Ninade nenapu song details :
- Song : Ninade nenapu
- Singer : Vasuki Vaibhav
- Lyrics : Vyshak Varma
- Movie : Hosa dinachari
- Music : Vyshak Varma
- Label : Anand audio
Ninade nenapu lyrics in kannada
ನಿನದೆ ನೆನಪು ಸಾಂಗ್ ಲಿರಿಕ್ಸ್
ಕನಸೊ ಇದು ನನಸೊ
ನಾನರಿಯೆ ಸಖಿಯೇ
ಕಥೆಯೊಂದು ಕೊನೆಯಾಗಿದೆ
ನೀನಲ್ಲಿ ನಾನಿಲ್ಲಿ ಏಕಾಂತದಿ
ಕ್ಷಣಕೂಡ ಯುಗವಾಗಿದೆ
ಹಿಂತಿರುಗಿ ಬಾ ನೀನು ತಡವಾಗಿದೆ
ನಿಂತಿರುವೆ ದಾರಿ ತೋರದೆ
ಬೆಳಕನ್ನು ಮರೆಮಾಡಿ ಇರುಳಾಗಿದೆ
ಕ್ಷಮೆಯೋಲೆ ಬರೆದಾಗಿದೆ
ನಿನದೇ ನೆನಪು ನಾ ಎಲ್ಲೇ ಹೋದರು
ನಿನ್ನ ಗುರುತಾ ನಾ ಅಳಿಸಲಾರೆನು
ನನ್ನ ಮರೆತು ನೀ ಎಲ್ಲೇ ಇದ್ದರು
ಕೊನೆಯವರೆಗೂ ನನ್ನುಸಿರೆ ನೀನು
ಸುಡುವ ವಿರಹ ಸಾಕಾಗಿದೆ
ನಿನ್ನ ಒಲವೇ ಬೇಕಾಗಿದೆ
ಒಲವೇ ನನ್ನೊಲವೇ
ನಾ ಕಾಣೋ ಜಗವೆಲ್ಲಾ ಗುತ್ತಾಗಿದೆ
ಕಣ್ಣಿದ್ದು ಕುರುಡಾಗಿದೆ
ಕೂಡಿಟ್ಟ ಆಸೆಗಳೆ ಕಳುವಾಗಿದೆ
ಇನ್ನೆಂದೂ ಸಿಗಲಾರದೇ
ಬರೆದ ಮೊದಲ ಪುಟ ಸುಳ್ಳಾಯಿತೇ
ಭರವಸೆಯು ಮುಳ್ಳಾಯಿತೇ
ತಂಪಾದ ತಂಗಾಳಿ ಬಿಸಿಯಾಗಿದೆ
ನೋಡೊಮ್ಮೆ ಬರಬಾರದೇ
supercinelyrics.com
ನಿನದೇ ನೆನಪು ನಾ ಎಲ್ಲೇ ಹೋದರು
ನಿನ್ನ ಗುರುತಾ ನಾ ಅಳಿಸಲಾರೆನು
ನನ್ನ ಮರೆತು ನೀ ಎಲ್ಲೇ ಇದ್ದರು
ಕೊನೆಯವರೆಗೂ ನನ್ನುಸಿರೆ ನೀನು
ಧನಿಯೇ ಇರದ ಹಾಡೇತಕೆ
ನೀನೆ ಇರದ ಬದುಕು ಇನ್ನೇತಕೆ
ಒಲವೇ ನನ್ನೊಲವೇ…..
ನಿನಗಾಗಿ ಕಾಯುವೆನು ಎಲ್ಲಾ ಮರೆತು ಬಿಗಿಯಾಗಿ ಹಿಡಿದಿಟ್ಟು
ನನ್ನ ಹುರುಪು
ಕೊನೆ ಇರದ ಕವನವು ನೀ
ನನ್ನ ಬಾಳಲಿ
ಸರಿಸಾಟಿ ನಿನಗೆಲ್ಲಿ
ನಿನದೇ ನೆನಪು ನಾ ಎಲ್ಲೇ ಹೋದರು
ನಿನ್ನ ಗುರುತಾ ನಾ ಅಳಿಸಲಾರೆನು
ನನ್ನ ಮರೆತು ನೀ ಎಲ್ಲೇ ಇದ್ದರು
ಕೊನೆಯವರೆಗೂ ನನ್ನುಸಿರೆ ನೀನು
ಸುಡುವ ವಿರಹ ಸಾಕಾಗಿದೆ
ನಿನ್ನ ಒಲವೇ ಬೇಕಾಗಿದೆ
ಒಲವೇ ನನ್ನೊಲವೇ
ನನ್ನೊಲವೇ….
ನನ್ನೊಲವೇ….
ನನ್ನೊಲವೇ….