Shrungara kavya song details
- Song : Shrungara kavya
- Singer : S P Balasubrahmanyam
- Lyrics : Hamsalekha
- Movie : Shrungara kavya
- Music : Hamsalekha
- Label : Lahari music
Shrungara kavya lyrics in kannada
ಶೃಂಗಾರ ಕಾವ್ಯ ಬರೆದನು
ಸಂಗೀತ ಸಾರ ಸುರಿದನು
ಶೃಂಗಾರ ಕಾವ್ಯ ಬರೆದನು
ಸಂಗೀತ ಸಾರ ಸುರಿದನು
ಉಸಿರ ಹಿಡಿದ ತಂತಿ ಕಡಿದ
ಇನ್ನು ಮೌನ ಗಾನವೆ
ಶೃಂಗಾರ ಕಾವ್ಯ ಬರೆದನು
ಸಂಗೀತ ಸಾರ ಸುರಿದನು
ಕಲೆಗಾರ ಕಡೆದು ಕರುಬಿದ
ಕಥೆಗಾರ ಕಥೆಯ ಕೆಡಿಸಿದ
ಹೊಣೆಗಾರ ಹರಸಿ ಹಲುಬಿದ
ಬೆಳೆಗಾರ ಬರವ ಬರಿಸಿದ
ಕನಸು ಸುರಿದಾ ಕಣ್ಣೇ ತೆಗೆದ
ಇನ್ನು ಶೂನ್ಯ ಗಾನವೇ
ಶೃಂಗಾರ ಕಾವ್ಯ ಬರೆದನು
ಸಂಗೀತ ಸಾರ ಸುರಿದನು
ಉಸಿರ ಹಿಡಿದ ತಂತಿ ಕಡಿದ
ಇನ್ನು ಮೌನ ಗಾನವೆ
ಶೃಂಗಾರ ಕಾವ್ಯ ಬರೆದನು
ಸಂಗೀತ ಸಾರ ಸುರಿದನು
ವರವಾಗಿ ಒಲವ ತಂದನು
ಮರವಾಗೋ ಗಿಡವ ಕಡಿದನು
ಶುಭವಾಗಲೆಂದು ನುಡಿದನು
ಸುಖಕಾಣುವಾಗ ಮುನಿದನು
ಜಯವ ತಡೆದ ಭಯವ ಸುರಿದ
ಇನ್ನು ಶೋಕ ಗಾನವೇ
ಶೃಂಗಾರ ಕಾವ್ಯ ಬರೆದನು
ಸಂಗೀತ ಸಾರ ಸುರಿದನು
ಉಸಿರ ಹಿಡಿದ ತಂತಿ ಕಡಿದ
ಇನ್ನು ಮೌನ ಗಾನವೆ
ಶೃಂಗಾರ ಕಾವ್ಯ ಬರೆದನು
ಸಂಗೀತ ಸಾರ ಸುರಿದನು