Categories
Chaithra

Aaha entha aa kshana lyrics ( ಕನ್ನಡ ) – Akash

Aaha entha aa kshana song details :

  • Song : Aaha entha aa kshana
  • Singer : Chaitra
  • Lyrics : K Kalyan
  • Movie : Akash
  • Music : R P Patnayak
  • Label : Jhankar music

Aaha entha aa kshana lyrics in kannada

ತಾ ದ ರೆ ನಾ…
ಧೀಮ್ ತಾ ಧೀಮ್ ತಾ ದ ರೆ ನಾ …
ಆಹಾ ಎಂಥ ಆ ಕ್ಷಣ
ನೆನೆದರೆ ತಲ್ಲಣ
ತನ್ನಂತಾನೆ ಎದೆಯಲಿ ಪ್ರೀತಿಯ ನರ್ತನ
ಇದು ಯಾವಾಗ ಹೇಗಾಯ್ತೋ ಯಾಕೆ ಅಂತ ಗೊತ್ತೇ ಆಗಲಿಲ್ಲ
ಈ ಪ್ರೀತೀಲಿ ಏನಿಂಥ ಮಾಯ ಮಂತ್ರ ಒಂದೂ ತಿಳಿಯಲಿಲ್ಲ
ಆಹಾ ಎಂಥ ಆ ಕ್ಷಣ
ನೆನೆದರೆ ತಲ್ಲಣ
ತನ್ನಂತಾನೆ ಎದೆಯಲಿ ಪ್ರೀತಿಯ ನರ್ತನ

ಕಂಗಳ ಮಾತಿಗೆ ತುಟಿಗಳು ಮೌನವು
ಹೃದಯವು ಬೆರೆತರೆ ಉಳಿದವು ಗೌಣವು
ನೆನ್ನೆಯವರೆಗೂ ನಾ ಹೇಗೋ ಇದ್ದೆ
ನಾ ಬೇರೆ ನೀ ಬೇರೆ ಅಂತಿದ್ದೆ
ನೆಪ ಮಾತ್ರಕೆ ಎರಡು ದೇಹ ಇದೆ
ಅದರೊಳಗಿರೋ ಪ್ರಾಣವು ಒಂದೇ
ಈ ಪ್ರಾಣಾನೇ ನಿನಗಾಗಿ ಮೀಸಲಿಡುವೆ
ಬಾರೋ ನನ್ನ ಗೆಳೆಯ
ನಿನ್ನ ಪ್ರೀತಿಗೆ ಏಳೇಳು ಜನ್ಮದಲ್ಲೂ
ಮುಡಿಪು ನನ್ನ ಹೃದಯ
ಆಹಾ ಎಂಥ ಆ ಕ್ಷಣ
ನೆನೆದರೆ ತಲ್ಲಣ
ತನ್ನಂತಾನೆ ಎದೆಯಲಿ ಪ್ರೀತಿಯ ನರ್ತನ
supercinelyrics.com

ನದಿಗಳು ಓಡಿವೆ ಕಡಲನು ಸೇರಲು
ಚೈತ್ರವ ಕಾದಿವೆ ಹೂಗಳು ಅರಳಲು
ಸಂಗೀತ ಸಾಹಿತ್ಯ ಒಂದಾದಂತೆ
ಹಾಲಲ್ಲಿ ಬೆರೆತಿರುವ ಜೇನಂತೆ
ಸೂಜಿಯ ಹಿಂದಿರುವ ದಾರದಂತೆ
ನಾ ಬರುವೆ ಜೊತೆಯಾಗಿ ನೆರಳಂತೆ
ಈ ಪ್ರೀತಿಯು ಈ ನಮ್ಮ ಬಾಳಿನಲ್ಲಿ
ಎಂದೂ ಹೀಗೆ ಇರಲಿ
ನಿನ್ನ ಪ್ರೀತೀನೇ ನನ್ನೆದೆಯ ಜ್ಯೋತಿಯಾಗಿ
ಎಂದೂ ಬೆಳಗುತಿರಲಿ
ಆಹಾ ಎಂಥ ಆ ಕ್ಷಣ
ನೆನೆದರೆ ತಲ್ಲಣ
ತನ್ನಂತಾನೆ ಎದೆಯಲಿ ಪ್ರೀತಿಯ ನರ್ತನ
ಇದು ಯಾವಾಗ ಹೇಗಾಯ್ತೋ ಯಾಕೆ ಅಂತ ಗೊತ್ತೇ ಆಗಲಿಲ್ಲ
ಈ ಪ್ರೀತೀಲಿ ಏನಿಂಥ ಮಾಯ ಮಂತ್ರ ಒಂದೂ ತಿಳಿಯಲಿಲ್ಲ
ಲ ಲಾ ಲ ಲಾ…

Aaha entha aa kshana song video :

Leave a Reply

Your email address will not be published. Required fields are marked *

Contact Us