Meetadene Veene song credits :
Song | Meetadene Veene |
Singers | Rajesh Krishnan |
Lyrics | Yogaraj Bhat |
Movie | Karataka Damanaka |
Music | Rajesh Krishnan |
Label | Anand audio |
Meetadene Veene song lyrics in kannada :
ಮೀಟದೇನೆ ವೀಣೆಯೊಂದು ಸಾಂಗ್ ಲಿರಿಕ್ಸ್
ಮೀಟದೇನೆ ವೀಣೆಯೊಂದು ಟೊಂಯ್ಯ್ ಅನಬಹುದೆ
ಇದು ಎಂಥ ಹಂಬಲ.. ಪದವೊಂದ ಪುಂಗಲ..
ಸುಮ್ಮನಿರದೆ ಕುನ್ನಿ ಹೃದಯ ಕುಂಯ್‌ಗುಡಬಹುದೆ
ಇವಳ್ಯಾವ ಸಿಂಡ್ರೆಲಾ..? ಇವಳನ್ನು ನಂಬಲಾ..?
ಒಂದೊಂದಾಗಿ ಆಚೆ ಬಂದ್ವು ಆಸೆ
ಒಸಿ ಸೊಂಟ ಗಿಲ್ಲಲಾ..? ಖುಷಿ ಹಂಚಿಕೊಳ್ಳಲಾ..?
ಶೇವಿಂಗ್ ಮಾಡ್ಲೇಬಾರ್ದಾಗಿತ್ತು ಮೀಸೆ
ಮುಖವೆಲ್ಲ ಕಿಲಕಿಲ ಮೈಯೆಲ್ಲ ಮುಲ ಮುಲ
ಹೇಳಂಗಿಲ್ಲ ಬಿಡಂಗಿಲ್ಲ ಹೇಳಂಗಿಲ್ಲ ಬಿಡಂಗಿಲ್ಲ
ಮೀಟದೇನೆ ವೀಣೆಯೊಂದು ಟೊಂಯ್ಯ್ ಅನಬಹುದೆ
ಸಂಗೀತ ಕಲಿಯುವ ಬಯಕೆ
BUT ಯಾಕೋ ಏನೋ ಸ್ವಲ್ಪ ಸಂಕೋಚ
ನಂಗಂತೂ ತಿಳಿದಿರಲಿಲ್ಲ
ಸುಟ್‌ಕೊಳ್ಳೋದ್ರಲ್ಲೂ ಇದೆ ಸಂತೋಷ
ನನ್ನ ಕಥೆ ಹೇಳಲೇ ಮಡಿಲಲಿ ಮಲಗಿ
ಕಣ್ಣು ಮುಚ್ಚಿ ಹೋಗೇಬಿಡಲೆ ಸೆರಗಲಿ ಕರಗಿ
ಬಂದಿರ್ಬೊದು ನಂಗೂ ಚೈತ್ರ ಕಾಲ
ನಾ ಚಿಗುರು ಒಡೆಯಲ..? ಬರಿ ಉಗುರು ಕಡಿಯಲ..?
ನಾನೇ ಒಂದು ದೊಡ್ಡ ದಾಸವಾಳ
ನನ್ನನ್ನು ಮುಡಿವಳ..? ಸೈಡಲ್ಲಿ ಇಡುವಳ..?
ಹೇಳಂಗಿಲ್ಲ ಬಿಡಂಗಿಲ್ಲ ಹೇಳಂಗಿಲ್ಲ ಬಿಡಂಗಿಲ್ಲ
ಮೀಟದೇನೆ ವೀಣೆಯೊಂದು ಟೊಂಯ್ಯ್ ಅನಬಹುದೆ
ಇದು ಎಂಥ ಹಂಬಲ..ಪದವೊಂದ ಪುಂಗಲ..
ಸುಮ್ಮನಿರದೆ ಕುನ್ನಿ ಹೃದಯ ಕುಂಯ್‌ಗುಡಬಹುದೆ
ಇವಳ್ಯಾವ ಸಿಂಡ್ರೆಲಾ..? ಇವಳನ್ನು ನಂಬಲಾ..?