Arali nillu lyrics ( ಕನ್ನಡ ) – Tom and Jerry

Arali nillu song details

  • Song : Arali nillu
  • Singer : K S Chitra
  • Lyrics : V Raghu Shastry
  • Movie : Tom and Jerry
  • Music : Mathews Manu
  • Label : Anand audio

Arali nillu lyrics in kannada

ಅರಳಿ ನಿಲ್ಲು ನೋವಿನಲ್ಲೂ
ಎದೆಯ ನೋವು ಮುದುಡಿ ಹೋಗುವುದು
ನಗುವ ಚೆಲ್ಲು ಅಳುವಿನಲ್ಲೂ
ಇರುಳ ಹಿಂದೆ ಬೆಳಕು ಮೂಡುವುದು

ಚದುರಿದಂತೆ ಮನದ ಭಾವ
ನಡೆಯೋ ಮುಂಚೆ ಎಡವೋ ಜೀವ
ಚಿಗುರಬೇಕು ನಾಳೆಯ ಸೆಳೆಗೆ

ಕಣ್ಣ ಹನಿಯು ಕೆನ್ನೆ ಮೇಲೆ
ಕುಳಿತು ಕೇಳಿದರೂ
ಬರುವುದೆ ಕ್ಷಣ ಉಳಿವುದೇ
ನಗು ಬಾಳಿಗೆ ಬಿರಿದು…

ಕಳೆದು ಹೋದ ಘಳಿಗೆ ನೂರು
ಮರುಗಿ ನರಳಿದರೇ…
ಸಿಗುವದೇ ಸುಖ ಸವೆಯದೆ
ಬದುಕೆಲ್ಲಿ ಮುಗಿಯುವುದು

ನೆರಳು ನೀಡೋ ಮರದ ಸೂರು
ಕೊಡಲಿ ನೋಡಿದರೂ
ನಮ್ಮವನೇ ಇವ ನಮ್ಮವನೇ
ಎಂದು ನಗುತ ಕೂಗುವುದು

ಅಳಿದ ಮೇಲೂ ಸಿಗುವ ಬಾಳು
ದೇವರ ವರವು
ಉಳಿಸಿಕೋ ಇದ ಬೆಳಸಿಕೋ
ಇಂದು ಬಿಡಿಸಿ ಹೇಳುವುದು

ಚದುರಿದಂತೆ ಮನದ ಭಾವ
ನಡೆಯೋ ಮುಂಚೆ ಎಡವೋ ಜೀವ
ಚಿಗುರಬೇಕು ನಾಳೆಯ ಸೆಳೆಗೆ….

Arali nillu song video :

Leave a Comment

Contact Us