Aakaasha gadiya daati song details :
Song | Aakaasha gadiya daati |
Singers | Vijayalaxmi Mettinahole |
Lyrics | Kinnal Raj |
Movie | Salaar |
Music | Ravi Basrur |
Label | Hombale Films |
Aakaasha gadiya daati lyrics in Kannada :
ಆಕಾಶ ಗಡಿಯ ದಾಟಿ
ತಂದಾನೋ ಬೆಳಕು ಕೋಟಿ
ಭೂಮಿ ಕುಲಕ್ಕೆ ಕೇಳದೇನೆ
ಜೀವ ಕೊಟ್ಟಂತೆ….
ಕಣ್ಣ ಕಾಯೋ ರೆಪ್ಪೆ ಅವನೇ
ಕಾವಲಾದಂತೆ…
ಮೋಡನಾ ಮಳೆಯ ಮಾಡಿ
ನೂರಾರು ಹನಿಯಾ ಕೂಡಿ
ಕಾದ ನೆಲಕ್ಕೆ ಮುತ್ತನ್ನಿಡುವ
ಜೀವ ಹನಿಯಂತೆ
ಬೆನ್ನ ಹಿಂದೆ ಕಾಣದಂತಹ ಸೈನ್ಯ ನಿಂತಂತೆ
ಖಡ್ಗ ಇವನಂತೆ
ಕಡುಕೋಪ ಅವನಂತೆ
ಇವ ಕಿಂಕರ ಅವ ಭಯಂಕರ
ಕಲಹ ಕದನನೇ….
ಶಕ್ತಿ ಇವನು ಸೈನ ಅವನು…
ಎದುರು ನಿಂತರೆ ಸಮರವೇ…
ಸ್ವಾರ್ಥವಿಲ್ಲದೆ ಪ್ರೀತಿ ಹಂಚುವ
ಸ್ನೇಹ ಮೆರಬೇಕು ನೂರ್‌ಕಾಲ ನಿಲ್ಲಬೇಕು
ಇಬ್ಬರೊಂದಾಗಿ
ರಣರಂಗ ನಡಗುತ್ತಿದೆ
ಶತ್ರು ಇವನು, ಮೃತ್ಯು ಅವನು
ಪ್ರಳಯ ಭೂಮಿನೇ…
ಅಗ್ನಿ ಇವನು ಜ್ವಾಲೆ ಅವನು
ಹಗೆಯು ಸುಳಿದರೆ ರೌದ್ರವೇ…
ಸ್ವಾರ್ಥವಿಲ್ಲದೆ ಪ್ರೀತಿ ಹಂಚುವ
ಸ್ನೇಹ ಮೆರಿಬೇಕು ನೂರ್ಕಾಲ ನಿಲ್ಲಬೇಕು
ಆಕಾಶ ಗಡಿಯ ದಾಟಿ
ತಂದನೋ ಬೆಳಕು ಕೋಟಿ
ಭೂಮಿ ಕುಲಕ್ಕೆ ಕೇಳದನೇ ಜೀವ ಕೊಟ್ಟಂತೆ
ಕಣ್ಣ ಕಾಯೋ ರೆಪ್ಪೆ ಅವನೇ ಕಾವಲಾದಂತೆ