Kanasella Nanasaago – Sanjit hegde Lyrics
Singer | Sanjit hegde |
About the song
▪ Song Name : Kanasella Nanasaago
▪ Singer : Sanjith Hegde
▪ Lyrics : Lokesh B S
▪ Music : Poornachandra Tejaswi
▪ Movie : Babru
Lyrics
ಕನಸೆಲ್ಲಾ ನನಸಾಗೊ
ಕನಸೆಲ್ಲಾ ನನಸಾಗೊ
ಈ ದಾರಿ ಸೊಗಸಾಗಿದೆ
ನಿನ್ನನ್ನು ನೋಡುವ ಆಸೆ
ನನ್ನದಾಗಿದೆ
ಕನಸೆಲ್ಲಾ ನನಸಾಗೊ
ಈ ಯಾನ ಹೊಸದಾಗಿದೆ
ನಿನ್ನನ್ನು ಸೇರುವ ಆಸೆ
ಅತಿಯಾಗಿದೆ
ಮರೆಯಾಗಿ ನೀನು
ಕೂಗುತ ಒಮ್ಮೆ ಕರೆದರೆ
ಬಾನಾಡಿಯಾಗಿ ಹಾರುತ
ನಿನ್ನ ಕೈಸೆರೆ
ಸಾಗರದ ಅಲೆಗಳೆಲ್ಲ
ಚುಂಬಿಸಲು ತೀರವನ್ನು
ಕುಣಿ ಕುಣಿದು ಬರುವುದೇ
ಬಲು ಸುಂದರ….
ಕಂಗೊಳಿಸೊ ಹಸಿರೆಲ್ಲಾ
ಕಾಣಿಸದ ಗಾಳಿಯನ್ನು
ಹಂಬಲಿಸಿ ಸ್ಪರ್ಶಿಸಲು
ತುಸು ಕಾತುರ
ಜಗವನ್ನು ಸುತ್ತಿ ಸಾಗುವ
ಪಯಣವೆ ಸುಂದರ
ಅದರಲ್ಲೂ ನೂರು ಸಾವಿರ
ನೆನಪುಗಳೆ ಅಮರ…
ಆ ಆ ಆ ಆ ಆ ಆ….
ಕನಸೆಲ್ಲಾ ನನಸಾಗೊ
ಈ ದಾರಿ ಸೊಗಸಾಗಿದೆ
ನಿನ್ನನ್ನು ಸೆರುವ ಆಸೆ
ಅತಿಯಾಗಿದೆ
ತನನನಾ ತನನನಾ
ತನನನ ತನನನ
ಕನ್ನಡಿಯು ಚೂರಾಗಿ
ಪ್ರತಿಬಿಂಬ ನೂರಾಗಿ
ನಿನ್ನೆಡೆಗೆ ನೋಡುತಲಿ
ನಗುತಿಹುದು ಜೋರಾಗಿ
ಓಡುತ ನಿಂತಿಹೆ
ಕವಲುದಾರಿಯ ಅಂಚಲಿ
ಪ್ರಶ್ನೆಗೆ ಉತ್ತರ ಹುಡುಕುತ
ಹುಡುಕುತಾ…
ಆ ಆ ಆ ಆ
ಕನಸೆಲ್ಲಾ ನನಸಾಗೊ
ಈ ದಾರಿ ಸೊಗಸಾಗಿದೆ
ನಿನ್ನನ್ನು ನೋಡುವ ಆಸೆ
ನನ್ನದಾಗಿದೆ
ಕನಸೆಲ್ಲಾ ನನಸಾಗೊ
ಈ ಯಾನ ಹೊಸದಾಗಿದೆ
ನಿನ್ನನ್ನು ಸೇರುವ ಆಸೆ
ಅತಿಯಾಗಿದೆ
ಮರೆಯಾಗಿ ನೀನು
ಕೂಗುತ ಒಮ್ಮೆ ಕರೆದರೆ
ಬಾನಾಡಿಯಾಗಿ ಹಾರುತ
ನಿನ್ನ ಕೈಸೆರೆ