Kannira Maduve lyrics ( Kannada ) – Yashaswini M M – Super cine lyrics

Kannira Maduve – Yashaswini M M Lyrics

Singer Yashaswini M M

About the song

▪️Album : Kannira Maduve
▪️Singer : Yashaswini MM
▪️Lyrics : Junaid Belthangady
▪️Producer : Shredhar Ambalagi
▪️Vocal Recording : Home Studio
▪️Mixing & Mastering : Yusuf Kannur
▪️Edit & Efx : Knight Wing Creation

Kannira Maduve song lyrics

ದಿನದ ಪ್ರತಿ ವೇಳೆಲು
ಮನಸ್ಸಿನ ಪ್ರತಿ ಮೂಲೆಲೂ
ಕಾಡುವ ಪ್ರಶ್ನೆ ಒಂದಿದೇ
ವಯಸ್ಸು ಮಿತಿ ಮೀರಿದೆ
ಮದುವೆಯು ಬಾಕಿ ಇದೆ
ಬಡತನ ಶಾಪ ಆಗಿದೆ
ನನ್ನಯ ಕಣ್ಣಿನ ಹನಿ
ವರದಕ್ಷಿಣೆಯ ಧ್ವನಿ
ಊರಿಡಿ ಶಬ್ಧ ಮಾಡಿದೆ

ಸಿರಿತನದ ಶೋಕಿ ಜೀವನ
ಲೋಕವ ಮೆರೆದಿದೆ
ಪಾಪದವರ ಹೆಣ್ಣು ಮಗಳು
ದೇವರ ಬೇಡಿದೆ
ಸುಖ ಸಂಸಾರ ನನಗೂ
ನೀಡಿ ಕರುಣಿಸು
ಹೆತ್ತ ತಾಯಿ ತಂದೆಯ ಮುಖದಿ
ನಗುವನು ತರಿಸು

ದಿನದ ಪ್ರತಿ ವೇಳೆಲು
ಮನಸ್ಸಿನ ಪ್ರತಿ ಮೂಲೆಲು
ಕಾಡುವ ಪ್ರಶ್ನೆ ಒಂದಿದೇ
ಮದುವೆಯು ಬಾಕಿ ಇದೆ
ಬೇಡಿಕೆ ಕೇಳುವ
ಗಂಡಿನ ಮನವೂ
ಎಷ್ಟು ಕ್ರೂರಿಯೊ
ಅರ್ಥ ಇಲ್ಲದ
ಹೆಣ್ಣು ಹೆತ್ತವರ
ಕಣ್ಣೀರ ಕಥೆಯೋ

ದಿನವೂ ಸಿಗುವ ಕೂಲಿಯಲ್ಲಿ
ಜೀವನ ಸಾಗಲು
ಹೆಣ್ಣು ಮಗಳೆ ಶಾಪವೆಂದು
ಎಲ್ಲರೂ ಹೇಳಲು
ಅರಿಯಲು ಸಾಧ್ಯವೇ
ಬಡವನ ನೋವನು
ಎಲ್ಲ ಕಷ್ಟದಲ್ಲು
ತನ್ನನ್ನುನೋಯಿಸಿಕೊಳ್ಳುವನು
ತನ್ನವರ ಸುಖದಿ
ತನ್ನಯ ಸಂತೋಷ ಕಾಣುವನು

ದಿನದ ಪ್ರತಿ ವೇಳೆಲು
ಮನಸಿನ ಪ್ರತಿ ಮೂಲೆಲು
ಕಾಡುವ ಪ್ರಶ್ನೆ ಒಂದಿದೇ
ಹೆಣ್ಣಿನ ಭಾವನೆ
ಅರ್ಥವ ಮಾಡದ
ನೀ ಯಾವ ಮನುಜನೊ
ನಿನ್ನನ್ನು ಹೊತ್ತು
ಹೆತ್ತು ಸಾಕಿದ
ತಾಯಿಯು ಹೆಣ್ಣಲ್ಲವೇ
ಆಸ್ತಿಅಂತಸ್ತು ನಿನ್ನಲ್ಲಿದೆ ಎಂದು
ಹಾರಡ ಬೇಡ
ಬಡವರ ಹೆಣ್ಣಿನ
ಜೀವನದಲ್ಲೆಂದು
ಆಟವೇ ಬೇಡ

ಹೆಣ್ಣು ಮನಸದು
ನೋಯಲೆ ಬಾರದು
ದೇವರು ಇರುವನು
ದಾರಿಯ ಅವನೇ ತೋರ್ವನು
ಸೋತ ಬದುಕಿನಲಿ
ಗೆಲುವಿನ ಮಳೆಯ ಸುರಿವನು

ದಿನದ ಪ್ರತಿ ವೇಳೆಲು
ಮನಸಿನ ಪ್ರತಿ ಮೂಲೆಲು
ಕಾಡುವ ಪ್ರಶ್ನೆ ಒಂದಿದೇ
ಸಿರಿತನದ ಶೋಕಿ ಜೀವನ
ಲೋಕವ ಮೆರೆದಿದೆ
ಪಾಪದವರ ಹೆಣ್ಣು ಮಗಳು
ದೇವರ ಬೇಡಿದೆ
ಸುಖ ಸಂಸಾರ ನನಗೂ
ನೀಡಿ ಕರುಣಿಸು
ಹೆತ್ತ ತಾಯಿ ತಂದೆಯ ಮುಖದಿ
ನಗುವನು ತರಿಸು

Leave a Comment

Contact Us