Yaara jeeva yaranu song lyrics – Seetharaama serial

Yaara jeeva yaranu song sung by Kalyan Manjunath and Seetharaama title track lyrics was written by Pramod Maravanthe, music composed by Shashank Sheshagiri.

Yaara jeeva yaranu song details :

SongYaara jeeva yaranu
SingersKalyan Manjunath
LyricsPramod Maravanthe
MusicShashank Sheshagiri
LabelZee Kannada

Yaara jeeva yaranu song lyrics in kannada :

ಸೀತ ರಾಮ ಟೈಟಲ್ ಸಾಂಗ್ ಲಿರಿಕ್ಸ್

ಯಾರ ಜೀವ ಯಾರನೂ
ಸೇರೋದು ಬಾಳ ತೀರ್ಮಾನ
ಅದನೂ ಮೀರಿ ಸಾಗದು ಈ ಜೀವನ….
ಯಾರ ಹೆಜ್ಜೆ ಯಾರನೋ ಕಾಯೋದೆ ಸುಂದರ ಧ್ಯಾನ
ಹೃದಯ ತೆರೆದು ಕೂರಲಿ
ನಿನ್ನೀ ಮನ
ಕೊನೆಯಾಗಿರೋ ಆ ದಾರಿ
ಹೊಸ ದಾರಿಗೆ ರೂವಾರಿ
ಗುರಿ ಸೇರಲಿ ಸೇರಿ…
ಜಗವೆ ಕೇಳಿಕೊಂಡಿದೆ ಆ ದೇವರ
ಜೋಡಿ ಮಾಡುವಂತೆಯೇ
ಈ ಇಬ್ಬರ
ಸೀತಾರಾಮ ಓ ಸೀತಾರಾಮ….
supercinelyrics.com

ಮನದ ಬಾಗಿಲನು
ಬಡಿದು ಹೋದ
ಭಾವಕೆ ಜೀವ ನೀಡಿ
ಕಳೆದ ನಿನ್ನೆಗಳ ಮರೆಸುವಂತ
ನಲ್ಮೆಯ ನಾಳೆಯಾಗಿ
ಕನಸೊಂದನು ಕಾಣಲು
ಕಣ್ಣ ನೋಟವು ಸೇರಲಿ
ಉಸಿರೊಂದನು ಆಡಲು ಎರಡು ಶ್ವಾಸವು ಕೂಡಲಿ

ಯಾರ ಜೀವ ಯಾರನೂ
ಸೇರೋದು ಬಾಳ ತೀರ್ಮಾನ
ಅದನೂ ಮೀರಿ ಸಾಗದು ಈ ಜೀವನ….
ಜನುಮ ಜನುಮ ಸಾಗಲಿ
ಈ ಬಂಧನ
ಹರುಷ ಹಾರುತಿದೆ ಎದೆಯ ತುಂಬ
ಪ್ರೀತಿಯೆ ರೆಕ್ಕೆಯಾಗಿ
ಸನಿಹದಲ್ಲೆ ಇರೋ ಸೊಗಸು ಹೀಗೆ
ಕಾಯಲಿ ಸ್ಪೂರ್ತಿಯಾಗಿ
ಅನುರಾಗವೇ ಸೇತುವೆ
ಎರಡು ತೀರವು ಸೇರಲಿ
ಇರುಳೊಂದನು ಮೀರಿಸೊ
ನಸುಕು ನಿತ್ಯವೂ ಮೂಡಲಿ
ಸೀತಾರಾಮ ಓ ಸೀತಾರಾಮ….

Yaara jeeva yaranu song video :

Leave a Comment

Contact Us