Marethuhoyithe lyrics ( Kannada ) – Amar – super cine lyrics

Marethuhoyithe – Sanjit hegde Lyrics

Singer Sanjit hegde

About the song

▪ Music: ARJUN JANYA
▪ Singer: SANJITH HEGDE
▪ Lyrics: KAVIRAJ
▪ Starcast: ABISHEK AMBAREESH, TANYAHOPE
▪ Director: NAGSHEKAR
▪ Producer: SANDESH NAGARAJ & N.SANDESH
▪ Banner: SANDESH PRODUCTIONS

Lyrics

ಮರೆತು ಹೋಯಿತೆ ನನ್ನಯ ಹಾಜರಿ
ಬರೆದು ಎದೆಯಲಿ ನೋವಿನ ಶಾಯರಿ..
ಕರಗಿದೆ ನಾಲಿಗೆ ಬರವಿದೆ ಮಾತಿಗೆ..
ಮೆರವಣಿಗೆ ಹೊರಟಂತೆ ನಾ ಸಾವಿಗೆ..
ಮರೆತು ಹೋಯಿತೆ ನನ್ನಯ ಹಾಜರಿ
ಬರೆದು ಎದೆಯಲಿ ನೋವಿನ ಶಾಯರಿ..

ಒಂದು ನಿಶ್ಶಬ್ದ ರಾತ್ರೀಲಿ ನಾವು ಆಡಿದಾ ಮಾತು ಹಸಿಯಾಗಿದೆ..
ನಾವು ನಡೆದಂತ ಹಾದೀಲಿ ಇನ್ನೂ
ಹೆಜ್ಜೆಗುರುತೆಲ್ಲ ಹಾಗೆ ಇದೆ..
ಒಂಚೂರು ಹಿಂತಿರುಗಿ ನೀ ನೋಡೆಯ..
ಇನ್ನೊಮ್ಮೆ ಕೈಚಾಚೆಯ..
ಕರಗಿದೆ ನಾಲಿಗೆ.. ಬರವಿದೆ ಮಾತಿಗೆ..
ಮೆರವಣಿಗೆ ಹೊರಟಂತೆ ನಾ ಸಾವಿಗೆ..

ಮರೆತು ಹೋಯಿತೆ ನನ್ನಯ ಹಾಜರಿ
ಬರೆದು ಎದೆಯಲಿ ನೋವಿನ ಶಾಯರಿ..

ಜೋರು ಮಳೆಯೆಲ್ಲ ನಂಗೀಗ ಯಾಕೋ
ನೊಂದ ಆಕಾಶ ಅಳುವಂತಿದೆ..
ಕೋಟಿ ಕನಸೆಲ್ಲ ಕೈಜಾರಿ ಹೋಗಿ
ಕಾಲಿ ಕೈಯಲ್ಲಿ ಕುಳಿತಂತಿದೆ..
ಎಷ್ಟೊಂದು ಏಕಾಂಗಿ ನೋಡೀದಿನ
ದೂರಾಗಿ ನಿನ್ನಿಂದ ನಾ..
ಕರಗಿದೆ ನಾಲಿಗೆ ಬರವಿದೆ ಮಾತಿಗೆ..
ಮೆರವಣಿಗೆ ಹೊರಟಂತೆ ನಾ ಸಾವಿಗೆ..

ಮರೆತು ಹೋಯಿತೆ ನನ್ನಯ ಹಾಜರಿ
ಬರೆದು ಎದೆಯಲಿ ನೋವಿನ ಶಾಯರಿ..

Leave a Comment

Contact Us