Sanje Mele song lyrics – Matinee 

Sanje Mele song info :

SongSanje Mele
SingersVijay Prakash
LyricsPoornachandra Thejaswi S V
MovieMatinee
MusicPoornachandra Thejaswi S V
LabelAnand audio

Sanje Mele Sumne Hange lyrics in kannada – Matinee movie

ಜನುಮ ಜನುಮದಲ್ಲೂ ನೀನೇ ನನ್ನ ಅಪ್ಸರೆ
ಕೊಡುತಿರುವೆ ನಿನಗೆ ಈ ಒಲವಿನ ಉಡುಗೊರೆ

ಸಂಜೆ ಮೇಲೆ ಸುಮ್ನೆ ಹಂಗೆ ಫೋನು ಮಾಡ್ಲಾ ನಿಂಗೆ
ನಿನ್ನ ಜೊತೆಗೆ ಸುತ್ತಬೇಕು ಊರ ತುಂಬಾ ಹಾಗೆ
ಸಂಜೆ ಮೇಲೆ ಸುಮ್ನೆ ಹಂಗೆ ಫೋನು ಮಾಡ್ಲಾ ನಿಂಗೆ
ಕರೆದುಕೊಂಡು ಹೋಗಬೇಕು ಮ್ಯಾಟನೀ ಷೋಗೆ
ಮ್ಯಾಟನೀ ಷೋಗೆ

ಒಂದೊಳ್ಳೆ ಬೈಕು ತರ್ಲಾ, ಇಲ್ಲಾಂದ್ರೆ ಕಾರೇ ಇರ್ಲಾ
ನಿನ್ನ ಪಕ್ಕದ್ ಕ್ರಾಸಲಿ ನಿಂತು ಹಾರನ್ನು ಹೊಡಿಲಾ
ಹಾರನ್ನು ಹೊಡಿಲಾ
ಟೆಂಟಾದ್ರು ಓಕೆನಾ, ಗೋಲ್ಡ್ ಕ್ಲಾಸೇ ಬೇಕೆನೆ
ಕ್ವಾರ್ನರ್ರು ಸೀಟನೆರಡು ಬುಕ್ಕು ಮಾಡಲೇನೆ
ಸುತ್ತ ಮುತ್ತ ಯಾರಿಗೂ ಗೊತ್ತಾಗದ ಹಾಗೇ

ಸಂಜೆ ಮೇಲೆ ಸುಮ್ನೆ ಹಂಗೆ ಫೋನು ಮಾಡ್ಲಾ ನಿಂಗೆ
ಕರೆದುಕೊಂಡು ಹೋಗಬೇಕು ಮ್ಯಾಟನೀ ಷೋಗೆ
ಮ್ಯಾಟನೀ ಷೋಗೆ

ನೀನು ಬರುವ ಟೈಮಿಗೆ
ಮಳೆಯು ಬಂದು ಸಣ್ಣಗೆ
ಒಂದು ಕೊಡೆಯ ನಡುವೆ ನಿಂತು ಕಾಯಬೇಕಿದೆ
ಕಣ್ಣು ಕಣ್ಣು ಸೇರುವಾಗ
ಯಾರು ಮೊದಲು ಅನ್ನುವಾಗ
ಅಡ್ಡಲಾಗಿ ಪರದೆಯೊಂದು ಬೀಳಬೇಕಿದೆ
ನಾನು ನೀನು ಇಬ್ಬರೂ
ಎಷ್ಟೆ ಚಳಿಯು ಇದ್ದರೂ
ನಾನಿನ್ನ ಮರೆಯಲಾರೆ ನೋಡಬೇಕಿದೆ
ಅಣ್ಣಾವ್ರ ಸಿನೆಮಾದಂತೆ ಬಾಳಬೇಕಿದೆ

ಸಂಜೆ ಮೇಲೆ ಸುಮ್ನೆ ಹಂಗೆ ಫೋನು ಮಾಡ್ಲಾ ನಿಂಗೆ
ನಿನ್ನ ಜೊತೆಗೆ ಸುತ್ತಬೇಕು ಊರ ತುಂಬಾ ಹಾಗೆ
ಸಂಜೆ ಮೇಲೆ ಸುಮ್ನೆ ಹಂಗೆ ಫೋನು ಮಾಡ್ಲಾ ನಿಂಗೆ
ಕರೆದುಕೊಂಡು ಹೋಗಬೇಕು ಮ್ಯಾಟನೀ ಷೋಗೆ
ಮ್ಯಾಟನೀ ಷೋಗೆ

ಸಣ್ಣದೊಂದು ಮನವಿ ನಿನಗೆ
ಸ್ವಲ್ಪ ಜರಗು ಸೈಡಿಗೆ
ಮಡಿಲ ಮೇಲೆ ಮಲಗಿ ನಾನು ತಾರೆ ಎಣಿಸುವೆ
ಎಷ್ಟು ತಾರೆ ಇದ್ದರೇನು
ಧ್ರುವ ತಾರೆ ನನಗೆ ನೀನು
ಹಗಲಿನಲ್ಲು ಸಿಗಲೆಬೇಕು ಎಂದು ತಪ್ಪದೆ
ಹಿಂದೆಂದು ಬರೆಯದ
ಮುಂದೆಂದು ಅಳಿಯದ
ಹೊಸ ಕಾವ್ಯವೊಂದನು ಬರೆಯಬೇಕಿದೆ
ಹಂಸಲೇಖ ಗೀತೆಯಂತೆ ಮೆರೆಸಬೇಕಿದೆ
ಹಾಂ..

ಸಂಜೆ ಮೇಲೆ ಸುಮ್ನೆ ಹಂಗೆ ಫೋನು ಮಾಡ್ಲಾ ನಿಂಗೆ
ನಿನ್ನ ಜೊತೆಗೆ ಸುತ್ತಬೇಕು ಊರ.. ತುಂಬಾ ಹಾಗೆ
ಸಂಜೆ ಮೇಲೆ ಸುಮ್ನೆ ಹಂಗೆ ಫೋನು ಮಾಡ್ಲಾ ನಿಂಗೆ
ಕರೆದುಕೊಂಡು ಹೋಗಬೇಕು ಹೂಂ ಹೂಂ ಹೂಂ ಹೂಂ
ಮ್ಯಾಟನೀ ಷೋಗೆ
ಮ್ಯಾಟನೀ ಷೋಗೆ
ಮ್ಯಾಟನೀ ಷೋಗೆ

Sanje Mele song video :

Leave a Comment

Contact Us