Mounave Chenna lyrics in kannada – Veeram

Mounave Chenna song details :

  • Song : Mounave Chenna
  • Singer : Nihal Tauro
  • Lyrics : Kaviraj
  • Movie : Veeram
  • Music : J Anoop Seelin
  • Label : Anand audio

Mounave Chenna lyrics in kannada :

ಮೌನವೆ ಚೆನ್ನ ಸಾಂಗ್ ಲಿರಿಕ್ಸ್

ಮೌನವೇ ಚೆನ್ನ
ಅರೆ ಮಾತು ಯಾಕಿನ್ನ
ಸೋತೆನು ನನ್ನ ಪದೇ ಪದೇ ನೋಡುತ ನಿನ್ನ
ಕಣ್ಣೊಳಗೆ ಈಗ ನೀನಿರುವಾಗ
ಇರದು ಕನಸಿಗೆ ಜಾಗ

ಮೌನವೇ ಚೆನ್ನ
ಅರೆ ಮಾತು ಯಾಕಿನ್ನ
ಜೊತೆಗೆ ಹೆಜ್ಜೆ ಹಾಕೋ ಘಳಿಗೆ
ಜಗವೇ ಕಾಲ್ಕೆಳಗೆ
ತರಲೆ ಅನ್ನೋ ಪದವಿಯನ್ನ ಬೇಗ ಕೊಡು ನೀ ನಂಗೆ
ನಿನ್ನದೆ ಪರಿಣಾಮ ನೋಡು ಎದೆಯಲಿ ಹೊಸ ಹೊಸ ಹಾಡು
ತೀರಿಸೋಕೆ ಇದೆ ಸಿಹಿ ಸೇಡು
supercinelyrics.com

ಮೌನವೇ ಚೆನ್ನ
ಅರೆ ಮಾತು ಯಾಕಿನ್ನ
(music)
ನಿಜವೋ ಭ್ರಮೆಯೋ ನೋಡುತೀನಿ ನನ್ನೇ ತುಸು ಚಿವುಟಿ
ಜೊತೆಗೆ ಇರಲು ಈಗ ನಿನ್ನ ನೆರಳ ಜೊತೆ ಪೈಪೋಟಿ
ಸುಮ್ಮನೆ ಸುಳಿದಾಗ ನೀನು
ಗಮ್ಮನೆ ಪರಿಮಳವೇನು
ಮೆಲ್ಲ ಮೆಲ್ಲ ಪರವಶ ನಾನು

ಮೌನವೇ ಚೆನ್ನ
ಅರೆ ಮಾತು ಯಾಕಿನ್ನ
ಸೋತೆನು ನನ್ನ ಪದೇ ಪದೇ ನೋಡುತ ನಿನ್ನ
ಕಣ್ಣೊಳಗೆ ಈಗ ನೀನಿರುವಾಗ
ಇರದು ಕನಸಿಗೆ ಜಾಗ

Mounave Chenna song video :

Leave a Comment

Contact Us