Jeevanavellavu naa haaduve song details
- Song : Jeevanavellavu naa haaduve
- Singer : S P Balasubrahmanyam
- Lyrics : Hamsalekha
- Movie : Shrungara kavya
- Music : Hamsalekha
- Label : Lahari music
Jeevanavellavu naa haaduve lyrics in kannada
ಜೀವನವೆಲ್ಲವೂ ನಾ ಹಾಡುವೆ
ಹಾಡಿನ ಮಡಿಲಲಿ ನಾ ಬಾಳುವೆ
ನಿಮ್ಮನು ನಾ ಪ್ರೀತಿಸುವೆ
ಮಣ್ಣ ಋಣಾ ತೀರಿಸುವೇ
ಜೀವನವೆಲ್ಲವೂ ನಾ ಹಾಡುವೆ
ಹಾಡಿನ ಮಡಿಲಲಿ ನಾ ಬಾಳುವೆ
ನಿಮ್ಮನು ನಾ ಪ್ರೀತಿಸುವೆ
ಮಣ್ಣ ಋಣ ತೀರಿಸುವೇ
ಜೀವನವೆಲ್ಲವೂ ನಾ ಹಾಡುವೆ
ಹಾಡಿನ ಮಡಿಲಲಿ ನಾ ಬಾಳುವೆ
ಮಧುರ ಮಧುರವೀ ಕನ್ನಡನಾಡ
ನುಡಿವ ಬಾಯಿಗಿದು ವೇದ
ವಿನಯ ವಿನಯವೀ ಕನ್ನಡ ಭಾವಾ
ಕರುಣೆ ನಾಡಿಗಿದು ಜೀವಾ
ಇಲ್ಲಿ ಬಾನಾಡಿ ನುಡಿಯುವ ಸ್ವರವೇ
ನನ್ನ ಪದವಾಗಿದೆ ಹೋ
ಇಲ್ಲಿ ಜನನಾಡಿ ಮೀಟುವ ಶ್ರುತಿಗೆ
ನನ್ನ ಪದ ಸೇರಿದೆ
ಧರಣಿ ಆಕಾಶ, ತೆರೆಸೋ ಆವೇಶ
ಧರಣಿ ಆಕಾಶ, ತೆರೆಸೋ ಆವೇಶ
ತರುವ ಕಸ್ತೂರಿ ಜನ ನನ್ನವರು
ಜೀವನವೆಲ್ಲವೂ ನಾ ಹಾಡುವೆ
ಹಾಡಿನ ನೆರಳಲಿ ನಾ ಬಾಳುವೆ
ನಿಮ್ಮನು ನಾ ಪ್ರೀತಿಸುವೆ
ಮಣ್ಣ ಋಣ ತೀರಿಸುವೇ
ಜೀವನವೆಲ್ಲವೂ ನಾ ಹಾಡುವೆ
ಹಾಡಿನ ಮಡಿಲಲಿ ನಾ ಬಾಳುವೆ
ಚೆಲುವೆ ಚೆಲುವೆ ಈ ಕೊಡಗಿನ ನಾರಿ
ಚಲುವಿಗಿವಳೇ ಸರಿಸಾಟಿ ಆಹಾ ಒಹೋ
ಸುಮತಿ ಸುಮತಿ ಈ ನಾಡಿನ ಬೆಡಗಿ
ಇವಳಿಗ್ಯಾರು ಪೈಪೋಟಿ ಆಹಾಹಾ ಓಹೋಹೋ
ಇಂಥ ಊರಲ್ಲಿ ಲಭಿಸಿದ ಸ್ನೇಹ
ಸ್ವರ್ಗ ಸನ್ಮಾನವೊ
ಇಂಥ ಊರಲ್ಲಿ ಫಲಿಸಿದ ಪ್ರೇಮ
ಧೈವ ಸಾಕಾರವೋ
ಧರಣಿ ಆಕಾಶ, ತೆರೆಸೋ ಆವೇಶ
ಧರಣಿ ಆಕಾಶ, ತೆರೆಸೋ ಆವೇಶ
ತರುವ ಕಸ್ತೂರಿ ಜನ ನನ್ನವರು
ಜೀವನವೆಲ್ಲವೂ ನಾ ಹಾಡುವೆ
ಹಾಡಿನ ಗುಂಗಲಿ ನಾ ಬಾಳುವೆ
ನಿಮ್ಮನು ನಾ ಪ್ರೀತಿಸುವೆ
ಮಣ್ಣ ಋಣಾ ತೀರಿಸುವೇ
ಜೀವನವೆಲ್ಲವೂ ನಾ ಹಾಡುವೆ
ಹಾಡಿನ ಋಣದಲಿ ನಾ ಬಾಳುವೆ
ನಿಮ್ಮನು ನಾ ಪ್ರೀತಿಸುವೆ
ಮಣ್ಣ ಋಣಾ ತೀರಿಸುವೇ
ಜೀವನವೆಲ್ಲವೂ ನಾ ಹಾಡುವೆ
ಹಾಡಿನ ಮಡಿಲಲಿ ನಾ ಬಾಳುವೆ