Maathu sothu song credits :
Song | Maathu sothu |
Singers | Armaan Malik |
Lyrics | Yogaraj Bhat |
Movie | Kotee |
Music | Vasuki Vaibhav |
Label | Saregama |
Maathu sothu song lyrics in kannada :
ಮಾತು ಸೋತು ಸಾಂಗ್ ಲಿರಿಕ್ಸ್
ಬಾಯಿಗೆ ಬರದೆ ಮಾತು
ತುದಿ ನಾಲಿಗೆ ಕೂತಿದೆ ಸೋತು
ಬಾಯಿಗೆ ಬರದೆ ಮಾತು
ತುದಿ ನಾಲಿಗೆ ಕೂತಿದೆ ಸೋತು
ಕದ್ದು ಮುಚ್ಚಿ ಕಳ್ಳ ಹೃದಯವು
ಕುಣಿತ ಕಲಿತಿದೆ
ಸದ್ದಿಲ್ಲದೆ ನೆನಪುಗಳದೆ ಗಣಿತ ನಡೆದಿದೆ
ನೀನೆಂದರೆ ನಂಗಂತು ಪ್ರಾಣ
ಇದ ಹೇಳೋಕೆ ಸಾಲದು ತ್ರಾಣ
ಸಖಿಯೆ ಸಖಿಯೆ ಮಾತನಾಡೋದು ಹೇಗಂತ ಹೇಳಿ ಕೊಡು
ಸಖಿಯೆ ಸಖಿಯೆ ನನ್ನ ಕಣ್ಣನ್ನ ನೀನಾಗೆ ಓದಿ ಬಿಡು
ಸಖಿಯೆ ಸಖಿಯೆ ಮಾತನಾಡೋದು ಹೇಗಂತ ಹೇಳಿ ಕೊಡು
ಸಖಿಯೆ ಸಖಿಯೆ ನನ್ನ ಕಣ್ಣನ್ನ ನೀನಾಗೆ ಓದಿ ಬಿಡು
ಬಾಯಿಗೆ ಬರದೆ ಮಾತು
ತುದಿ ನಾಲಿಗೆ ಕೂತಿದೆ ಸೋತು
ಓ… ಬಾಯಿಗೆ ಬರದೆ ಮಾತು
ತುದಿ ನಾಲಿಗೆ ಕೂತಿದೆ ಸೋತು
supercinelyrics.com
ಓ ನಡುಬೀದಿಯಲಿ ಕೂಗಿ
ಕರೆಯುವೆ ನಿನ್ನ
ಮರೆಯಾಗುವೆನು ನೀನು
ತಿರುಗುವ ಮುನ್ನ
ಸೋಕುತ್ತ ನಿನ್ನಯ ನೆರಳನು
ಮುದ್ದಾಡಿಕೊಳ್ಳುವೆ ಬೆರಳನು
ಕೋಟಿ ಕನಸು ಕಾಡಿವೆ
ಈ ಮೌನ ಬಲೂ ಭಾರ
ಇದಕೇನು ಪರಿಹಾರ
ಬರೀ ಏಕಾಂಗಿ ನನ್ನದು ಗಾನ
ಎಲ್ಲೆಲ್ಲಿಗೂ ಹೋಗದ ಯಾನ
ಸಖಿಯೆ ಸಖಿಯೆ ಚೂರು ನನ್ನನು ನೋಡುತ ನಕ್ಕು ಬಿಡು
ಸಖಿಯೆ ಸಖಿಯೆ ಸವಿ ಮಾತೊಂದ ನಿನ್ನಿಂದ ಹೆಕ್ಕಿ ಕೊಡು
ಸಖಿಯೆ ಸಖಿಯೆ ಚೂರು ನನ್ನನು ನೋಡುತ ನಕ್ಕು ಬಿಡು
ಸಖಿಯೆ ಸಖಿಯೆ ಸವಿ ಮಾತೊಂದ ನಿನ್ನಿಂದ ಹೆಕ್ಕಿ ಕೊಡು
ಬಾಯಿಗೆ ಬರದೆ ಮಾತು
ತುದಿ ನಾಲಿಗೆ ಕೂತಿದೆ ಸೋತು
ಬಾಯಿಗೆ ಬರದೆ ಮಾತು
ತುದಿ ನಾಲಿಗೆ ಕೂತಿದೆ ಸೋತು
ಕೊನೆಗೂ ಪದವೇ ಸಿಗದೆ ಸೋತೆ
ನಾನು ಸೋತೆ..
ಹಣೆಯ ಬೆವರು ನೂರು ಮಾತಾಡಿದೆ
ನೀನೆ ಹೇಳು ನನಗೆ ಏನಾಗಿದೆ