Categories
Meghana Haliyal

Hodirale Halagi song lyrics – Garadi

Hodirale Halagi song details :

Song Hodirale Halagi
SingersMeghana Haliyal
Lyrics Yogaraj Bhat
MovieGaradi
MusicV Harikrishna
LabelSaregama kannada

Hodirale Halagi lyrics in kannada :

ಹೊಡಿರೆಲೇ ಹಲಗಿ ಹೊಡಿರೆಲೇ ಹಲಗಿ
ನಾ ನಿಮ್ ಕಡೆ ಹುಡುಗಿ ತೆಗಿರಲೇ ನೆಟಗೆ

ಬಲಗೈಯ್ಯಾಗ ದೊಡ್ಡಕಡ್ಡಿ
ಯಡಗೈಯ್ಯಾಗ ಶಣ್ಣ ಕಡ್ಡಿ
ನಡು ಬಟ್ಟೇಲಿ ಚರ್ಮ ವಾದ್ಯ

ಬರ್ರ್ಯೆಲೇ ಗಂಗ್ಯಾ ಬುದ್ಯಾ ನಿಂಗ್ಯಾ

ಹೊಡಿರೆಲೇ ಹಲಗಿ ಹೊಡಿರೆಲೇ ಹಲಗಿ
ನಾ ನಿಮ್ ಕಡೆ ಹುಡುಗಿ ತೆಗಿರಲೇ ನೆಟಗೆ

ಒಂತೊಟ್ಟು ಎಣ್ಣಿನ ಒಳಘಾಕು
ನಿಂದಷ್ಟು ಫೀಲಿಂಗು ಹೊರಘಾಕು
ಗೆದ್ದಾಗ ತೊಡಿ ತಟ್ಟಿ ಕುಣಿಬಾಕು
ಪ್ರಶಸ್ತಿ ಎದೆ ತಟ್ಟಿ ಹಿಡಿಬಾಕು

ಕಡಮಿ ಕುಡಿದರು ಕುಡುಕ ಅಂತಾರ
ಹೆಚ್ಚಿಗೆ ಹೀರಲೇ ಮಗನ
ಅಮಲುಗಣ್ಣಲೆ ಸೀದಾ ನೋಡಲೇ
ಹ್ಯಾಂಗೆ ಕುಣಿತಾವು ಜಘನಾ
ನಿಮ್ಮ ಮೀಸಿಗೆ ನನ್ನ ಗಲ್ಲ
ಟಚಿಂಗ್ ಆದರ ಹಲ್ಲಾ ಗುಲ್ಲಾ
ನೀವ ಸಿಕ್ಕಿದ್ದ ನಮ್ಮ ಸೌಭಾಗ್ಯಾ

ಬರ್ರ್ಯೆಲೇ ರಂಗ್ಯಾ ಪರ್ಮ್ಯಾ ರಾಗ್ಯಾ

ಹೊಡಿರೆಲೇ ಹಲಗಿ ಹೊಡಿರೆಲೇ ಹಲಗಿ
ನಾ ನಿಮ್ ಕಡೆ ಹುಡುಗಿ ತೆಗಿರಲೇ ನೆಟಗೆ

ಎತ್ತೆತ್ತಿ ಬಾಟ್ಲಿನ ಕೆಳಗಿಟ್ಟು
ತಿಳ್ಕಳ್ರಿ ಕೆಲವೊಂದು ಒಳಗುಟ್ಟು
ಎಣ್ಣಿಗು ಹೆಣ್ಣಿಗೂ ರೆಸ್ಪೆಕ್ಟು
ಕೊಟ್ರನ ಗಂಡ್ಸುರು ಪರ್ಫೆಕ್ಟು

ಪೋಲಿಯಾಗದ ಪ್ಯಾಲಿ ಜೀವನ
ಫಾಯದೆ ಇಲ್ಲಲೇ ಮಗನ
ದೀಡ ತಾಸಿನ ಮಟ್ಟಿಗೆ ನನ್ನ
ಆಗ್ತೀಯೇನಲೇ ಲಗನಾ
ಗ್ರೀನ್ ಸಿಗ್ನಲು ಮಂಜೂರಾತಿ
ನಾನ್ ಕೊಟ್ಮ್ಯಾಲೆ ಇನ್ನೆನೈತಿ
ಪಡ್ಕೊ ಬಾರಲೇ ಸುಖ ಸೌಲಭ್ಯ

ಬರ್ರ್ಯೆಲೇ ಬಸ್ಯಾ ಸುಕ್ಯಾ ನಾಗ್ಯಾ

ಹೊಡಿರೆಲೇ ಹಲಗಿ ಹೊಡಿರೆಲೇ ಹಲಗಿ
ನಾ ನಿಮ್ ಕಡೆ ಹುಡುಗಿ ತೆಗಿರಲೇ ನೆಟಗೆ

Hodirale Halagi song video :

Leave a Reply

Your email address will not be published. Required fields are marked *

Contact Us