Soruthihudu maniya maligi song details :
- Song : Soruthihudu maniya maligi
- Singer : All ok
- Lyrics : All ok
- Music : All ok
Soruthihudu maniya maligi lyrics in kannada
ಸೋರುತಿಹುದು ಮನೆಯ ಮಾಳಿಗಿ ಸಾಂಗ್ ಲಿರಿಕ್ಸ್
ಸೋರುತಿಹುದು ಮನಿಯ ಮಾಳಿಗಿ
ದಾರು ಗಟ್ಟಿ ಮಾಳ್ಪರಿಲ್ಲ
ಸೋರುತಿಹುದು ಮನಿಯ ಮಾಳಿಗಿ
ಹೆಂಚು ಕಟ್ಟಿಗಿ ಕಟ್ಟುವರಿಲ್ಲ
ಕಾಲ ಕತ್ತಲೆಯೊಳಗೆ ನಾನು ಮೇಲಕೇರಿ ಹೋಗಲಾರೆ
ಕಾಲ ಕತ್ತಲೆಯಾಗಿದೆ ನಾನು ಮೇಲಕೇರಿ ಹೋಗಲಾರೆ
ಸೋರುತಿಹುದು ಮನಿಯ ಮಾಳಿಗಿ
ಸೋರುತಿಹುದು ಮನಿಯ ಮಾಳಿಗಿ
ಅಜ್ಞಾನದಿಂದ ಅಜ್ಞಾನದಿಂದ
ಸೋರುತಿಹುದು ಮನಿಯ ಮಾಳಿಗಿ
ನೀ ಯಾರು ನಾ ಯಾರು ನಮ್ಮೊಳಗಡೆ ಇರುವ ನರನಾಸ್ತಿಕತೆ ತುಂಬವರು ಇಲ್ಯಾರು
ನಡು ಕೆಟ್ಟ ದ್ವೇಷ ಕುಲ ಕಲ್ಮಶವ ತಂದಿಟ್ಟು ಹೊಂಟಾರು
ಮಡಿ ಮಾಡಿ ಮಣಿದ ಮತ್ಸರಕೆ ಮುಕುತಿಯೇ ನಾ ಯಾರು
supercinelyrics.com
ಸುಖ ಶಾಂತಿ ಸಿಹಿ ಸಂಪುಟವ ಬಿಟ್ಟು ಎಲ್ಲವನ್ನು ಬಲ್ಲೆ ನಾ ಅಂದವರು ಇಲ್ಲಿ
ಬಾವಿಲಿರೊ ಕಪ್ಪೆಗಳ ಹೋಲುವರು
ಸುಳ್ಳಿನ ಪುಂಗಿಯ ಸತ್ಯತೆ ಶಂಖ ಅಂತ ನಂಬಿ ಇಲ್ಲಿ ಕೆಟ್ಟೋರು ತಮ್ಮ ಕಾಲಕೆ ತಾವೇ ಕಲ್ಪತರು
ಆ ನಸ್ಯಮ ಗೆದ್ದು ಬಂದವರು
ಸೋರುವ ಮಾಳಿಗಿ ಬಿಟ್ಟಿರೋ ಬಾಳ್ವಿಗೆ
ಜ್ಞಾನದ ಛತ್ರಿ ಹಿಡಿದವರು
ಕಾಂತೇ ಕೇಳೆ ಕರುಣದಿಂದ
ಬಂತು ಕಾಣೆ ಹುಬ್ಬಿ ಮಳೆಯು
ತಾಯಿ ಕೇಳೆ ಕರುಣೆಯಿಂದ ತುಂಬಿ ಸುರಿತಿದೆ ಘೋರ ಮಳೆಯು
ಸಂತ ಶಿಶುನಾಳ…………
ಸಂತ ಶಿಶುನಾಳ ಧೀಶನು ನನ್ನ ಕೈಯ ಹಿಡಿವನು ಎಂದೂ ನಂಬಿದೆ
ಸೋರುತಿಹುದು ಮನಿಯ ಮಾಳಿಗಿ
ಸೋರುತಿಹುದು ಮನಿಯ ಮಾಳಿಗಿ
ಅಜ್ಞಾನದಿಂದ ಅಜ್ಞಾನದಿಂದ ಸೋರುತಿಹುದು ಮನಿಯ ಮಾಳಿಗಿ
supercinelyrics.com