Singara siriye lyrics ( ಕನ್ನಡ ) – Kantara

Singara siriye song details :

  • Song : Singara siriye
  • Singer : Vijay Prakash, Ananya Bhat, Nagraj Panar Valtur
  • Lyrics : Pramod Maravanthe
  • Movie : Kantara
  • Music : B Ajaneesh Loknath
  • Label : Hombale films

Singara siriye lyrics in kannada

ಬತ್ತಾತೊಳು ಕೈಗೆ ಮಡಿ ಉಳೆಸಿದ
ಮದ್ವಿ ಹೋದಣ್ಣ ಬರಲಿಲ್ಲ
ಮದ್ವಿ ಹೋದಣ್ಣ ಬರಲಿಲ್ಲ ಬಸರೂರ
ಹೂವ ಗಂಟನ್ನ ತೆಗೆದೀಡ

ಏ ಸಿಂಗಾರ ಸಿರಿಯೇ
ಅಂಗಾಲಿನಲೇ ಬಂಗಾರ ಆಗೆ ಬಾ ಮಾಯೇ
ಗಾಂಧಾರಿಯಂತೆ ಕಣ್ಮುಚ್ಚಿ ಹೊಂಗನಸ ಅರಸೊ ಛಾಯೇ
ಮಂದಹಾಸ ಆಹಾ
ನಲುಮೆಯಾ ಶ್ರಾವಣ ಮಾಸ

ಮುದ್ದಾದ ಮಾಯಾಂಗೆ
ಮೌನದ ಸಾರಂಗೆ
ಮೋಹದ ಮದರಂಗೆ
ನನ್ನ ಹಾಕಿದೆ ಮುಂಗುರುಳ ಸೋಕೆ

ಮಾತಾಡುವ ಮಂದಾರವೇ
ಕಂಗೊಳಿಸಬೇಡಾ ಹೇಳದೇ
ನಾನೇತಕೆ ನಿನಗ್ಹೇಳಲಿ
ನಿನ್ನ ಮೈಯ ತುಂಬಾ ಕಣ್ಣಿದೆ

ಮನದಾಳದ ರಸ ಮಂಚದೀ
ರಂಗೇರಿ ನಿನ್ನ ಕಾದಿದೆ
ಪಿಸುಮಾತಿನ ಪಂದ್ಯಾವಳಿ
ಆಕಾಶವಾಣಿ ಆಗಿದೆ
supercinelyrics.com

ಸಂಜೆಯ ಕೆನ್ನೆಯ ಮೇಲೆ

ಬಂದು ನಾಟಿದೆ ನಾಚಿಕೆ ಮುಳ್ಳು
ಮನದ ಮಗು ಹಠಮಾಡಿದೆ
ಮಾಡುಬಾ ಕೊಂಗಾಟವಾ

ಕಣ್ಣಿಗೆ ಕಾಣೋ ಹೂಗಳೆಲ್ಲ
ಏನೋ ಕೇಳುತಿವೆ
ನಿನ್ನಯ ನೆರಳ ಮೇಲೆ ನೂರು
ಚಾಡಿ ಹೇಳುತಿವೆ

ಏ ಸಿಂಗಾರ ಸಿರಿಯೇ
ಅಂಗಾಲಿನಲೇ ಬಂಗಾರ ಆಗೆ ಬಾ ಮಾಯೇ
ಗಾಂಧಾರಿಯಂತೆ ಕಣ್ಮುಚ್ಚಿ ಹೊಂಗನಸ ಅರಸೊ ಛಾಯೇ

ಶೃಂಗಾರದ ಸೋಬಾನೆಯ
ಕಣ್ಣಾರೆ ನೀನು ಹಾಡಿದೆ
ಈ ಹಾಡಿಗೆ ಕುಣಿದಾಡುವ
ಸಾಹಸವ ಯಾಕೆ ಮಾಡುವೆ ?

ಸೌಗಂಧದ ಸುಳಿಯಾಗಿ ನೀ

ನನ್ನೆದೆಗೆ ಬೇಲಿ ಹಾಕಿದೆ
ನಾ ಕಾಣುವ ಕನಸಲ್ಲಿಯೇ
ನೀನ್ಯಾಕೆ ಬೇಲಿ ಹಾರುವೆ

ಸಂಜೆಯ ಕೆನ್ನೆಯ ಮೇಲೆ
ಬಂದು ನಾಟಿದೆ ನಾಚಿಕೆ ಮುಳ್ಳು
ಮನದ ಮಗು ಹಠಮಾಡಿದೆ
ಮಾಡುಬಾ ಕೊಂಗಾಟವಾ

ಸುಂದರವಾದ ಸೋಜಿಗವೆಲ್ಲಾ
ಕಣ್ಣಾ ಮುಂದೆ ಇದೆ
ಬಣ್ಣಿಸಬಂದ ರೂಪಕವೆಲ್ಲಾ
ತಾನೇ ಸೋಲುತಿದೆ

ಏ ಮಂದಹಾಸ ಆಹಾ
ನಲುಮೆಯಾ ಶ್ರಾವಣ ಮಾಸ..

Check other Kantara movie songs lyrics :

Karma song lyrics ( ಕನ್ನಡ ) – Kantara

Varaha roopam lyrics ( ಕನ್ನಡ ) – Kantara

Vaa poruloya lyrics ( ಕನ್ನಡ ) – Kantara

Singara siriye song video :

18 thoughts on “Singara siriye lyrics ( ಕನ್ನಡ ) – Kantara”

  1. Plz note below 2 small correction.

    “Angaalinale Bangaara Agevaa (Not Ba) Maaye”
    “Kanna (Not Nanna) haakide mungurula soki”

    Thank you

    Reply
  2. Also, its “Kondaata” not “Kongaata”
    “Manada magu hata maadide
    Maadu baa Kondaatava”

    “Manadaalada Rasa Manjari” (Not Manchadi)

    “Sajjeya” (Not Sanje) kenneya mele”

    Thank you

    Reply
  3. “ಕೊಂಡಾಟ” ಅಂದರೆ “ಹೊಗಳುವುದು’. ಸಿನಿಮಾ ದಲ್ಲಿ ಇರುವುದು”ಕೊಂಗಾಟ”

    Reply
  4. ಕೊಂಗಾಟ ಹಾಗೂ ಕೊಂಡಾಟ ಎರಡೂ ಆಗುತ್ತೆ. ಮುದ್ದಿಸು, ರಮಿಸು ಅನ್ನೋದಕ್ಕೆ ದಕ್ಷಿಣ ಕನ್ನಡದಲ್ಲಿ “ಕೊಂಡಾಟ” ಅಂತಾನೂ ಉಡುಪಿ, ಕುಂದಾಪುರ ಕಡೆ “ಕೊಂಗಾಟ” ಅಂತಾನೂ ಹೇಳ್ತಾರೆ.

    Reply

Leave a Comment

Contact Us