Hey dinakara song details
- Song : Hey dinakara
- Singer : Dr Rajkumar
- Lyrics : Hamsalekha
- Movie : Om
- Music : Hamsalekha
Hey dinakara lyrics in kannada
ಓಂ ಓಂ
ಓಂ ಬ್ರಹ್ಮಾನಂದ ಓಂಕಾರ
ಆತ್ಮಾನಂದ ಸಾಕಾರ
ಓಂ ವೇದಾಂತರ್ಯ ಝೇಂಕಾರ
ಆಧ್ಯಾತ್ಮಾಭಿ ಮಧುಸಾರ
ಹೇ ದಿನಕರ, ಶುಭಕರ, ಧರೆಗೆ ಬಾ
ಈ ಧರಣಿಯ ದೇಗುಲ ಬೆಳಗು ಬಾ
ನೀಗಿಸು ಬಾಳಿನ ಅಹಂ
ಅಹಂ, ಅಹಂ, ಅಹಂ, ಅಹಂ
ಮಾನಸ ಮಂದಿರ ತುಂಬು ಓಂಕಾರ ನಾದವೋ
ಓಂ ಬ್ರಹ್ಮಾನಂದ ಓಂಕಾರ
ಆತ್ಮಾನಂದ ಸಾಕಾರ
ಓಂ ವೇದಾಂತರ್ಯ ಝೇಂಕಾರ
ಆಧ್ಯಾತ್ಮಾಭಿ ಮಧುಸಾರ
ನಗುವ ಮನಸೇ ಸಾಕು ನಮಗೆ
ಹಗಲುಗನಸೇ ಬೇಡ
ಮನೆಯ ತುಂಬ ಪ್ರೀತಿ ಸಾಕು
ಬೆಳ್ಳಿ ಚಿನ್ನ ಬೇಡ
ತಂದೆ ತಾಯೇ ದೈವ,
ಗುರುವೆ ನಮ್ಮ ಜೀವ
ಎಂಬ ದಿವ್ಯ ಮಂತ್ರ,
ನಮ್ಮ ಹೃದಯ ತುಂಬಿಸು
ಹೇ ದಿನಕರ, ಶುಭಕರ, ಧರೆಗೆ ಬಾ
ಈ ಧರಣಿಯ ದೇಗುಲ ಬೆಳಗು ಬಾ
ಸತ್ಯ ಹೇಳೋ ಕನ್ನಡಿಯಂತೆ
ಅಂತರಂಗ ಮಾಡು
ದಯೆ ತೋರೋ ಧರಣಿಯಂತ
ಮನೋಧರ್ಮ ನೀಡು
ನೊಂದ ಎಲ್ಲ ಜೀವ,
ನನ್ನದೆಂಬ ಭಾವ
ಬಾಳಿನಲ್ಲಿ ತುಂಬೋ
ವಿದ್ಯ ವಿನಯ ಕರುಣಿಸೋ
ಹೇ ದಿನಕರ, ಶುಭಕರ, ಧರೆಗೆ ಬಾ
ಈ ಧರಣಿಯ ದೇಗುಲ ಬೆಳಗು ಬಾ
ನೀಗಿಸು ಬಾಳಿನ ಅಹಂ
ಅಹಂ, ಅಹಂ, ಅಹಂ, ಅಹಂ
ಮಾನಸ ಮಂದಿರ ತುಂಬು ಓಂಕಾರ ನಾದವೋ
ಓಂ ಬ್ರಹ್ಮಾನಂದ ಓಂಕಾರ
ಆತ್ಮಾನಂದ ಸಾಕಾರ
ಓಂ ವೇದಾಂತರ್ಯ ಝೇಂಕಾರ
ಆಧ್ಯಾತ್ಮಾಭಿ ಮಧುಸಾರ