟಿನ ಗಾತ್ರವ . ! 
ಬಣ್ಣ ಧರ್ಮವ ಮಣ್ಣು ಕೇಳುವುದೇ . . ! ? 
ಯಾರೊ ನೀನು ಮಾನವಾ , ಕೇಳುತಿಹುದು ಕೊರೋನ ,
 ಬದುಕಿ ಉಳಿಯಲು ಎಲ್ಲರೂ , ಮೊದಲು ಮಾನವರಾಗೋಣ . . ಯಾರೋ ನೀನು ಮಾನವಾ , ಕೇಳುತಿಹುದು ಕೊರೋನ , 
ಬದುಕಿ ತೋರಿಸಬೇಕಿದೆ , 
ತುಂಬ ಸುಂದರ ಜೀವನ . .


