Modala Male song info :
Song | Modala Male |
Singers | Sanjith Hegde |
Lyrics | Hrudaya Shiva |
Movie | Thothapuri Chapter 2 |
Music | Arun Andrew |
Label | Moniflix Audios |
Modala Male song lyrics in kannada :
ಮೊದಲ ಮಳೆ ಸಾಂಗ್ ಲಿರಿಕ್ಸ್
ಮೊದಲ ಮಳೆ ಮನದೊಳಗೆ
ಸುರಿದಿದೆ ಎಡೆಬಿಡದೆ
ಮೊದಮೊದಲ ಮಿಡಿತವಿದು
ಒಲವಿಗೆ ತುಡಿಯುತಿದೆ
ಮೊದಲ ಸುಂದರ ಕನಸು
ಗಮ್ಮನೆ ಅರಳುತಿದೆ
ಕದವಿರದ ಹೃದಯವಿದು
ನಿನಗಾಗಿ ಕಾಯುತಿದೆ
supercinelyrics.com
ಮೊದಲ ಮಳೆ ಮನದೊಳಗೆ
ಸುರಿದಿದೆ ಎಡೆಬಿಡದೆ
ಮೊದಮೊದಲ ಮಿಡಿತವಿದು
ಒಲವಿಗೆ ತುಡಿಯುತಿದೆ
ಮುಗಿಲುಗಳ ದಿಬ್ಬಣವು
ಹೊರಟಿದೆ ಬಾಂದಳದಲ್ಲಿ
ಕವಿತೆಗಳ ಮೆರವಣಿಗೆ
ಸಾಗಿದೆ ನನ್ನೆದೆಯಲ್ಲಿ
ಜಡಿಮಳೆಯ ಶೃತಿಯೊಡನೆ ಜೀರುಂಡೆಯ ಸವಿಗಾನ
ಕೊಡೆಯಡಿ ನೀ ಜೊತೆಯಾಗು
ಬದುಕಿಗದೆ ಬಹುಮಾನ
ಈ ಮನದ ಚಿಪ್ಪಿನಲಿ ಮಾಡುವೆನು ಜೋಪಾನ
(music)
ಇಳೆಯೆದೆಯ ವಿರಹವನೂ ತಣಿಸಿದೆ ಹನಿಗಳ ಬಳಗ
ಇಳಿಯಲು ನೀ ಎದೆಯೊಳಗೆ
ಮಿಡಿದಿದೆ ಮೌನದ ರಾಗ
ಮೋಡಗಳ ಊರಿನಲಿ ಮಿಂಚು ಗುಡುಗುಗಳ ಸಂತೆ
ಬಿಗಿದಪ್ಪಿ ನಿಂತರೆ ನೀ
ಹೊಸ ಜನ್ಮ ಪಡೆದಂತೆ
ಇರು ಹುಡುಗಿ ಜೊತೆಯಾಗಿ ನೆಲಮುಗಿಲ ಒಲವಂತೆ
ಮೊದಲ ಮಳೆ ಮನದೊಳಗೆ
ಸುರಿದಿದೆ ಎಡೆಬಿಡದೆ
ಮೊದಮೊದಲ ಮಿಡಿತವಿದು
ಒಲವಿಗೆ ತುಡಿಯುತಿದೆ
ಮೊದಲ ಸುಂದರ ಕನಸು
ಗಮ್ಮನೆ ಅರಳುತಿದೆ
ಕದವಿರದ ಹೃದಯವಿದು
ನಿನಗಾಗಿ ಕಾಯುತಿದೆ
ಮೊದಲ ಮಳೆ ಮನದೊಳಗೆ
ಸುರಿದಿದೆ ಎಡೆಬಿಡದೆ
ಮೊದಮೊದಲ ಮಿಡಿತವಿದು
ಒಲವಿಗೆ ತುಡಿಯುತಿದೆ
supercinelyrics.com