Maleyali minda song details :
- Song : Maleyali minda
- Singer : Vishal Dadlani
- Lyrics : A P Arjun
- Movie : Andar Bahar
- Music : Vijay Prakash
- Label : A2 music
Maleyali minda lyrics in kannada
ಮಳೆಯಲಿ ಮಿಂದ ಹೂವಿನ ಹಾಗೆ
ಮಿನುಗುವೆ ಏಕೆ ನನ್ನೊಲವೇ
ಕನಸಲಿ ಕಂಡ ದೇವರ ಹಾಗೆ
ಸೆಳೆಯುವೆ ಏಕೆ ನನ್ನೊಲವೇ
ಹೃದಯದ ಮಾತು ಆಲಿಸು ಪೂರ
ಕಂಪಿಸುವಾಗ ಈ ಕೊರಳು
ಚಿಂತೆಯು ಕೂಡ ನಿಂತಿದೆ ದೂರ
ಜೊತೆಯಲಿ ಜೀವವೆ ನೀನಿರಲು
ಮಳೆಯಲಿ ಮಿಂದ ಹೂವಿನ ಹಾಗೆ
ಮಿನುಗುವೆ ಏಕೆ ನನ್ನೊಲವೇ
supercinelyrics.com
ನಿನ್ನಯ ರೂಪದ ರೇಖೆಯಲಿ
ಉಸಿರಿನ ಬಣ್ಣ ತುಂಬುವೆನು
ನನ್ನನು ನಾನೇ ನಂಬದೆಯೇ
ಕೇವಲ ನಿನ್ನನೆ ನಂಬುವೆನು
ನಗೆಹೂವನು ಮುಡಿಸುತ ಈ ಕ್ಷಣವೇ
ಶುರುವಾಗಿಯೆ ಹೋಯುತು ಜೀವನವೇ
ಓ ನೀನಿರೊ ತನಕ ನಾನಿರುವೆ
ಮಳೆಯಲಿ ಮಿಂದ ಹೂವಿನ ಹಾಗೆ
ಮಿನುಗುವೆ ಏಕೆ ನನ್ನೊಲವೇ
ಮೈಮನದಲ್ಲಿ ಸಡಗರವ
ಬಚ್ಚಿಡಲಾಗದೆ ಸೋತಿರುವೆ
ನಿನ್ನಯ ಹಾಡಿನ ಸಾಲಿನಲಿ
ಅಚ್ಚರಿಯಿಂದಲೆ ಕೂತಿರುವೆ
ನಿನ್ನ ರೂಪವ ತಾಳುತ ಈ ಜಗವು
ಅಪರೂಪದ ಸುಂದರ ಸೋಜಿಗವು
ನೀನಿರುವಲ್ಲೇ ನಾನಿರುವೆ
supercinelyrics.com
ಮಳೆಯಲಿ ಮಿಂದ ಹೂವಿನ ಹಾಗೆ
ಮಿನುಗುವೆ ಏಕೆ ನನ್ನೊಲವೇ
ಕನಸಲಿ ಕಂಡ ದೇವರ ಹಾಗೆ
ಸೆಳೆಯುವೆ ಏಕೆ ನನ್ನೊಲವೇ
ಹೃದಯದ ಮಾತು ಆಲಿಸು ಪೂರ
ಕಂಪಿಸುವಾಗ ಈ ಕೊರಳು
ಚಿಂತೆಯು ಕೂಡ ನಿಂತಿದೆ ದೂರ
ಜೊತೆಯಲಿ ಜೀವವೆ ನೀನಿರಲು….