Thanu Mana song details :
Song | Thanu Mana |
Singers | Yamini Ghantasala |
Lyrics | Nagarjun Sharma |
Movie | Yadha Yadha Hi |
Music | Sricharan Pakala |
Label | T series kannada |
Thanu Mana song lyrics in kannada :
ತನು ಮನ ಸಾಂಗ್ ಲಿರಿಕ್ಸ್
ತನು ಮನ ದಿನ ಪ್ರೀತಿ ಕೇಳಿದೆ
ಕ್ಷಣ ಕ್ಷಣ ಬೇಡಿದೆ
ಸದಾ ಸದಾ ಸದಾ ನಿನ್ನೆ ಬಯಸಿದೇ
ತರ ತರ ಕೋರಿದೆ
ಬಿಗಿದಪ್ಪು ನಿನ್ನ ತೋಳಲಿ
ಇನ್ನೇಕೆ ಅಂತರ
ನನಸಾಗೊ ನನ್ನ ಕನಸಲೀ ನೀನಾಗು ಸಹಚರ
ನಾ ಖಾಲಿ ಹಾಳೆ ಆಗುವೆ
ನೀನಾಗು ಅಕ್ಷರ
ನದಿಯಾಗಿ ಬಂದು ಸೇರುವೆ ನೀನಾಗು ಸಾಗರ
ಎಂದೆಂದಿಗೂ ಇರು ನೀ ಹತ್ತಿರ
ಈ ಜೀವಕೆ ನೀನೇನೆ ಸಡಗರ
ಎಂದೆಂದಿಗೂ ಇರು ನೀ ಹತ್ತಿರ
ಈ ಜೀವಕೆ ನೀನೇನೆ ಸಡಗರ
supercinelyrics.com
ತನು ಮನ ದಿನ ಪ್ರೀತಿ ಕೇಳಿದೆ
ಕ್ಷಣ ಕ್ಷಣ ಬೇಡಿದೆ
ಸದಾ ಸದಾ ಸದಾ ನಿನ್ನೆ ಬಯಸಿದೇ
ತರ ತರ ಕೋರಿದೆ
ದೋಚಿಕೊಂಡು ಬಿಡಲೇ
ನಿನ್ನ ಬಳಿಯೆ ಎಲ್ಲಾ ಸಮಯ
ಬರೆದು ಕೊಟ್ಟು ಬಿಡುವೆ ನೀನೆ ನಡೆಸೊ ನನ್ನ ಹೃದಯ
ಅಂದಾದ ಕನ್ನಡಿ
ನೀನಾಗು ಕೋಣೆಗೆ
ನನ್ನನ್ನ ನಿನ್ನಲೇ
ನೋಡಿಕೊಳ್ಳುವೆ ಮೆಲ್ಲಗೆ
ಸದ್ದಿಲ್ಲದೆ ನಿನ್ನ ಸೇರಲೆ
ಏಕಾಂತಕೆ ವಿದಾಯ ಹೇಳಲೆ
ಕಣ್ಣಂಚಲೆ ಸೂಚನೆಯ ನೀಡಲೇ
ನಿನ್ನಿಂದಲೇ ಈ ಪ್ರೀತಿ ಕಾಯಿಲೆ
ತನು ಮನ ದಿನ ಪ್ರೀತಿ ಕೇಳಿದೆ
ಕ್ಷಣ ಕ್ಷಣ ಬೇಡಿದೆ
ಸದಾ ಸದಾ ಸದಾ ನಿನ್ನೆ ಬಯಸಿದೇ
ತರ ತರ ಕೋರಿದೆ
ಮೋಸದಂತ ಗುರುತು ನನ್ನ ಮೈಯ್ಯಾ ಮೈಲೆ ಗೀಚು
ನನ್ನ ತುಟಿಯ
ರಂಗು ನಿನ್ನ ತುಟಿಗಳಿಂದ ಕಳಚು
ಇನ್ನೇಕೆ ಸಂಶಯ ಭರಿಸು
ನನ್ನ ಆಸೆಯ
ಸಿಹಿಯಾದ ಭಾಧೆಯ
ಅತಿಯಾಗಿ ನೀ ನೀಡೆಯಾ
ಎಂದೆಂದಿಗೂ ಇರು ನೀ ಹತ್ತಿರ
ಈ ಜೀವಕೆ ನೀನೇನೆ ಸಡಗರ
ನೀನಿದ್ದರೆ ಸನಿಹ ಸುಂದರ
ಹೇಗೆ ಹೇಳಲಿ ನನ್ನ ಕಾತುರ
supercinelyrics.com