Doora hogo munna lyrics ( ಕನ್ನಡ ) – Mugilpete

Doora hogo munna song details

  • Song : Doora hogo munna
  • Singer : Vasuki vaibhav
  • Lyrics : Pramod Maravanthe
  • Movie : Mugilpete
  • Music : Sridhar V Sambhram
  • Label : Lahari music

Doora hogo munna lyrics in kannada

ದೂರ ಹೋಗೋ ಮುನ್ನ ಸಾಂಗ್ ಲಿರಿಕ್ಸ್

ದೂರ ಹೋಗೋ ಮುನ್ನ
ದೂರಲಾರೆ ನಿನ್ನ ಮೌನದಲ್ಲೆ ಇನ್ನೂ
ಗಾಯಾಳು ನಾ…
ನಾನು ನೀನು ಭಿನ್ನ
ಮಾಡಲಾರೆ ನಿನ್ನ
ನೋವಿನಲ್ಲಿ ಎಂದೂ
ಶಾಮೀಲು ನಾ
ಮಾಯವಾದ ಮೇಲೆ ನೀ
ಭಾರವಾಯ್ತು ಕಂಬನಿ
ಸೋತಿದೆ… ಭಾವನೆ ವೇದನೆ
ಏಕೆ ಹೀಗೆ

ದೂರ ಹೋಗೋ ಮುನ್ನ
ದೂರಲಾರೆ ನಿನ್ನ ಮೌನದಲ್ಲೆ ಇನ್ನೂ
ಗಾಯಾಳು ನಾ…
ನಾನು ನೀನು ಭಿನ್ನ
ಮಾಡಲಾರೆ ನಿನ್ನ
ನೋವಿನಲ್ಲಿ ಎಂದೂ
ಶಾಮೀಲು ನಾ

ಕನಸಿನ ಮರಣಕೆ
ಮುಗಿಯದ ಸೂತಕ
ಉಸಿರಿನ ಸಂಕಟ ಹೀನಾಯ
ನಲುಮೆಯ ಇರುಳಿಗೆ
ಚಂದ್ರನೇ ಘಾತುಕ
ಸಹಿಸಲಿ ಹೇಗೆ ನಾ ಅನ್ಯಾಯ
ವಿಳಾಸವಿಲ್ಲ ನಾ ಸಾಗೊ
ಈ ಕಾಲು ದಾರಿಗೆ
ಕಣ್ಣೀರ ಮಾತೆ ವಿದಾಯ
ಈ ನನ್ನ ಬಾಳಿಗೆ
ಅರಳುವ ಮುಂಚೆ ಬಾಡಿದೆ
ಹೂ… ನಗೆ

ದೂರ ಹೋಗೋ ಮುನ್ನ
ದೂರಲಾರೆ ನಿನ್ನ ಮೌನದಲ್ಲೆ ಇನ್ನೂ
ಗಾಯಾಳು ನಾ…

ಜಗದಲಿ ಅನುದಿನ
ನಗುವಿನ ನಾಟಕ
ಮರೆಯಲಿ ಅಳುವುದು ಮಾಮೂಲಿ
ಮನಸಿನ ಆಳವೆ
ನೋವಿನ ಕಂದಕ
ಬೀಳದೆ ಸಾಗು ನೀ ಬಾಳಲ್ಲಿ
ವಿಷಾಧವೇನು ಇನ್ನಿಲ್ಲ
ಈ ನನ್ನ ಪಾಲಿಗೆ ಸಂಪೂರ್ಣವಾಗಿ
ಸೋತಂತೆ ನಾನೀಗ ಸೋಲಿಗೆ..
ಮುಗಿಯದ ನೂರು ಮಾತಿದೆ ಹೇಳಲು

ದೂರ ಹೋಗೋ ಮುನ್ನ
ದೂರಲಾರೆ ನಿನ್ನ ಮೌನದಲ್ಲೆ ಇನ್ನೂ
ಗಾಯಾಳು ನಾ…
ನಾನು ನೀನು ಭಿನ್ನ
ಮಾಡಲಾರೆ ನಿನ್ನ
ನೋವಿನಲ್ಲಿ ಎಂದೂ
ಶಾಮೀಲು ನಾ
ಮಾಯವಾದ ಮೇಲೆ ನೀ
ಭಾರವಾಯ್ತು ಕಂಬನಿ
ಸೋತಿದೆ… ಭಾವನೆ ವೇದನೆ

Doora hogo munna song video :

Leave a Comment

Contact Us