Kanmani Anbodu lyrics in Kannada

Kanmani Anbodu original song credits :

SongKanmani Anbodu Kadhalan 
SingersKamal Haasan & S. Janaki
LyricsVaali
MovieGuna Tamil Movie
MusicIlaiyaraja

Kanmani Anbodu Kannada song credits :

SongKanmani Anbodu Kadhalan 
SingersShalini SR
LyricsShalini SR
Movie
MusicIlaiyaraja

Kanmani Anbodu Kadhalan song Lyrics in Kannada :

ಕಣ್ಮರೆ ಆದಂತೆ ನಟಿಸಲೇ ನಾ ನಿನ್ನೊಂದಿಗೆ
ಕೊಂಚವೇ ಕಾಡಿಬಿಡುವ ಆಸೆಗೆ ನೀಡು ಒಂದು ಒಪ್ಪಿಗೆ
ನಾನೆಂದೋ ಬರೆದ ಈ ಕವಿತೆ ಸಾಲಿಗೆ
ನೀ ಬಂದೆ ರಾಗದಂತೆ ಈಗ ಮೆಲ್ಲಗೆ

ನೀ ಬರುವ ದಾರಿಯಲ್ಲಿ ನಿನ್ನನ್ನು ನೋಡಲೆಂದೇ
ಹೂಡಿಬಿಡುವೆ ನಾನೊಂದು ಬಿಡಾರ
ಏನೆಂದು ಕೇಳು ಬೇಗ ನಾನೆಲ್ಲ ಹೇಳಿಬಿಡುವೆನು
ಕಣ್ಣಲ್ಲೇ ಈ ಪ್ರೀತಿ ವಿಚಾರ

ನಾ ಕಳಿಸಿದಂಥ ಮನವಿ ನಿನ್ನನ್ನು ತಲುಪಿತೆಂದು
ಹೇಗೆ ತಿಳಿಯಲಿ?
ನಿನ್ನಿಂದ ಬರುವ ಒಂದು ಉತ್ತರಕ್ಕೆ ನಾನು
ಎಷ್ಟು ಕಾಯಲಿ?
ನಿನದೇ ನನ್ನ ಜಗವು ನನಗೆ ನೀನು ವರವು
ಇದನು ಹೇಗೆ ಕೂಗಿ ಹೇಳಲಿ?

ನಿನ್ನದೇ ಆಲಾಪ ಈಗಲೂ ಕೇಳುತಿಹುದು ಮನದಲಿ
ಸ್ವಪ್ನವೇ ಸಾಕಾರ ಆದಹಾಗೆ ನೀನಿರಲು ಜೊತೆಯಲಿ
ನೀನೊಮ್ಮೆ ಆಲಿಸು ಮನದ ಕಿರುದನಿ
ಸದ್ದಿರದೇ ಮೂಡಿದ ಪ್ರತಿಧ್ವನಿ

1 thought on “Kanmani Anbodu lyrics in Kannada”

Leave a Comment

Contact Us