Goodu Toredaga lyrics ( ಕನ್ನಡ ) – Hondisi Bareyiri

Goodu Toredaga song details :

  • Song : Goodu Toredaga
  • Singer : Siddhant Sunder
  • Lyrics : Hrudaya Shiva
  • Movie : Hondisi Bareyiri
  • Music : Joe Costa
  • Label : Sunday Cinema’s

Goodu Toredaga lyrics in kannada

ಗೂಡು ತೊರೆದಾಗ
ಹಕ್ಕೀಗೆ ದಿಕ್ಕು ಯಾರು..?
ರೆಕ್ಕೆ ಮುರಿದಾಗ
ಕನಸೆಲ್ಲಾ ನುಚ್ಚು ನೂರು..
ಲೋಕವೆಲ್ಲ ಸುಂದರ
ನನ್ನ ಬಾಳು ಪಂಜರ
ಏಕಾಂಗಿ ಸಂಚಾರಿ
ನಾನಿಲ್ಲಿ ಗುರಿ ಎಲ್ಲಿದೆ
ಬಡಪಾಯಿ ಬದುಕಿಂದು
ಜೀವಂತ ಸುಡುಗಾಡ ಸಂತೆ
ನೀರವ ಮೌನ ಜೊತೆ ಯಾಯಿತೆ.?
ಬಡಪಾಯಿ ಬದುಕಿಂದು
ಜೀವಂತ ಸುಡುಗಾಡ ಸಂತೆ
ನೀರವ ಮೌನ ಜೊತೆ ಯಾಯಿತೆ.?

ತಿರುವುಗಳು ನೂರು
ಪಯಣವಿನ್ನು ಬಾಕಿ ಉಳಿದಿದೆ
ಗುರಿ ಮರೆತ ಯಾನ
ಕೊನೆಗೆಲ್ಲೋ ಸೇರಲೇ ಬೇಕಿದೆ
ಅಳಿಯದ ನೆನಪುಗಳಿವೆ
ತಿಳಿಯದ ಬದುಕಲಿ
ಖಾಲಿ-ಖಾಲಿ ಪುಟದಲಿ
ಏನು ತಾನೆ ಗೀಚಲಿ
ಏಕಾಂಗಿ ಸಂಚಾರಿ
ನಾನಿಲ್ಲಿ ಗುರಿ ಎಲ್ಲಿದೆ..?
ಬಡಪಾಯಿ ಬದುಕಿಂದು
ಜೀವಂತ ಸುಡುಗಾಡ ಸಂತೆ
ನೀರವ ಮೌನ ಜೊತೆ ಯಾಯಿತೆ.?
ಬಡಪಾಯಿ ಬದುಕಿಂದು
ಜೀವಂತ ಸುಡುಗಾಡ ಸಂತೆ
ನೀರವ ಮೌನ ಜೊತೆ ಯಾಯಿತೆ.?

Goodu Toredaga song video :

Leave a Comment

Contact Us