Midiva ninna song details :
- Song : Midiva ninna
- Singer : Sonu Nigam, Shreya Ghoshal
- Lyrics : Jayanth Kaikini
- Movie : Rajaadaani
- Music : Arjun Janya
- Label : Anand audio
Midiva ninna lyrics in kannada
ಮಿಡಿವ ನಿನ್ನ ಹೃದಯದಲ್ಲಿ ಕೊಡಲೇ ನಾ ಹಾಜರಿ
ದಿನವೂ ನನ್ನ ಕನಸಿನಲ್ಲಿ ಬರುವೆಯಾ ಖಾತರಿ
ಸರಿಯಾಗಿ ಕಣ್ಣಲ್ಲಿ ಬೀಳುತಾ
ನವಿರಾಗಿ ಏನನ್ನು ಹೇಳುತಾ
ನನ್ನನು ಅಪಹರಿಸಿದೆ ನೀನು
ಮಿಡಿವ ನಿನ್ನ ಹೃದಯದಲ್ಲಿ ಕೊಡಲೇ ನಾ ಹಾಜರಿ
( ಕಣ್ಣಾ ಮುಚ್ಛೇ ಕಾಡೇ ಗೂಡೇ
ಉಪ್ಪಿನ ಮೂಟೆ ಉರುಳೇ ಹೋಯ್ತು
ನಮ್ಮ ಹಕ್ಕಿ ನಿಮ್ಮ ಹಕ್ಕಿ ಬಿಟ್ಟೆ ಬಿಟ್ಟೆ
ಕಣ್ಣಾ ಮುಚ್ಛೇ ಕಾಡೇ ಗೂಡೇ
ಉಪ್ಪಿನ ಮೂಟೆ ಉರುಳೇ ಹೋಯ್ತು
ನಮ್ಮ ಹಕ್ಕಿ ನಿಮ್ಮ ಹಕ್ಕಿ ಬಿಟ್ಟೆ ಬಿಟ್ಟೆ )
ಇಲ್ಲೇ ಎಲ್ಲೋ ನೀನು ಅವಿತಿರುವಂತೆ
ಖುಷಿಪಡುತಿದೆ ಮೈಮನ
ಚಂದ ಚಂದ ನೂರು ಕರೆಯನು ಮಾಡಿ
ಪಿಸುಗುಡುತಿದೆ ಯೌವ್ವನ
ಋತುಮಾನಕೂ ಬಣ್ಣ ಬಂತು ಇಡೀ ದಿನ ಕಾಯುತ
ಅತಿಯಾಸೆಗೂ ಭಾಷೆ ಬಂತು ಇನಿ ದನಿ ಕೇಳುತ
ಚೆಲುವಾಗಿ ಕಣ್ಣಲ್ಲೇ ಆಡಿಸಿ
ನೆನಪಾಗಿ ನಿಂತಲ್ಲೇ ಪೀಡಿಸಿ
ನನ್ನನು ಅಪಹರಿಸಿದೆ ನೀನು
supercinelyrics.com
ಮಿಡಿವ ನಿನ್ನ ಹೃದಯದಲ್ಲಿ ಕೊಡಲೇ ನಾ ಹಾಜರಿ
ದಿನವೂ ನನ್ನ ಕನಸಿನಲ್ಲಿ ಬರುವೆಯಾ ಖಾತರಿ
ಒಂದೇ ಒಂದು ಮಾತು ನುಡಿಯದೆ ನೀನು
ಕನವರಿಕೆಯ ಆಲಿಸು
ಎಂದೂ ಕೂಡ ನಿನ್ನ ಜೊತೆ ಇರುವಂತೆ
ಕನಸನು ದಯಪಾಲಿಸು
ಅಪರೂಪದ ನಿನ್ನ ರೂಪ ಸಮೀಪವೆ ಕಾಡಿದೆ
ದಿನ ರಾತ್ರಿಯೂ ಇನ್ನು ಈಗ ಇದೆ ಕಥೆಯಾಗಿದೆ
ಅಂಗೈಲಿ ಬೆರಳಿಂದ ಗೀರುತಾ
ಮುದ್ದಾದ ಬೆಳಕನ್ನು ಬೀರುತಾ
ನನ್ನನು ಅಪಹರಿಸಿದೆ ನೀನು
ಮಿಡಿವ ನಿನ್ನ ಹೃದಯದಲ್ಲಿ ಕೊಡಲೇ ನಾ ಹಾಜರಿ
ದಿನವೂ ನನ್ನ ಕನಸಿನಲ್ಲಿ ಬರುವೆಯಾ ಖಾತರಿ