Onti jeevavu koragide indu Lyrics ( Kannada ) – Krithi P S – super cine lyrics

Onti jeevavu koragide indu – Krithi P S Lyrics

Singer Krithi P S

About the song

▪Album : Onti Jeevavu Koragide Indu
▪Singer : Krithi PS
▪Lyrics : Junaid Belthangady
▪️Producer : Sridhar Ambalagi
▪Recordings : Riddhi Creation Udupi
▪Mixing & Mastering : Yusuf Kannur
▪Edit & Efx : Knight Wing Creation

Lyrics

ಮೋಡ ಕವಿದ ವಾತವರಣ
ದಿನ ನೆನೆದನು ಮಳೆಯಲ್ಲಿ
ಕಣ್ಣಲಿ ಸುರಿಯುವ
ಹನಿ ಜಾರಿದೆ
ಮುಂಗಾರಿನ ನೀರಿನಲಿ…
ನೋವನು ಅನುಭವಿಸಿದ
ಹೃದಯವು ಕುಳಿತಿದೆ ಕತ್ತಲಿನಲ್ಲಿ

ನನ್ನ ನೆರಳಿಗೂ ಅಂಜಿಕೆಯಾಗಿದೆ
ನಡೆಯಲು ಬೆಳಕಿನಲಿ
ಮೋಡ ಕವಿದ ವಾತವರಣ
ದಿನ ನೆನೆದನು ಮಳೆಯಲ್ಲಿ
ಕಣ್ಣಲಿ ಸುರಿಯುವ
ಹನಿ ಜಾರಿದೆ
ಮುಂಗಾರಿನ ನೀರಿನಲಿ

ಒಂಟಿ ಜೀವವು
ಕೊರಗಿದೆ ಇಂದು
ಊಹಿಸಿದ ಜೀವನ ಸಿಗದೆಂದು
ಕನಸನು ಕಂಡ ಕಣ್ಣುಗಳಲ್ಲಿ
ಜಲಧಾರೆ ಇನ್ನೆಂದಿಗು ಮುಂದು
ಪ್ರೀತಿಸಿ ಸೋತ
ಹುಡುಗಿಯು ನಾನು
ಮರೆತಿರುವೆ
ಮುಖದ ನಗುವನ್ನು

ನೀನು ನೀಡಿದ
ಸುಂದರ ಮುತ್ತು
ತಂದಿದೆ ಇಂದು ಜೀವಕೆ ಕುತ್ತು
ಮನಸಿನ ಅರಮನೆಗೆ ರಾಜ
ನೀನಾಗುವೆ ಅನಿಸಿತ್ತು
ಈ ನೋವಿನ ಸಂದರ್ಭದಿ
ನೀ ನನ್ನೊಂದಿಗೆ ಬೇಕಿತ್ತು
ನನ್ನ ಜೀವದ ಕೊನೆಯಶ್ವಾಸವು
ಹೇಳುವ ಒಂದೆಸರು
ಪ್ರೀತಿ ಮಾಡಿ ಅಗಲಿದ ಹುಡುಗನೆ
ನಿನಗಾಗಿಯೇ ಈ ಉಸಿರು

ಮೋಡ ಕವಿದ ವಾತವರಣ
ದಿನ ನೆನೆದೆನು ಮಳೆಯಲ್ಲಿ
ಕಣ್ಣಲಿ ಸುರಿಯುವ
ಹನಿ ಜಾರಿದೆ
ಮುಂಗಾರಿನ ನೀರಿನಲಿ…

ಈ ಲೋಕ ಶಾಶ್ವತವೇ ಅಲ್ಲ
ಇರುವ ದಿನ ನನಗೆ
ಪ್ರೀತಿಯೇ ಎಲ್ಲ
ಸೇರುವ ಆಸೆಯ ಬದಿಗೆ ಸರಿಸಿ
ದೂರದೆ ಹೇಳು ನನ್ನನ್ನು ಅಳಿಸಿ
ನಿನಗೆ ನಾನು ನೀಡಿದ ಪ್ರೀತಿ
ನೂರು ಜನ್ಮದಲೂ
ಯಾರು ಕೊಡುವರು
ಮನಸಲಿ ಭಾವನೆ ಇಲ್ಲದ ರೀತಿ
ಎಸೆದೆ ನನ್ನ ಸುಂದರ ಪ್ರೀತಿ

ಒಂದಲ್ಲ ಒಂದು ದಿವಸ
ನಿನಗೆ ಅರಿವಾಗಲಿದೆ
ನೀನು ಮಾಡಿದ ಮೋಸವೆ
ನಿನಗೆ ತಿರುಗಿ ನಿಲ್ಲಲಿದೆ
ಆ ದಿನ ನೀನು ನನ್ನ ಹುಡುಕಿ
ಬಂದರು ಲಾಭವಿಲ್ಲ..
ನಿನ್ನ ಪಾಲಿಗೆ ನಾನು ಅಂದು
ಬದುಕಿ ಉಳಿದಿಲ್ಲ….

ಮೋಡ ಕವಿದ ವಾತವರಣ
ದಿನ ನೆನೆದೆನು ಮಳೆಯಲ್ಲಿ
ಕಣ್ಣಲಿ ಸುರಿಯುವ
ಹನಿ ಜಾರಿದೆ
ಮುಂಗಾರಿನ ನೀರಿನಲಿ
ನೋವನು ಅನುಭವಿಸಿದ
ಹೃದಯವು ಕುಳಿತಿದೆ ಕತ್ತಲಿನಲ್ಲಿ
ನನ್ನ ನೆರಳಿಗೂ
ಅಂಜಿಕೆಯಾಗಿದೆ
ನಡೆಯಲು ಬೆಳಕಿನಲಿ
ಮೋಡ ಕವಿದ ವಾತವರಣ
ದಿನ ನೆನೆದೆನು ಮಳೆಯಲ್ಲಿ
ಕಣ್ಣಲಿ ಸುರಿಯುವ
ಹನಿ ಜಾರಿದೆ
ಮುಂಗಾರಿನ ನೀರಿನಲ್ಲಿ…

Leave a Comment

Contact Us