Suryana gelethanake song details
- Song : Suryana gelethanake
- Singer : S P Balasubramanyam, K S chitra
- Lyrics : K Kalyan
- Movie : Kanasugara
- Music : Rajesh Ramanath
- Label : Ashwini audio
Suryana gelethanake lyrics in kannada
ಓ…..ಓ..ಓ..ಓ.ಓ.
ಲಾ.ಲ.ಲಾ.ಲ.ಲಾ…
ಲಾ.ಲ.ಲಾ.ಲ.ಲಾ…
ಸೂರ್ಯನ ಗೆಳೆತನಕೆ
ಕಿರಣಗಳೇ ಸಾಕ್ಷಿ
ಚಂದ್ರನ ಗೆಳೆತನಕೆ
ಕವನಗಳೇ ಸಾಕ್ಷಿ
ಯಾವ ಮನಸ್ಸಿಂದ ಆರಂಭ
ತುಂಬಿದೆ ಈ ಸ್ನೇಹ
ಯಾವ ಕಾಲದ ಸಂಬಂಧ
ನಂಬಿದೆ ಈ ಸ್ನೇಹ
ಹುಣ್ಣಿಮೆ ಗೆಳೆತನಕೆ
ಸಾಗರವೇ ಸಾಕ್ಷಿ
ಹೆಣ್ಣಿನ ಗೆಳೆತನಕೆ
ಪ್ರಕೃತಿಯೇ ಸಾಕ್ಷಿ
ದಿಕ್ಕುಗಳ ಎಣಿಸಿ
ಚುಕ್ಕಿಗಳ ಗುಣಿಸಿ
ಎದ್ದುಬಂದ ಆಸೆಯಿದು
ಋತುಗಳ ಕುಣಿಸಿ
ಮಿಂಚುಗಳ ತಣಿಸಿ
ಎದ್ದುಬಂದ ಸೆಳೆತವಿದು
ಪಾತ್ರವಿರದ ಕಥೆಯಲ್ಲಿ
ಕೈಯ ಹಿಡಿದು ಜೊತೆಯಲ್ಲಿ
ನಡೆಯೋ ಬಂಧವಿದು
ಸೂತ್ರವಿರದ ಬದುಕಲ್ಲಿ
ಮನಸು ಹಿಡಿದು ಕ್ಷಣದಲ್ಲಿ
ನಡೆಸೋ ಸತ್ಯವಿದು
ಕನಸುಗಳಲೇ ಬದುಕನು ನೋಡು
ಬದುಕಿನ ಕನಸಾಗಿ ಬರುವೆ
ಬದುಕಲಿ ಬರಿ ಕನಸನೆ ನೋಡು
ಕನಸಲಿ ಬದುಕಾಗಿ ಇರುವೆ
ಹೂವಿನ ಗೆಳೆತನಕೆ
ಪರಿಮಳವೇ ಸಾಕ್ಷಿ
ಚೈತ್ರದ ಗೆಳೆತನಕೆ
ಕೋಗಿಲೆಯೇ ಸಾಕ್ಷಿ
ಭೂಮಿಗೊಂದು ಕಣ್ಣ
ಬಾನಿಗೊಂದು ಬಣ್ಣ
ಕಟ್ಟಿಬಿಟ್ಟ ಮಾಯೆ ಇದು
ಹಗಲಿಗೆ ಹೆಗಲ
ಇರುಳಿಗೆ ಮಡಿಲ
ತೋರಿಕೊಟ್ಟ ಸನಿಹವಿದು
ಗುರುತು ಇರದ ಗುಂಡಿಗೆಯ
ಗುರುತು ಮಾಡಿ ಸ್ವಾಗತಿಸೋ
ನಿತ್ಯವಸಂತವಿದು
ಬಯಸೇ ಇರದ ಭಾಗ್ಯವನು
ಬಾಗಿಲು ತೆರೆದು ಆದರಿಸೋ
ನಿತ್ಯಸಂದೇಶವಿದು
ಅಣುಅಣುವಲು ಅಮೃತವರ್ಷಿಣಿ
ಗೆಲ್ಲುವ ಸಮಯಕೆ ಕಾದಿರುವೆ
ಕ್ಷಣಕ್ಷಣದಲು ಅಂತರಗಂಗೆಯ
ಹರಿಸಲು ಹೃದಯಕೆ ಸೋತಿರುವೆ
ಸೂರ್ಯನ ಗೆಳೆತನಕೆ
ಕಿರಣಗಳೇ ಸಾಕ್ಷಿ
ಚಂದ್ರನ ಗೆಳೆತನಕೆ
ಕವನಗಳೇ ಸಾಕ್ಷಿ
ಯಾವ ಮನಸ್ಸಿಂದ ಆರಂಭ
ತುಂಬಿದೆ ಈ ಸ್ನೇಹ
ಯಾವ ಕಾಲದ ಸಂಬಂಧ
ನಂಬಿದೆ ಈ ಸ್ನೇಹ