Endo bareda song details
- Song : Endo bareda
- Singer : Vasuki vaibhav
- Lyrics : Pavan bhat
- Movie : Garuda gamana vrishabha vahana
- Music : Midhun Mukundan
Endo bareda lyrics in kannada
ಎಂದೋ ಬರೆದ ಕವಿತೆ ಸಾಲು
ಬೊಗಸೆ ಹಿಡಿದ ಮಳೆಯ ನೀರು
ಊರ ದಾರಿ… ಬೀಸೋ ಗಾಳಿ
ಹೇಳುತಲಿವೆ ನವಿರಾದ ಕಥೆಯೊಂದನು
ನೂರಾರು ಹೆಸರಿರದ
ಸವಿ ಭಾವನೆಗಳ ಹೆಸರಾಂತ
ಸಂಕಲನ ಪ್ರೀತಿ ಯಾ
ಎಂದೋ ಬರೆದ ಕವಿತೆ ಸಾಲು
ಬೊಗಸೆ ಹಿಡಿದ ಮಳೆಯ ನೀರು
ಊರ ದಾರಿ… ಬೀಸೋ ಗಾಳಿ
ನಿನ್ನಾ ಸೇರಿ… ಪ್ರೀತಿ ಛಾಳಿ
ಹೂವೆದೆಯಲಿ ಜೇನು
ಅನುಭವಿಸದೆ ತಾನು
ದುಂಬಿಗೆ ತಾ ನೀಡೋ
ವಾತ್ಸಲ್ಯವೇ ಪ್ರೀತಿ
ಮಣ್ಣೊಳಗಿನ ಬೇರು
ಕುಡಿಯದೆ ತಾ ನೀರು
ಚಿಗುರೆಲೆಗೆ ಉಣಿಸೋ
ತ್ಯಾಗವದೇ ಪ್ರೀತಿ
ಎಲ್ಲವ ಕೊಡುವ… ದೇವರ ಕೂಡ
ಸೋಲಿಸಿಬಿಡುವ… ಸೋಜಿಗ ಪ್ರೀತಿ
ಸುತ್ತಲೂ ಇರುವ ಲೋಕವನೆಲ್ಲ
ಮರೆಸುವುದದರ ಅದ್ಭುತ ರೀತಿ
ಒಲವಿನ ನಿಧಿಯನೇ
ಕಸಿದರೆ ನೀ ಹೀಗೆ
ಏನನು ಮಾಡಲಿ
ಎಂದೋ ಬರೆದ… ಕವಿತೆ ಸಾಲು
ಬೊಗಸೆ ಹಿಡಿದ… ಮಳೆಯ ನೀರು
ಊರ ದಾರಿ… ಬೀಸೋ ಗಾಳಿ
ಹೇಳುತಲಿವೆ ನವಿರಾದ ಕಥೆಯೊಂದನು
ನೂರಾರು ಹೆಸರಿರದ
ಸವಿ ಭಾವನೆಗಳ ಹೆಸರಾಂತ
ಸಂಕಲನ ಪ್ರೀತಿ ಯಾ
ಎಂದೋ ಬರೆದ ಕವಿತೆ ಸಾಲು
ಬೊಗಸೆ ಹಿಡಿದ ಮಳೆಯ ನೀರು
ಹೂವೆದೆಯಲಿ ಜೇನು
ಅನುಭವಿಸದೆ ತಾನು
ದುಂಬಿಗೆ ತಾ ನೀಡೋ
ವಾತ್ಸಲ್ಯವೇ ಪ್ರೀತಿ
ಮಣ್ಣೊಳಗಿನ ಬೇರು
ಕುಡಿಯದೆ ತಾ ನೀರು
ಚಿಗುರೆಲೆಗೆ ಉಣಿಸೋ
ತ್ಯಾಗವದೇ ಪ್ರೀತಿ