Hoovina Baanadante lyrics ( ಕನ್ನಡ ) – Birugaali

Hoovina Baanadante song details :

  • Song : Hoovina Baanadante
  • Singer : Shreya Ghoshal
  • Lyrics : Jayanth Kaikine
  • Movie : Birugaali
  • Music : Arjun
  • Label : Alpha Digital

Hoovina Baanadante lyrics in kannada

ಹೂವಿನ ಬಾಣದಂತೆ ಯಾರಿಗೂ ಕಾಣದಂತೆ
ಹಾಡಿನ ಸಾಲಿನಲ್ಲಿ ಮೂಡುವ ಪ್ರಾಣದಂತೆ
ಶೀತಲವಾದೆ ನೀನು…..

ಹೂವಿನ ಬಾಣದಂತೆ ಯಾರಿಗೂ ಕಾಣದಂತೆ
ಹಾಡಿನ ಸಾಲಿನಲ್ಲಿ ಮೂಡುವ ಪ್ರಾಣದಂತೆ
ಶೀತಲವಾದಂತೆ ನೀನೆ ನೀನು
ನೂತನಳಾದಂತೆ ನಾನೇ ನಾನು
ನೀ ಬಂದ ಮೇಲೆ ಬಾಕಿ ಮಾತೇನು
ಆ……

ಸಾಲದು ಇಡಿ ದಿನ ಜರೂರಿ ಮಾತಿಗೆ
ಕಾದಿದೆ ಸದಾ ಮನ ಅಪಾರ ಪ್ರೀತಿಗೆ…
ಓ….
ಮಾಡಬೇಕಿಲ್ಲ ಆಣೆ ಗೀಣೆ
ಸಾಕು ನೀನೀಗ ಬಂದರೇನೆ
ಅಗೋಚರ…. ಅಗೋಚರ
ನಾ ಕೇಳಬಲ್ಲೆ ನಿನ್ನ ಇಂಚರ….
ಆ……

ಪ್ರೀತಿಯ ನಿರೂಪಣೆ ಇದೀಗ ಮಾಡಿದೆ
ಕಾಯಿಸಿ ಸತಾಯಿಸಿ ಅದೇಕೆ ಕಾಡಿದೆ…
ಓ…
ಸ್ವಪ್ನವ ತಂದ ನೌಕೆ ನೀನು
ಸುಪ್ತವಾದಂತ ತೀರ ನಾನು
ಅನಾಮಿಕ…… ಅನಾಮಿಕ
ಈ ಯಾಣಕ್ಕೀಗ ನೀನೆ ನಾವಿಕ…..
ಆ……

Hoovina Baanadante song video :

Leave a Comment

Contact Us