Ele vayasina lyrics ( Kannada ) – Naduve antaravarali – Super cine lyrics

Ele vayasina – Deepak doddera , Eesha suchi Lyrics

Singer Deepak doddera , Eesha suchi

About the song :

▪ Track : Ele Vayasina
▪ Singers : Deepak Doddera, Eesha Suchi
▪ Music : Kadri Manikanth
▪ Lyricist : Ghouse Peer
▪ Movie : Naduve Antaravirali
▪ Directed : Raveen Kumaara.
▪ Music on : PRK Audio
▪ Digital Partner : Divo

Ele vayasina song lyrics

ಎಳೆ ವಯಸಿನ ಉಸಿರಿದು ಬಿಸಿ
ತಿಳಿ ಮನಸಿನ ಕನಸಿದು ಹಸಿ
ಮೊದಲನೇ ಸಲ ಮಿಲನದ ಖುಷಿ
ಬಯಕೆ ಮಳೆ ಜೋರಾಗಿ ಧಾವಿಸಿ!

ಎದೆಯೊಳಗಡೆ ಹೊಸ ಕಸಿವಿಸಿ
ಹೃದಯದ ಜೊತೆ ಹೃದಯವೇ ಬೆಸಿ
ನಾಚಿಕೆಯನು ಆಚೆಗೆ ಎಸಿ
ಪಯಣದಲಿ ಪ್ರಣಾಯಾನ ಸೇರಿಸಿ!

ಮೊಗ್ಗೊಂದು ಹಿಗ್ಗುತಲಿ ಹೂವಾಗೋ ಸಮಯ..
ಮಿಂಚೊಂದು ಸಂಚರಿಸಿ ಮೈಯೆಲ್ಲಾ ಸಿಹಿಯಾದ ಗಾಯ..

ಎಳೆ ವಯಸಿನ ಉಸಿರಿದು ಬಿಸಿ
ತಿಳಿ ಮನಸಿನ ಕನಸಿದು ಹಸಿ
ಮೊದಲನೇ ಸಲ ಮಿಲನದ ಖುಷಿ
ಬಯಕೆ ಮಳೆ ಜೋರಾಗಿ ಧಾವಿಸಿ!

ಯಾವ ಗುರುಕುಲವು.. ಗುರು ನೆರವು.. ಇರದೇ ಹಾಗೇನೆ
ಬೇಗ ಕಲಿತು ಬಿಡೊ.. ವಿಷಯಾವು ಈ.. ಒಲವೊಂದೆ..

ನಾಚಿ ನಯನಗಳು.. ಇದೆ ಮೊದಲು.. ಕೆಂಪಾಯ್ತು ಕೆನ್ನೆ
ಆಸೆ ಅರಳುತಲಿ.. ಕೆಣಕುತಿದೆ.. ಹೊಣೆಯು ನೀನೇನೆ

ಕಂಡಂಥ ಕನಸುಗಳು ನನಸಾಗುವ ಸಮಯ..
ಓಡುತಿದೆ ಜೋರಾಗಿ ಹುಚ್ಚು ಕುದುರೆ ಏರಿ ಪ್ರಾಯ!

ತೀರ ಹೊಸದಾದ ಜಗದಲ್ಲಿ ವಿಹರಿಸುತ ಜೀವ
ಮೋಜು ಅನುಭವಿಸಿ.. ಮರೆಯುತಿದೆ ಎಲ್ಲ ನೋವ..

ಜೇನು ತುಂಬಿರುವ.. ಜಾತ್ರೆಯಲ್ಲಿ.. ಕಳೆದ್ ಹೋದ ಭಾವ
ಮೋಹ ಅತಿಯಾಗಿ.. ಕಲಿತಿರುವೆ ಪ್ರೀತಿ ಪರ್ವ!

ಧರೆಗಾದ ದಾಹವನು ನೀಗಿಸಿದೆ ಮುಗಿಲು..
ಮರುಭೂಮಿ ನಿನ್ನಿಂದ ಆಗಿದೆ ಇಂದು ನೀನೆ ಕಡಲು!

ಎದೆಯೊಳಗಡೆ ಹೊಸ ಕಸಿವಿಸಿ
ಹೃದಯದ ಜೊತೆ ಹೃದಯವೇ ಬೆಸಿ
ನಾಚಿಕೆಯನು ಆಚೆಗೆ ಎಸಿ
ಪಯಣದಲಿ ಪ್ರಣಾಯಾನ ಸೇರಿಸಿ!!

Leave a Comment

Contact Us