Naliva gulabi hoove song details :
- Song : Naliva gulabi hoove
- Singer : S P Balasubrahmanyam
- Lyrics : Chi Udaya Shankar
- Movie : Auto raja
- Music : Rajan Nagendra
- Label : SGV music
Naliva gulabi hoove lyrics in kannada
ನಲಿವ ಗುಲಾಬಿ ಹೂವೆ
ಮುಗಿಲಾ ಮೇಲೇರಿ ನಗುವೆ
ನಲಿವ ಗುಲಾಬಿ ಹೂವೆ
ಮುಗಿಲಾ ಮೇಲೇರಿ ನಗುವೆ
ನಿನಗೆ ನನ್ನಲ್ಲಿ ಒಲವು
ಅರಿಯೆ ನನ್ನಲ್ಲಿ ಛಲವೋ
ನಲಿವ ಗುಲಾಬಿ ಹೂವೆ
ಒಲವೋ ಛಲವೋ ಒಲವೋ ಛಲವೊ
ಸುಳಿದೆ ತಂಗಾಳಿಯಂತೆ
ನುಡಿದೆ ಸಂಗೀತದಂತೆ
ಸುಳಿದೆ ತಂಗಾಳಿಯಂತೆ
ನುಡಿದೆ ಸಂಗೀತದಂತೆ
ಒಲವಿನ ಬಲೆಯಲಿ
ಸೆಳೆಯುತ ಕುಣಿದೆ
ಸೊಗಸಾಗಿ…ಹಿತವಾಗಿ…
ಮನವ ನೀ ಸೇರಲೆಂದೆ
ಬಯಕೆ ನೂರಾರು ತಂದೆ
ಬಯಸದೆ ಬಳಿಯಲಿ
ಸುಳಿಯುತ ಒಲಿದೆ
ಇಂದೇಕೆ…ದೂರಾದೆ..
ಬಯಸದೆ ಬಳಿಯಲಿ ಸುಳಿಯುತ ಒಲಿದೆ
ಇಂದೇಕೆ ದೂರಾದೆ ಹೀಗೇಕೆ ಮರೆಯಾದೆ
supercinelyrics.com
ನಲಿವ ಗುಲಾಬಿ ಹೂವೆ
ಮುಗಿಲಾ ಮೇಲೇರಿ ನಗುವೆ
ನಿನಗೆ ನನ್ನಲ್ಲಿ ಒಲವು
ಅರಿಯೆ ನನ್ನಲ್ಲಿ ಛಲವೋ
ನಲಿವ ಗುಲಾಬಿ ಹೂವೆ
ಒಲವೋ ಛಲವೋ ಒಲವೋ ಛಲವೊ
ಸುಮವೇ ನೀ ಬಾಡದಂತೆ
ಬಿಸಿಲಾ ನೀ ನೋಡದಂತೆ
ಸುಮವೇ ನೀ ಬಾಡದಂತೆ
ಬಿಸಿಲಾ ನೀ ನೋಡದಂತೆ
ನೆರಳಲ್ಲಿ ಸುಖದಲಿ ನಗುತಿರು ಚೆಲುವೆ
ಎಂದೆಂದು ಎಂದೆಂದು
ಇರು ನೀ ಹಾಯಾಗಿ ಹೀಗೆ
ಇರಲಿ ನನಗೆಲ್ಲ ಬೇಗೆ
ಕನಸಲಿ ನೋಡಿದ ಸಿರಿಯನು ಮರೆವೆ
ನಿನಗಾಗಿ ನನಗಾಗಿ
ಕನಸಲಿ ನೋಡಿದ ಸಿರಿಯನು ಮರೆವೆ
ನಿನಗಾಗಿ ನನಗಾಗಿ ನಿನಗಾಗಿ ನನಗಾಗಿ
supercinelyrics.com
ನಲಿವ ಗುಲಾಬಿ ಹೂವೆ
ಮುಗಿಲಾ ಮೇಲೇರಿ ನಗುವೆ
ನಿನಗೆ ನನ್ನಲ್ಲಿ ಒಲವು
ಅರಿಯೆ ನನ್ನಲ್ಲಿ ಛಲವೋ
ನಲಿವ ಗುಲಾಬಿ ಹೂವೆ
ಒಲವೋ ಛಲವೋ ಒಲವೋ ಛಲವೊ