Ee kannada mannanu maribeda song details :
- Song : Ee kannada mannanu maribeda
- Singer : S P Balasubrahmanyam
- Lyrics : Hamsaleka
- Movie : Solillada saradara
- Music : Hamsaleka
- Label : Lahari music
Ee kannada mannanu maribeda lyrics in kannada
ಕನ್ನಡ
ರೋಮಾಂಚನವೀ ಕನ್ನಡ
ಕಸ್ತೂರಿ ನುಡಿಯಿದು
ಕರುಣಾಳು ಮಣ್ಣಿದು
ಚಿಂತಿಸು, ವಂದಿಸು,
ಪೂಜಿಸು, ಪೂಜಿಸು
ಈ ಕನ್ನಡ ಮಣ್ಣನು ಮರಿಬೇಡ
ಓ ಅಭಿಮಾನಿ, ಓ ಅಭಿಮಾನಿ
ಈ ಮಣ್ಣಿನ ಹೆಣ್ಣನು ಜರಿಬೇಡ
ಓ ಅಭಿಮಾನಿ, ಓ ಅಭಿಮಾನಿ
ಸುಸಂಸ್ಕೃತ ಚರಿತೆಯ ತಾಯ್ನಾಡು
ಮಹೋನ್ನತ ಕಲೆಗಳ ನೆಲೆವೀಡು
ಕೆಡಿಸದಿರು ಈ ಹೆಸರ, ಈ ಹೆಸರ
ಈ ಕನ್ನಡ ಮಣ್ಣನು ಮರಿಬೇಡ
ಓ ಅಭಿಮಾನಿ, ಓ ಅಭಿಮಾನಿ
ಈ ಮಣ್ಣಿನ ಹೆಣ್ಣನು ಜರಿಬೇಡ
ಓ ಅಭಿಮಾನಿ, ಓ ಅಭಿಮಾನಿ
supercinelyrics.com
ಹಾಡಾಗಲಿ ಗೂಡಾಗಲಿ ನಾಡಾಗಲಿ
ಕಟ್ಟೋಕೆ ನಾನಾದಿನ
ಕೆಡವೋಕೆ ಮೂರೇ ದಿನ
ಹರಸಿದರು ಮುನಿಗಳು
ಗಳಿಸಿದರು ಕಲಿಗಳು
ನೆತ್ತರದಿ ನೆಚ್ಚಿನ
ಈ ಮೆಚ್ಚಿನ ಸಾಮ್ರಾಜ್ಯವ
ಹಾಡಿದರು ಕವಿಗಳು
ಕರಗಿದವು ಶಿಲೆಗಳು
ತುಂಬಿದರು ಎದೆಯಲಿ
ಸಿರಿಗನ್ನಡ ಅಭಿಮಾನವ
ಕನ್ನಡ…
ರೋಮಾಂಚನವೀ ಕನ್ನಡ
ಹಾಡಿಸು, ಕೇಳಿಸು, ಪ್ರೀತಿಸು
ಈ ಕನ್ನಡ ಮಣ್ಣನು ಮರಿಬೇಡ
ಓ ಅಭಿಮಾನಿ, ಓ ಅಭಿಮಾನಿ
ಈ ಮಣ್ಣಿನ ಹೆಣ್ಣನು ಜರಿಬೇಡ
ಓ ಅಭಿಮಾನಿ, ಓ ಅಭಿಮಾನಿ
ಯಾರಿಹರು ನಿಮ್ಮಲಿ
ಮದಕರಿಯ ನಾಯಕ
ಕೆಚ್ಚೆದೆಯ ಎಚ್ಚಮ
ರಣಧೀರರು ನುಡಿದಾಸರು
ಉಳಿದಿಹುದು ನಿಮ್ಮಲಿ
ಹೊಯ್ಸಳರ ಕಿಡಿಗಳು
ಹೊನ್ನ ಮಳೆ ಸುರಿಸಿದ
ಅರಿರಾಯರ ತೋಳ್ಬಲಗಳು
ಏಳಿರಿ, ಏಳಿರಿ..
ಈ ಪ್ರಾರ್ಥನೆಯ ಕೇಳಿರಿ
ಕಲಿಯಿರಿ, ದುಡಿಯಿರಿ,
ಉಳಿಸಿರಿ
supercinelyrics.com
ಈ ಕನ್ನಡ ಮಣ್ಣನು ಮರಿಬೇಡ
ಓ ಅಭಿಮಾನಿ, ಓ ಅಭಿಮಾನಿ
ಈ ಮಣ್ಣಿನ ಹೆಣ್ಣನು ಜರಿಬೇಡ
ಓ ಅಭಿಮಾನಿ, ಓ ಅಭಿಮಾನಿ
ಸುಸಂಸ್ಕೃತ ಚರಿತೆಯ ತಾಯ್ನಾಡು
ಮಹೋನ್ನತ ಕಲೆಗಳ ನೆಲೆವೀಡು
ಕೆಡಿಸದಿರು ಈ ಹೆಸರ, ಈ ಹೆಸರ
ಈ ಕನ್ನಡ ಮಣ್ಣನು ಮರಿಬೇಡ
ಓ ಅಭಿಮಾನಿ, ಓ ಅಭಿಮಾನಿ
ಈ ಮಣ್ಣಿನ ಹೆಣ್ಣನು ಜರಿಬೇಡ
ಓ ಅಭಿಮಾನಿ, ಓ ಅಭಿಮಾನಿ