Devaru maadida lyrics ( kannada ) – MRP – super cine lyrics

Devaru Maadida – Sanjit hegde Lyrics

Singer Sanjit hegde

About the song

▪ Song: Devaru Maadida
▪ Singer: Sanjith Hegde
▪ Lyrics: Dr.V.Nagendra Prasad
▪ Film: MRP
▪ Music: Harshavardhan Raj

Lyrics

ದೇವರು ಮಾಡಿದ

ದೇವರು ಮಾಡಿದ
ದೇವರೇ ನೀಡಿದ
ಆಕಾರ…
ಆಚೆಗೆ ಹೋಗದೆ
ಒಳಗಡೆ ಉಳಿದಿದೆ
ಆಹಾರ…
ದಪ್ಪಗೆ ಇದ್ದರೆ
ಯಾತಕೆ ಸ್ವಾಮಿ ನಗ್ತೀರಾ
ದಪ್ಪಗೆ ಇರುವ
ಗಣಪತಿಗೇನೇ ಜೈಕಾರ
ನಾವೆಲ್ಲರಿಗಿಂತಲೂ ಸ್ವಲ್ಪ
ಒಂದೆರಡೇ ಇಂಚು ದಪ್ಪ
ಆ ದೇವರು ಮಾಡಿದ ತಪ್ಪ
ಸರಿಮಾಡೋಕೆ ನಾವ್ಯಾರಪ್ಪ
ದಪ್ಪ ದಪ್ಪ ಅನ್ನಬೇಡಿ
ಗೇಲಿಯನ್ನು ಮಾಡಬೇಡಿ
ನನ್ನ ಹಾಗೆ ಯಾರೂ ಇಲ್ಲ
ಭೂಮಿ ತೂಕದವರು

ದೇವರು ಮಾಡಿದ
ದೇವರೆ ನೀಡಿದ
ಆಕಾರ
ಆಚೆಗೆ ಹೋಗದೆ
ಒಳಗಡೆ ಉಳಿದಿದೆ
ಆಹಾರ
ಮೊದಲಿಗೆ ಕಾಣೊ ಘಟವಿದು
ಕೋಟಿ ಜನರೊಳಗೆ
ಮಗುವಿನ ಹಾಗೆ ಮನಸ್ಸಿದೆ
ಆನೆ ಎದೆಯೊಳಗೆ
ನಂಗೂ ಆಸೆನೇ
ಮಾಡಿ ತೋರ್ಸೋಕೆ
ಸಿಕ್ಸ್ ಪ್ಯಾಕ್
ಏನು ಮಾಡೋದು
ಸುಸ್ತು ಆಗುತ್ತೆ ಬಿಟ್ಹಾಕು
ದಷ್ಟ ಪುಷ್ಟ ದೇಹ ನೋಡಿ
ದೃಷ್ಟಿ ಬೀಳಬಾರದೆಂದು
ಸೊಂಟದಲ್ಲಿ ಕಟ್ಟಿಕೊಂಡೆ
ಮೂರು ಮೂರು ತಾಯತ

ದೇವರು ಮಾಡಿದ
ದೇವರೇ ನೀಡಿದ
ಆಕಾರ
ಆಚೆಗೆ ಹೋಗದೆ
ಒಳಗಡೆ ಉಳಿದಿದೆ
ಆಹಾರ
ಸಿಗುವುದು ಬಾಳ ಕಷ್ಟವೆ
ನಮ್ ಸೈಜ್ ಬಟ್ಟೆಗಳು
ನಿಲ್ಲದೆ ಹೋಗ್ತಾವೆ
ನಮ್ಮನ್ನು ನೋಡಿದ ಆಟೋಗಳು
ಯಾಕೊ ಗೊತ್ತಿಲ್ಲ
ಚಿಕ್ಕದಾಗೆ ಇರುತ್ತಾವೆ ಗೇಟುಗಳು
ಚೇಂಜ್ ಆಗ್ಬೇಕು
ಎಲ್ಲಾ ಥಿಯೇಟರ್ ಸೀಟುಗಳು

ಕೊಬ್ಬು ಇದ್ದ ದೇಹದಲ್ಲಿ
ಉಬ್ಬು ಇದ್ದ ಹೊಟ್ಟೆಯಲ್ಲಿ
ನನ್ನ ಮಂಡಿ ನೋಡಿಕೊಂಡು
ಎಷ್ಟೋ ವರ್ಷ ಆಯಿತು

Leave a Comment

Contact Us