I love you song details :
- Song : I love you
- Singer : Sonu Nigam
- Lyrics : Shashank
- Movie : Moggina manasu
- Music : Mano Murthy
- Label : Anand audio
I love you lyrics in kannada
I love you…ಓ….
I love you…
ನೂರಾರು ಪ್ರೀತಿ ಮಾತು
ನೂರಾರು ಸಾರಿ ಆಡಿ
ನೀನೇನೆ ಜೀವ ಎಂದು
ನೂರಾರು ಆಣೆ ಮಾಡಿ
ಕಾರಣವೇ ಹೇಳದೆ ಏಕೆ ನನ್ನ ಬಿಟ್ಟು ಹೋದೆ
ನೀನೆಲ್ಲೇ ಹೋದರು ಏನು ನೀನನ್ನ ಮರೆತರು ಏನು
ನೀನೇನೆ ಮಾಡಿದರೇನು ನಿನ್ನನ್ನೇ ಮರೆಯುವೆಯೇನು
ನಿನ್ನಲ್ಲೇ ನಾನು ಅವಿತು ಕುಳಿತಿಲ್ಲವೇನು….
I love you..
I love you..
ನೀನು ಇರದೇ ಬದುಕುವುದನ್ನು ಕಲಿಯೋ ಸಾಹಸದಲ್ಲಿ
ನಿನ್ನ ನೆನಪೆ ಎದುರು ನಿಂತು ಸೋತಿಹೆ ನಾನು ಇಲ್ಲಿ
supercinelyrics.com
ನೀನು ಇರದೇ ಬದುಕುವುದನ್ನು ಕಲಿಯೋ ಸಾಹಸದಲ್ಲಿ
ನಿನ್ನ ನೆನಪೆ ಎದುರು ನಿಂತು ಸೋತಿಹೆ ನಾನು ಇಲ್ಲಿ
ಬಿಟ್ಟು ಹೋದ ಆ ಘಳಿಗೆ ನೆನೆದು ನೆನೆದು ಈ ಘಳಿಗೆ
ಜಾರುವ ಕಂಬನಿ ಜಾರಲು ಬಿಟ್ಟು ಸುಮ್ಮನೆ ಹಾಗೆ ಕೂತಿರುವೆ…
I love you..
I love you..
ನನ್ನೆದೆ ಗುಡಿಯ ನಂದಾದೀಪ ಆರಿಸಿ ಹೋದೆ ನೀನು
ಕತ್ತಲೆ ಕೋಣೆಯ ಒಳಗೂ ನಿನ್ನ ನೆನಪಲೆ ಬೆಂದೆ ನಾನು
ನನ್ನೆದೆ ಗುಡಿಯ ನಂದಾದೀಪ ಆರಿಸಿ ಹೋದೆ ನೀನು
ಕತ್ತಲೆ ಕೋಣೆಯ ಒಳಗೂ ನಿನ್ನ ನೆನಪಲೆ ಬೆಂದೆ ನಾನು
ದೂರ ಹೋದೆ ನೀನೆಂದು ದೂರಲಾರೆ ನಿನ್ನೆಂದು
ನಿನ್ನ ನೆನಪ ಬಂಧನದಲ್ಲೇ ಸಾಯೋವರೆಗು ಕಾಯುವೆನು…
I love you..
I love you…
ನೂರಾರು ಪ್ರೀತಿ ಮಾತು
ನೂರಾರು ಸಾರಿ ಆಡಿ
ನೀನೇನೆ ಜೀವ ಎಂದು
ನೂರಾರು ಆಣೆ ಮಾಡಿ
ಕಾರಣವೇ ಹೇಳದೆ ಏಕೆ ನನ್ನ ಬಿಟ್ಟು ಹೋದೆ
ನೀನೆಲ್ಲೇ ಹೋದರು ಏನು ನೀನನ್ನ ಮರೆತರು ಏನು
ನೀನೇನೆ ಮಾಡಿದರೇನು ನಿನ್ನನ್ನೇ ಮರೆಯುವೆಯೇನು
ನಿನ್ನಲ್ಲೇ ನಾನು ಅವಿತು ಕುಳಿತಿಲ್ಲವೇನು….
I love you..
I love you..