Neenu bagehariyada haadu lyrics ( ಕನ್ನಡ ) – Gaalipata 2

Neenu bagehariyada haadu song details :

  • Song : Neenu bagehariyada haadu
  • Singer : Nihal Tauro
  • Lyrics : Jayant kaikini
  • Movie : Gaalipata 2
  • Music : Arjun Janya
  • Label : Anand audio

Neenu bagehariyada haadu lyrics in kannada

ನೀನು ಬಗೆಹರಿಯದ ಹಾಡು
ನೋಡು ಹದಿಹರೆಯದ ಪಾಡು
ಈ ವಿಷಯದಿ ನನಗೆ
ಅನುಭವವು ಕಮ್ಮಿ
ಎಷ್ಟಂದರೂ ನಾನು ಉದಯೋನ್ಮುಖ ಪ್ರೇಮಿ
ಇದು ಖಾಸಗಿ ಕಾರ್ಯಕ್ರಮ ಇನ್ನೇನಿಲ್ಲ

ನೀನು ಬಗೆಹರಿಯದ ಹಾಡು
ನೋಡು ಹದಿಹರೆಯದ ಪಾಡು

ನನಗಷ್ಟೇ ನೀನು ಕೊಡುವಾಗ ಪಾಠ
ಹೃದಯಾನೆ ನನ್ನ ಗುರುದಕ್ಷಿಣೆ
ತುಟಿ ಕಚ್ಚಿ ಆಹಾ ಬರೆವಾಗ ನೀನು
ನನಗಂತೂ ಬೇಕು ಹಿತರಕ್ಷಣೆ
ಕನಸಂತೂ ಈಗ ಚಿರಪರಿಚಿತ ಊರು
ಹುಚ್ಚಾದರೆ ಪೂರ್ತಿ ಹೊಣೆಗಾರರು ಯಾರು?
ದಯಪಾಲಿಸು ಕಿರು ಕಾಳಜಿ ಇನ್ನೇನಿಲ್ಲ
supercinelyrics.com

ನೀನು ಬಗೆಹರಿಯದ ಹಾಡು

ಏಕಾಂಗಿಯಾದ ನಿನ ಕೋಣೆಯಲ್ಲಿ
ನಾನಾಗಬೇಕು ನಿಲುಗನ್ನಡಿ
ಅಥವಾ ನೀ ಬಂದು ರುಚಿ ನೋಡಿ ನೋಡಿ
ಚೌಕಾಸಿ ಮಾಡೋ ಸಿಹಿ ಅಂಗಡಿ
ಜೊತೆ ಸೇರಿಸಿ ಹೆಸರ..
ಬರೆದಲಳಿಸುವ ಗೀಳು
ಮುಖ ಮರೆಸುವ ಹೆರಳ..
ಬದಿಸರಿಸಲೇ ಹೇಳು?
ಪಟ್ಯೇತರ ಚಟುವಟಿಕೆಯು ಇನೆನ್ನಿಲ್ಲ..

ನೀನು ಬಗೆಹರಿಯದ ಹಾಡು
ನೋಡು ಹದಿಹರೆಯದ ಪಾಡು

Neenu bagehariyada haadu song video :

Leave a Comment

Contact Us