Hennu Hadeyalu Beda song details :
Song | Hennu Hadeyalu Beda |
Singers | Harshika Devanath |
Lyrics | Janapadha |
Movie | Banaras |
Music | B.Ajaneeshloknath |
Label | Lahari MUsic |
Hennu Hadeyalu Beda song lyrics in Kannada :
ಹೆಣ್ಣು ಹಡೆಯಲು ಬೇಡ ಸಾಂಗ್ ಲಿರಿಕ್ಸ್
ಸಗಮಪ ಪದಮಪರಿರಿಮಗ ಸಗಮದ ಆ
ಹೆಣ್ಣು ಹಡೆಯಲು ಬ್ಯಾಡ ಹೆರವರಿಗೆ ಕೊಡಬ್ಯಾಡ
ಹೆಣ್ಣೋಗುವಾಗ ಅಳಬ್ಯಾಡ ಹೆಣ್ಹೋಗುವಾಗ ಅಳಬ್ಯಾಡ
ಹಡೆದವ್ವ ಸಿಟ್ಟಾಗಿ ಸಿವನ ಬೈಬ್ಯಾಡ
ಬ್ಯಾಸಗಿ ದಿವಸಕೆ ಬೇವಿನ ಮರ ತಂಪು ಆ ಆ
ಬ್ಯಾಸಗಿ ದಿವಸಕೆ ಬೇವಿನ ಮರ ತಂಪು
ಭೀಮರತಿ ಎಂಬ ಹೊಳೆ ತಂಪು
ಭೀಮರತಿ ಎಂಬ ಹೊಳೆ ತಂಪು
ಹಡೆದವ್ವ ನೀ ತಂಪು ನನ್ನ ಮನದಾಗೆ
ಸಗಮಪ ಪದಮಪರಿರಿಮಗ ಸಗಮದ ಆ
ಹೆಣ್ಣಾಗಿ ಹುಟ್ಟೋಕಿಂತ ಮಣ್ಣಾಗಿ ಹುಟ್ಟಿದರೆ
ಮಣ್ಣಿನ ಮ್ಯಾಲೊಂದು ಮರವಾಗಿ
ಮಣ್ಣಿನ ಮ್ಯಾಲೊಂದು ಮರವಾಗಿ
ಹುಟ್ಟಿದರೆ ಪುಣ್ಯವಂತರಿಗೆ ನೆರಳಾಗಿ
supercinelyrics.com
ಕಾಶಿಗೆ ಹೋಗೋಕೆ ಎಷ್ಟೊಂದು ದಿನಬೇಕು
ತಾಸೊತ್ತಿನ ಹಾದಿ ತವರೂರು
ತಾಸೊತ್ತಿನ ಹಾದಿ ತವರೂರು
ಮನೆಯಾಗೆ ಕಾದು ಕುಂತಳೇ ಹಡೆದವ್ವ
ಜಗಕೆಲ್ಲಾ ಅವಳೆ ಪರದೈವ
ಆ ಆ ಆ ಓ ಓ ಆ ಆ ಧಿರನಾ..