Ee seethege lyrics ( ಕನ್ನಡ ) – Garuda

Ee seethege song details

  • Song : Ee seethege
  • Singer : Sruthi V S , Raghu dixit
  • Lyrics : Bharath M Venkataswamy
  • Movie : Garuda
  • Music : Raghu dixit
  • Label : Raghu dixit music

Ee seethege lyrics in kannada

ಈ ಸೀತೆಗೆ, ರಘುಕುಲ ರಾಮನಾಸರೆ
ಋಣಾನುಬಂಧ ಕೂಡಿ ಬಂದು ಪ್ರೀತಿಯ ಸೆರೆ
ಶ್ರೀ ರಾಮನ ಉಸಿರಲಿ ಈ ಜಾನಕಿ

ಇವನ ಮನಸು ಅವಳ ಕಡೆಗೆ
ಇವಳೀಗ ಅರಳಿರುವ ಹೂ ನಗೆ
ಒಲವ ಶರವ ಗುರಿ ಮಾಡಿ ಹೂಡುವನು ರಾಮ
ಹೃದಯ ಫಲವ ಶರಣಾಗಿ ನೀಡಿದಳು ಸೀತಾ
ಹೊಸ ಹಾಳೆ ತೆರೆದಂತೆ ಬಾಳು
ಹಿಡಿಗಾಗಿ ಬೆರಳೊಂದಿರಲು
ಖುಷಿಯ ಕನಸು ಪುನರಾರಂಭವಾದಂತಿದೆ

ಶ್ರೀಕಾರವೇ ಶುಭಕರ ಸಾಕಾರವು

ರಾಮ ನಾಮ ನುಡಿಯ ಕೇಳಿ ನಾಚಿದಂತೆ ಸೀತೆ
ಸೀತೆಯೆಂದೂ ರಾಮನಿಗೆ ಅನುರಾಗದ ಕವಿತೆ
ಪ್ರೀತಿಯಿಂದ ಮನಕೆ ನಿತ್ಯೋತ್ಸವ
ರೋಮಾಂಚನಗೊಳಿಸೋ ಆನಂದ ಪರ್ವ
ಅತಿ ಸುಂದರ, ಸಮಾರಂಭಕೆ, ಇದೆ ದೇವರ ಆಣತಿ

ಈ ಸೀತೆಗೆ, ರಘುಕುಲ ರಾಮನಾಸರೆ
ಋಣಾನುಬಂಧ ಕೂಡಿ ಬಂದು ಪ್ರೀತಿಯ ಸೆರೆ
ಶ್ರೀ ರಾಮನ ಉಸಿರಲಿ ಈ ಜಾನಕಿ

Ee seethege song video :

https://youtu.be/UXgbbTZqtd8

Leave a Comment

Contact Us