Pasandagavane song details :
Song | Pasandagavane |
Singers | Mangli |
Lyrics | Chethan Kumar |
Movie | Kaatera |
Music | V Harikrishna |
Label | Anand Audio |
Pasandagavane song lyrics in kannada :
ನೋಡ್ತ ನೋಡ್ತ ಆಗೋಗಯ್ತೇ ಸ್ಯಾನೆ ಪಿರುತೀ
ನೋಡ್ತ ನಿನ್ನ ಆಗೋಗಯ್ತೇ ಸ್ಯಾನೇ ಪಿರುತೀ
ಪಕ್ಕದಲ್ಲಿ ನಿಂತ್ರೆ ಸಿವ ನೀನೇ ನಾನೇ ಪಾರ್ವತಿ
ಪಸದಾಂಗವ್ನೆ… ಸ್ಯಾನೆ ಪಸದಾಂಗವ್ವೆ
ನೋಡಿ ನೋಡಿ ನೋಡ್ತ ಇದ್ದಾಂಗೆ ಯಾಕೆ ಹೋಗುತ್ತಿ
ನೋಡಿ ನನ್ನ ನೋಡ್ತಾಂಗೆ ಯಾಕೆ ಹೋಗುತ್ತಿ
ನಿನ್ನ ನೋಡಿ ನಾಚ್ಕೋತ್ತೈ ನನ್ನ ಮೂಗುತಿ
ಪಸಂದಾನೋನೆ… ಬಲು ಪಸಂದಾನೋನೆ
ನಕ್ರೆ ಚಂದ ನೋಡಕ್ ಅಂದ ನನ್ನ ಬಂಗಾರ
ಕ್ವಾಪ ಬಂದ್ರೆ ಅಯ್ಯೋ ಸಿವ್ನೆ ಸುಡೋ ಚಂದಿರಾ
ರೂಪ ಅಪರೂಪ… ನಮ್ಮೂರ ಹಮ್ಮೀರ
ಅಪ್ಪು ತಿನ್ನೋ ಆನೆ ಹಂಗೆ ಪಸಂದಾಗವ್ನೆ
ಹೇ, ರಂಗಸ್ವಾಮಿ ತೇರಿನಾಂಗೆ ಪಸದಾಂಗವ್ನೆ
ಹ, ನೋಡ್ತ ನೋಡ್ತ ಆಗೋಗೈತೆ ಸ್ಯಾನೆ ಪಿರುತೀ
ನೋಡ್ತ ನಿನ್ನ ಆಗೋಗೈತೆ ಸ್ಯಾನೆ ಪಿರುತೀ
ಪಕ್ಕದಲ್ಲಿ ನಿಂತರೆ ಶಿವ ನೀನೇ, ನಾನೇ ಪಾರ್ವತೀ
ಪಸದಾಂಗವ್ನೆ… ಸ್ಯಾನೆ ಪಸದಾಂಗವ್ವೆ
ಆಕ್ಲ ಹಾಲಿನ್ ಬೆಣ್ಣೆ ಹಂಗೆ
ಕೋಲಾರದ ಹಟ್ಟ… ಬಂಗಾರದಂಗೆ
ಬೆಳ್ ಬೆಳಗೆ ಫಳ್ ಫಳ್‌ನೇ ಪಸದಾಂಗವ್ನೆ
ಭೂಮಿ ತಾಗಿದ್ ಮುಂಗಾರ್‌ನಾಂಗೆ
ಬೊಂಬೆ ಮೀಟಾಯಿ ಅಂಟಿನಂಗೆ
ಘಮ್ ಘಾಮ್ಗೆ ಸಿಹಿಸಿಹಿ ಪಸದಾಂಗವ್ನೆ
ನೀ ನನ್ನ ಪ್ರಾಣ ತಿಳ್ಕ
ನನ್ನ ಚೂರು ಮನಸಲ್ಲಿಟ್ಕಾ
ನೀ ಹೇಳಿದಕ್ಕೆಲ್ಲ ಹೂ ಅಂತಿನಿ ನನ್ನ ಸಾಹುಕಾರ
ಜೋಡಿ ಎತ್ತಿನಾಗೆ ಜೊತೆ ಇರ್ತಿನಿ ಜೀವನ ಪೂರ
ಸಂದಗೆ ಬಾಲ ಸಂದಗೆ ಮಾಡ್ತಿನೋ ಸಂಸಾರ
ಸೀತಾಪತಿ ರಾಮಪ್ನಂಗೆ ಪಸದಾಂಗವ್ನೆ
ಅ ಆ ಇ ಈ ಅಕ್ಷರದಾಂಗೆ ಪಸದಾಂಗವ್ನೆ, ಹೇ
ಹ, ನೋಡ್ತ ನೋಡ್ತ ಆಗೋಗೈತೆ ಸ್ಯಾನೆ ಪಿರುತೀ
ನೋಡ್ತ ನಿನ್ನ ಆಗೋಗೈತೆ ಸ್ಯಾನೆ ಪಿರುತೀ
ಪಕ್ಕದಲ್ಲಿ ನಿಂತರೆ ಶಿವ ನೀನೇ, ನಾನೇ ಪಾರ್ವತೀ
ಪಸದಾಂಗವ್ನೆ… ಸ್ಯಾನೆ ಪಸದಾಂಗವ್ವೆ