Utthare utthare lyrics ( Kannada ) – Kurukshetra – super cine lyrics

Utthare utthare – Santhosh venky , Shreya goshal Lyrics

Singer Santhosh venky , Shreya goshal

About the song

▪ Song : Utthare Utthare
▪ Movie: Munirathna Kurukshetra
▪ Singer: Santhosh Venky, Shreya Ghoshal
▪ Music Director: V Harikrishna
▪ Lyricist: Dr. V. Nagendra Prasad
▪ Music Label: Lahari Music

Utthare utthare song lyrics

ಉತ್ತರೆ.. ಉತ್ತರೆ..
ಚಂದ ನೀನು ನಕ್ಕರೆ!
ಹತ್ತಿರ ಬಂದರೆ, ಇನ್ನು ಚಂದ ಉತ್ತರೆ!

ಸುಂದರ ಚಂದಿರ ಸುಕುಮಾರ
ಮುತ್ತಲೇ ಮತ್ತಿನ ಶೃಂಗಾರ
ಏನು ಹರುಷವಿದು..

ಹೆಗಲ ಮೇಲೆ ಇಂದ್ರ-ಧನಸ್ಸು
ಹೊರುವ ಬಾಹು ಬಲದವನು
ಪ್ರಣಯ ಕೇಳಿ ಲೀಲೆಯನು..
ನಿನಗೆ ಹೇಳಿ ಕೊಡುವವನು!

ಉತ್ತರೆ.. ಉತ್ತರೆ..
ಇಂದು ನಿನ್ನ ಕೈಸೆರೆ!

ಹತ್ತಿರ ಬಂದರೆ, ಇನ್ನು ಚಂದ ಉತ್ತರೆ!

ಅಂಗವಸ್ತ್ರ ತೇಲುವಂತೆ, ಮೆಲ್ಲ ಬೀಸೋ ಕಳ್ಳ ಗಾಳಿ..
ನಲ್ಲ ನಿನ್ನ ಉಸಿರು!

ಖಡ್ಗವನ್ನೇ ಬೆವರುವಂತೆ ಮಾಡುವಂತ ಮಿಂಚುಬಳ್ಳಿ..
ನಲ್ಲೆ ನಿನ್ನ ನೋಟ!

ಧೀಮ್ಥನ.. ಧೀಮ್ಥನ..
ನರ್ತಿಸಿದೆ!
ರೋಮವು ವಿಧ-ವಿಧ
ವರ್ತಿಸಿದೆ!
ಮೋಹ ಗುರುಚತುರ..

ಎದೆಯಮೆರು ಶಿಖರದಲಿ..
ವರಗು ಬಾರೆ ಇಂದು ವದನೆ!
ಅದರ ಜೇನ ಸವಿಯುವುದೇ..
ಪರಮ ಪುಣ್ಯ ಮಂದಗಮನೆ!

ಉತ್ತರೆ.. ಉತ್ತರೆ..
ಇಂದು ನಿನ್ನ ಕೈಸೆರೆ!

ಹತ್ತಿರ ಬಂದರೆ, ಇನ್ನು ಚಂದ ಉತ್ತರೆ!

ಹಂಸಕ್ಶಿರ ಹಕ್ಕಿಯಂತೆ, ಅಂತರಂಗದಲ್ಲಿ ಇಳಿದು..
ಆಸೆ ಹೀರಿ ಸವಿದೆ!

ನಾಗ ಸಂಪಿಗೆಯ ಹಾಗೆ, ಗಂಧ ಚೆಲ್ಲಿ ದೂರವಿದ್ದು
ನನ್ನ ಕೂಗಿ ಕರೆದೆ!

ಹೋ.. ರಸಿಕನೆ ರಂಗಿನ ರಣಧೀರ!
ಮೆಚ್ಚಿದೆ ನಿನ್ನನೆ ಮನಸಾರ!
ಪಾರ್ಥವರ ಸುತನೆ..

ಜಗದ ವೀರ ಪರಿವಾರ..
ನಮದು ಕೇಳೆ ಕಮಲ ಮುಖಿ!
ಅದರ ರಾಣಿ, ಯುವ ರಾಣಿ..
ನೀನೆ ತಾನೇ ಹೃದಯ ಸಖಿ!

ಉತ್ತರೆ.. ಉತ್ತರೆ..
ಪಟ್ಟದರಸಿ ಉತ್ತರೆ..

ಉತ್ತರೆ.. ಉತ್ತರೆ..
ಚಂದ ಮುತ್ತನಿತ್ತರೆ!

Leave a Comment

Contact Us