Jai ganesha ninage vandane song details :
- Song : Jai ganesha ninage vandane
- Singer : Rajesh Krishnan
- Lyrics : Hamsalekha
- Music : Hamsalekha
- Label : Anand audio
Jai ganesha ninage vandane lyrics in kannada
ಜೈ ಗಣೇಶ ನಿನಗೆ ವಂದನೆ
ಸಾಂಗ್ ಲಿರಿಕ್ಸ್
ಜೈ ಗಣೇಶ ನಿನಗೆ ವಂದನೆ
ಸುಪ್ರಭಾತ ನಿನಗೆ ಹೃದಯದರ್ಚನೆ
ದಿವ್ಯ ದಿವ್ಯ ಮೂರುತಿ
ನಮ್ಮ ಭವ್ಯ ಬಾಳ ಸಾರಥಿ
ಅಗ್ರ ಪೂಜೆಗಧಿಪತಿ
ಸಂಕಷ್ಟಹರ ಗಣಪತಿ
ಗೌರಿ ಪುತ್ರ ನಿನಗೆ ವಂದನೆ
ವರದ ಹಸ್ತ ನಿನಗೆ ಹೃದಯದರ್ಪಣೆ
ಸಿದ್ಧಿ ಬುದ್ಧಿ ಶ್ರೀಪತಿ
ಸಕಲ ಶಾಸ್ತ್ರ ವಿದ್ಯಾ ಕುಲಪತಿ
ಆದಿ ಪೂಜೆಗದಿಪತಿ
ಸಂಕಷ್ಟಹರ ಗಣಪತಿ
ಈಶ ಪುತ್ರ ನಿನಗೆ ವಂದನೆ
ಸತ್ಯ ನಿಷ್ಠಾ ನಿನಗೆ ಸುಪ್ರದಕ್ಷಿಣೆ
ಜಯ ಜಯ ಜಗಜ್ಜ್ಯೋತಿ
ಸಪ್ತ ಲೋಕ ಕೀರುತಿ
ಪ್ರಥಮ ಪೂಜೆಗಧಿಪತಿ
ಸಂಕಷ್ಟ ಹರ ಗಣಪತಿ
ಗಜಾನನ ನಿನಗೆ ವಂದನೆ
ಸರ್ವ ಶಕ್ತ ನಿನಗೆ ಮೋದಕಾರ್ಪಣೆ
ಮಂಗಳಾಂಗ ಮೂರುತಿ
ಪ್ರಾಣ ವಾಯು ನಿನ್ನ ಕೀರುತಿ
ಮಹಾ ಕಾಯ ಭೂಪತಿ
ಸಂಕಷ್ಟ ಹರ ಗಣಪತಿ
supercinelyrics.com
ಏಕದಂತ ನಿನಗೆ ವಂದನೆ
ವಕ್ರತುಂಡ ನಿನಗೆ ಪುಷ್ಪದರ್ಪಣೆ
ವ್ಯಾಸರಾಯ ವಂದಿತ
ವೇದ ವೇದ ವಾಗ್ಪತಿ
ಮಹಾ ಕಾವ್ಯ ವಿರಚಿತ
ಸಂಕಷ್ಟ ಹರ ಗಣಪತಿ
ವಿಘ್ನರಾಜ ನಿನಗೆ ವಂದನೆ
ನಿತ್ಯ ವಿಜಯಿ ನಿನಗೆ ಗಂಧದರ್ಪಣೆ
ಮಹಾಕರ್ಣ ನಿನಗೆ ವಂದನೆ
ಕಾಲ ಜ್ಞಾನಿ ನಿನಗೆ ಮಂತ್ರದರ್ಪಣೆ
ರಾಮಚಂದ್ರ ಪೂಜಿತ
ಸಾಮಗಾನ ಸುಶ್ರುತಿ
ಸುರಗಣಾದಿ ವಂದಿತಾ
ಸಂಕಷ್ಟ ಹರ ಗಣಪತಿ
ಲಂಬೋದರ ನಿನಗೆ ವಂದನೆ
ತೆಂಗು ಬಾಳೆ ಬೆಲ್ಲ ನಿನಗೆ ಅರ್ಪಣೆ
ತಂದೆ ತಾಯಿ ಇಬ್ಬರೆ
ಮೂರು ಲೋಕವೆಂದ ದೃತ್ಪತಿ
ಸುಬ್ರಹ್ಮಣ್ಯ ಅಗ್ರಜ
ಸಂಕಷ್ಟ ಹರ ಗಣಪತಿ
ಭಕ್ತ ಕವಚ ನಿನಗೆ ವಂದನೆ
ನಿನ್ನ ಕಿವಿಯಲಿರಲಿ ನಮ್ಮ ಪ್ರಾರ್ಥನೆ
ರಾಘವೇಂದ್ರ ಅರ್ಚಿತಾ
ಸುಪ್ರಸನ್ನ ಸತ್ಪತಿ
ಆರ್ತ ರಾತ್ಮ ಕಾಶ್ರಿತಾ
ಸಂಕಷ್ಟ ಹರ ಗಣಪತಿ
ಜ್ಞಾನವಂತ ನಿನಗೆ ವಂದನೆ
ಮಧುರ ಮಧುಪರ್ಕ ನಿನಗೆ ಅರ್ಪಣೆ
ಪಾಶಾ ಅಂಕುಶಧಾರಾ
ವಿಶ್ವ ರೂಪ ಸುಂದರಾಕೃತಿ
ಶುಭ್ರ ಪೀತಾಂಬರ
ಸಂಕಷ್ಟಹರ ಗಣಪತಿ
ಬ್ರಹ್ಮ ತೇಜ ನಿನಗೆ ವಂದನೆ
ಅಗ್ನಿ ಗರ್ಭ ಪುತ್ರ
ಸ್ವಯಂ ಪೂರ್ಣನೇ
ಪಾಹಿ ತ್ರೈಗುಣೇಶ್ವರ
ಆನಂದ ಪ್ರೇಮ ಪ್ರಕೃತಿ
ಪಾಹಿ ಸಂತ ಕಿಂಕರಾ
ಸಂಕಷ್ಟ ಹರ ಗಣಪತಿ
supercinelyrics.com
ಸಚ್ಚಿದಾನಂದ ವಿಗ್ರಹ
ಮಾಡೋ ಕಾಮ ಕ್ರೋಧ ಲೋಭ ನಿಗ್ರಹ
ಗಾನ ಪದ್ಯ ಗುರುವೇ ಪಾಹಿಮಾ
ನಿತ್ಯ ಪರಮ ಸತ್ಯ ಸ್ತೋತ್ರ ಪಾಹಿಮಾ ॥
ದಯಾ ಧರ್ಮ ಪ್ರೇರಕ
ಭರತಷ್ಟ ದಿಗ್ಪತಿ
ಜ್ಞಾನ ಬುದ್ಧಿ ಕಾರಕ
ಸಂಕಷ್ಟ ಹರ ಗಣಪತಿ
ಮೂಶಿಕೇಶ್ವರಾಯ ಪಾಹಿಮಾ
ತ್ರಾಹಿ ಮೋದಕ ಪ್ರಿಯಾಯ ಪಾಹಿಮಾ
ಬಾಲ ವೃದ್ಧ ಸೇವಿತಾ
ಹೇ ಸಜೀವ ಸಂಸ್ಕೃತಿ
ವಿಶ್ವ ವಂದ್ಯ ಪೂಜಿತ
ಸಂಕಷ್ಟ ಹರ ಗಣಪತಿ
ಸೋಮ ಸೂರ್ಯ ಅಗ್ನಿ ಲೋಚನ
ಪಾಹಿ ಪಾಹಿ ಪಾಹಿ ಶ್ರೀ ಗಜಾನನ
ಪುಣ್ಯ ಪಾರಾಯಣ
ತರಲಿ ನಮಗೇ ಸದ್ಗತಿ
ಮನದ ಮನೆಯ ತೋರಣ
ಸಂಕಷ್ಟ ಹರ ಗಣಪತಿ
ವಾತಾಪಿ ಗಣಪತಿಂ ಭಜೇ
ಭೂತ ಭೂತಿಕ ಪ್ರಕಾಶಿತಂ ಭಜೇ
ದಕ್ಷ ಅಧಕ್ಷಯನೇ
ಹೇ ಸರ್ವ ಧರ್ಮ ಸನ್ಮತಿ
ವಿನಯ ವಿದ್ಯಾ ವೀರನೇ
ಸಂಕಷ್ಟ ಹರ ಗಣಪತಿ
ಶಿವ ಗಣೇಶ ಪಾಹಿ ಪಾಹಿ ಪಾಹಿಮಾ
ಆತ್ಮ ಶಿವ ಪ್ರಕಾಶ ಪಾಹಿ ಪಾಹಿ ಪಾಹಿಮಾ ॥
ಶಾಶ್ವತಾಯ ಪಾಹಿಮಾ
ಕೋಟಿ ಸೂರ್ಯ ಪ್ರಜ್ವಲಾರತಿ
ಅಕಲ್ಮಶಾಯ ಪಾಹಿಮಾ
ಸಂಕಷ್ಟ ಹರ ಗಣಪತಿ
ಓಂ ಸ್ವರಂ ಸುರೇಶ್ವರಂ ಭಜೇ
ಕಲಾಧರ ವತಂಸಕಂ ಭಜೇ
ಚೌತಿ ಶುಕ್ಲ ಚಂದ್ರ ದರ್ಶನ
ಲೋಕ ನಿಂದೆ ಮಾನ ಮರ್ಧನ
ಚಂದ್ರ ನಕ್ಕ ಕಾರಣ ಶಾಪವಿತ್ಥ ಗಜಪತಿ
ಮತ್ತೇ ತಾನೆ ಮುಕ್ತಿ ನೀಡಿದ
ಸಂಕಷ್ಟ ಹರ ಗಣಪತಿ
supercinelyrics.com
ಯಾರಿಗಿಲ್ಲ ಲೋಕ ನಿಂದನೆ
ನೊಂದು ನುಡಿದ ಅಂತ ಶ್ರೀ ಕೃಷ್ಣನೇ
ಶಮಂತಕ ಮಣಿಯನು
ಕಡದಾನಂತೆ ಯಧುಪತಿ
ನಕ್ಕ ಲೋಕ ನಿಂದೆಗೆ
ಸಂಕಷ್ಟ ಹರ ಗಣಪತಿ
ವಾಸುದೇವ ನೆನೆದ ವಿಘ್ನನಾ
ವಿಘ್ನ ರಾಜ ನಡೆಸಿ ತಂದ ಕೃಷ್ಣನಾ
ಕಾಡು ಮೇಡು ಅಲೆದನು
ಚೋರತ್ವ ಕಲೆಯೇ ಯಧುಪತಿ
ಕೋಟಿ ಬಾರಿ ಜಪಿಸಿದ
ಸಂಕಷ್ಟ ಹರ ಗಣಪತಿ
ಸಿಂಹ ಕೊಂಡ ರಾಜಾನುಜನ
ಜಾಂಬವಂತ ಕೊಂಡ ಸಿಂಹ ರಾಜನ
ನಿಂದಿಸಿದ ಜನರಿಗೆ ತೋರಿದ ಗೋಕುಲಪತಿ
ಮುಂದೆ ದಾರಿ ತೋರಿದ
ಸಂಕಷ್ಟ ಹರ ಗಣಪತಿ
ಕೃಷ್ಣ ಹೊರಟು ನಿಂತ ಛಲದಲಿ
ಸತ್ಯ ಶೋಧಕಾಗಿ ಸುಳಿದ ಗುಹೆಯಲಿ
ಜನರು ಕಾದು ಹೋದರು
ಬಹುಕಾಲ ಬರದೇ ಯಧುಪತಿ
ಕಾಡು ನಿಂತ ನಾಯಕ
ಸಂಕಷ್ಟ ಹರ ಗಣಪತಿ
ರಾಮ ಭಕ್ತ ಜಾಂಬವಂತನು
ಕೃಷ್ಣ ಶಕ್ತಿ ತಿಳಿಯದೆ ದಣಿದನು
ವಿಘ್ನ ಕರ್ತ ನೋಡಿ ನಲಿದನು
ಭಕ್ತ ದೇವರೊಳಗಿನ ಕದನವನು
ಕೃಷ್ಣನಲ್ಲಿ ರಾಮ ಪ್ರದರ್ಶಿಸಿದ ಯಧುಪತಿ
ಕುಣಿದ ಕಥಾ ಕಾರಕ
ಸಂಕಷ್ಟ ಹರ ಗಣಪತಿ
ಸೋತು ಧನ್ಯನಾದ ಭಕ್ತನು
ಕೊಟ್ಟ ಮಾನಿಯ ಜೊತೆಗೇ ಕನ್ಯಾ ಮಣಿಯನು
ದೇವರನ್ನೆ ಪಡೆದಳು ರೂಪವತಿ ಜಾಂಬವತಿ
ಕನ್ಯಾ ಲಾಭ ನೀಡಿದ
ಸಂಕಷ್ಟ ಹರ ಗಣಪತಿ
ಮಣಿಯ ತಂದ ಮನೆಗೆ ಮಾಧವ
ನಿಂದೆಯಿಂದ ಮುಕ್ತನಾದ ಯಾದವ
ಹರ್ಷ ಸ್ತೋತ್ರ ವರ್ಷಾದಿ
ಮಿಂದು ನಲಿದ ಯಧುಪತಿ
ಕೀರ್ತಿ ಲಾಭ ನೀಡಿದ
ಸಂಕಷ್ಟ ಹರ ಗಣಪತಿ
supercinelyrics.com
ಸತ್ರಾರ್ಜಿತನ ಶಂಕೆ ಹರಿಯಿತು
ಕ್ಷಮೆಗೆ ಲೋಕ ಕಲ್ಯಾಣವಾಯಿತು
ಸತ್ಯಭಾಮಾ ದೇವಿ
ಮದುವೆಯಾದ ಶ್ರೀಪತಿ
ವೈಕುಂಠ ಭೂಮಿ ಬೆರಸಿದ
ಸಂಕಷ್ಟ ಹರ ಗಣಪತಿ
ಘಟನೆಗಳಿಗೆ ವಿಘ್ನ ಕಾರಣ
ವಿಘ್ನ ರಾಜನಿಂದ ಅವು ನಿವಾರಣಾ
ಕೃಷ್ಣ ಕಥೆಯ ಆಲಿಸೆ
ನಿಂದೆಯಿಂದ ವಿಮುಕ್ತಿ
ಪೊರೆವ ವೃತ್ತವ ಪಾಲಿಸೆ
ಸಂಕಷ್ಟ ಹರ ಗಣಪತಿ
ದೇವ ದೇವ ದೇವ ಗಣಪತಿ
ನಿನ್ನ ನಾಮ ಸ್ಮರಣೆಯಿಂದ ಸನ್ಮತಿ
ಪಾಹಿ ಪಾಹಿ ಪಾಹಿ ಗಣಪತಿ
ನಿನ್ನ ಪಾದ ಸ್ಪರ್ಶದಿಂದ ಸದ್ಗತಿ
ವೇದ ವೇದ ಸಾಗರ
ವೇದವ್ಯಾಸ ಸಹಮತಿ
ಶುಕ್ಲಾಂಭರದ
ಸಂಕಷ್ಟ ಹರ ಗಣಪತಿ
ನಾದ ನಾಟ್ಯ ಬ್ರಹ್ಮ ಗಣಪತಿ
ನಿನ್ನ ಲೀಲೆಯೊಳಗೆ ನಮಗೇ ಸನ್ಮತಿ
ಪ್ರಥಮ ಪೂಜೆಗೊಪ್ಪಿದ
ಪ್ರಳಯ ರುದ್ರ ಪಶುಪತಿ
ಬಾಲ ದೈವ ಲೋಕಕೇ
ಸಂಕಷ್ಟ ಹರ ಗಣಪತಿ
ನಮೋ ನಮೋ ಬಾಲ ಗಣಪತಿ
ನೀನು ಗಗನ ತುಂಬೋ ವಿಶಾಲಾಕೃತಿ
ನಿತ್ಯ ಧನ್ಯದಳು
ನಿನ್ನ ಹೆತ್ತ ಪಾರ್ವತಿ
ಆದಿ ಸೃಷ್ಟಿ ಯೆನಿಸಿದೆ
ಸಂಕಷ್ಟ ಹರ ಗಣಪತಿ
ಬಾಳೆ ಬೆಲ್ಲ ನಿನಗೆ ಗಜಪತಿ
ಕಡುಬು ಕಬ್ಬು ಕೊಬರಿ ನಿನಗೆ ಗಣಪತಿ
ಬಲದ ಹಸ್ತವಾದಳು
ನಿನಗೆ ತಾಯಿ ಸರಸ್ವತಿ
ಆತ್ಮ ಬಲವು ಲೋಕಕೆ
ಸಂಕಷ್ಟ ಹರ ಗಣಪತಿ
supercinelyrics.com
ಜಯ ಹೋ ಜಯ ಹೋ ಜಯ ಹೋ ಗಣಪತಿ
ಧರೆಗೆ ಶಾಂತಿ ಸುಖವ ತರಲಿ
ಗಣಸ್ತುತಿ
ಸೂರ್ಯ ಚಂದ್ರರಿಂದಲೆ
ನಿನಗೆ ಮಂಗಳಾರತಿ
ಒಪ್ಪಿಸಿಕೋ ಭಕ್ತರಾ
ಸಂಕಷ್ಟ ಹರ ಗಣಪತಿ
ಓಂ ಶಾಂತಿ ಓಂ ಗಣಪತಿ
ಶಾಂತಿ ಓಂ ಶಾಂತಿ ಓಂ ಗಣಪತಿ
1 thought on “Jai ganesha ninage vandane lyrics ( ಕನ್ನಡ ) – Rajesh krishnan”