Krishnam Pranaya Sakhi Movie Dwapara Lyrical Song Sung by: Jaskaran Singh Lyrics: Dr.V.Nagendra Prasad Music by: Arjun Janya Starring: Golden star Ganesh, Malvika Nair & Others
Dwapara song details :
Song | Dwapara |
Singers | Jaskaran Singh |
Lyrics | Dr.V.Nagendra Prasad |
Movie | Krishnam Pranaya Sakhi |
Music | Arjun Janya |
Label | Anand Audio |
Dwapara kannada song lyrics in Kannada :
ದ್ವಾಪರ ಸಾಂಗ್ ಲಿರಿಕ್ಸ್
ದ್ವಾಪರ ದಾಟುತ
ನನ್ನನೇ ನೋಡಲು
ನನ್ನನೇ ಸೆರಲು
ಬಂದ ರಾಧಿಕೆ..
ಹಾಡಲಿ ಹಾಡಲು ಮಾತಲಿ ಹೇಳಲು ಸಾಧ್ಯವೇ ಇಲ್ಲದ ರಾಗ ಮಾಲಿಕೆ
ಸಖಿ ಸಖಿ ನನ್ನ ರೂಪಸಿ
ಸುಖಿ ಸುಖಿ ನಿನ್ನ ಮೋಹಿಸಿ
ನೀನೆ….ನನ್ನ ಪ್ರೇಯಸಿ
ಜೇನ ಧನಿಯೋಳೆ ಮೀನ ಕಣ್ಣೋಳೆ
ಸೊಬಗೇ ಮೈತುಂಬಿದೆ
ಹಂಸ ನಡೆಯೋಳೆ ಎದೆಗೆ ಇಳಿದೋಳೆ
ಜೀವ ಝಲ್ ಎಂದಿದೆ
ಬೇರೆ ದಾರೀನೆ ಇಲ್ಲ ನನಗಿನ್ನು
ನೀನು ಸಿಕ್ಕಾಗಿದೆ
ನಾನು ಹುಡುಕಿದ್ದ ನನ್ನ ನಿಲ್ದಾಣ
ನೀನೆ ಇನ್ನೇನಿದೆ
ನಿಹಾರಿಕ ಆಕರ್ಷಿಕ ಅನಾಮಿಕ ಹೆಸರೇನೆ ವೆರೊನಿಕಾ ಶಿಫಾಲಿಕ
ಇವಾಂಶಿಕ ನೀನೇನೇ…
(music)
ಅರಳದ ಸುಮಗಳ ಅರಳಿಸುವವಳು
ಕುಸುಮಗಳಂತ ಬೆರಳು
ಚೆಂಮಲ್ಲಿಗೆಯಂತಿವೆ ಬೆರಳು
ಗಿಳಿಗಳ ಬಳಗಕೆ ಸರಿಗಮ ಕಲಿಸುವ
ಇನಿಧನಿ ಜಿನುಗೊ ಕೊರಳು
ಬಲು ವಿಸ್ಮಯ ನಿನ್ನ ಕೊರಳು
ಸೌಂದರ್ಯದಲ್ಲಿ ಗಾಂಭೀರ್ಯವಂತೆ
ಆಂತರ್ಯದಲ್ಲಿ ಓದಾರ್ಯವಂತೆ
ನೀನೆನೆ ನನ್ನ ಪ್ರೇಯಸಿ
supercinelyrics.com
ಪಾದ ಪದ್ಯಾನ ಬರೆದ ಹಾಗಿರುವ
ಹೆಜ್ಜೆಯ ಮುದ್ರೆಯೂ…
ನಿನ್ನ ನಡೆ ಕಂಡು ಹಿಂದೆ ಬರಬಹುದು
ತುಂಗೆಯು ಭಧ್ರೆಯೂ
ನಾನು ಶ್ರೀ ಕೃಷ್ಣ ನೀನೆ ನನ್ನ ಭಾಮೆ
ಮೂಡಿದೆ ಪ್ರೀತಿಯು
ಎಷ್ಟು ಜನ್ಮಗಳ ದಾಟಿ ಬಂದಾಯ್ತು
ಈ ಕ್ಷಣ ಸಾಕ್ಷಿಯು
ಲೀಲಾವತಿ ಶರಾವತಿ ನೀಲಾವತಿ ಹೆಸರೇನೆ..
ಗಂಗಾವತಿ ತುಂಗಾವತಿ ನೇತ್ರಾವತಿ ನೀನೇನೆ..
ನೀ ನಕ್ಕರೆ ಸಕ್ಕರೆ ಅರೆರೆ ಎಂದು
ಬ್ರಹ್ಮನಿಗೂನು ಬೆರಗು
ನೀನೆಂದರೆ ಬೆರಗಿಗೂ ಬೆರಗು
ಬರೆದರೆ ಮುಗಿಯದು ಪದದಲಿ ಸಿಗದು
ರತಿಯರಿಗಿಂತ ಸೊಬಗು.
ಮೈ ಮಾಟವೆ ಮೋಹಕ ಸೊಬಗು
ಲಾವಣ್ಯ ನೋಡಿ ನಾ ಧನ್ಯನಾದೆ
ತಾರುಣ್ಯ ಮೋಡಿ ಹೀಗಾಗಿ ಹೋದೆ
ನೀನೆ ನನ್ನ ಪ್ರೇಯಸಿ..
ಜೇನ ಧನಿಯೋಳೆ ಮೀನ ಕಣ್ಣೋಳೆ
ಸೊಬಗೇ ಮೈತುಂಬಿದೆ
ಹಂಸ ನಡೆಯೋಳೆ ಎದೆಗೆ ಇಳಿದೋಳೆ
ಜೀವ ಝಲ್ ಎಂದಿದೆ
ಬೇರೆ ದಾರೀನೆ ಇಲ್ಲ ನನಗಿನ್ನು
ನೀನು ಸಿಕ್ಕಾಗಿದೆ
ನಾನು ಹುಡುಕಿದ್ದ ನನ್ನ ನಿಲ್ದಾಣ
ನೀನೆ ಇನ್ನೇನಿದೆ