Bhetiyaade yaake nanna song details
- Song : Bhetiyaade yaake nanna
- Singer : Sonu nigam, Saindhavi
- Lyrics : Kaviraj
- Movie : Sr********@gm***.com
- Music : Arjun janya
- Label : Anand audio
Bhetiyaade yaake nanna lyrics in kannada
ಭೇಟಿಯಾದೆ ಯಾಕೆ ನನ್ನ ಸಾಂಗ್ ಲಿರಿಕ್ಸ್
ಇಷ್ಕು ಹುವ ಮೂರೆ ಪಿಯ
ಇಷ್ಕು ಹುವ ಮೂರೆ ಪಿಯ
ಭೇಟಿಯಾದೆ ಯಾಕೆ ನನ್ನ
ಹೋಗ ಬೇಕೆ ಬಿಟ್ಟು ನಿನ್ನ
ತಲುಪದೇನೆ ತಂಗುದಾಣ
ಮಧ್ಯದಲ್ಲಿ ಮುಗಿಸಿ ಪಯಣ
ಕುಡಿವ ಮೌನ ಕೊಲ್ಲುವ ಮುನ್ನ
ತಿರುಗಿ ಒಮ್ಮೆ ನೋಡು ನನ್ನ
ಹೇಳು ಹೇಗೆ….
ಬದುಕಲಿ ದೂರಾಗಿ ನಿನ್ನಿಂದ ನಾ…
ಭೇಟಿಯಾದೆ ಯಾಕೆ ನನ್ನ
ಹೋಗ ಬೇಕೆ ಬಿಟ್ಟು ನಿನ್ನ
ಇಷ್ಕು ಹುವ ಮೂರೆ ಪಿಯ
ಇಷ್ಕು ಹುವ ಮೂರೆ ಪಿಯ
ಕಿರು ಗೆಜ್ಜೆಯ ಮರೆತಿರುವೆನು
ಮರಳಿ ಬರೋ ನೆಪವೊಂದಕೆ
ಹಣೆ ಬಿಂದಿಯ ಉಳಿಸಿರುವೆನು
ಕನ್ನಡಿಯಲ್ಲಿ ನೆನಪೊಂದಕೆ
ನೀ ನೀಡುವ ಪ್ರತಿ ನೋವನ್ನು
ಖುಷಿಯಾಗಿಯೇ ಸ್ವೀಕರಿಸುವೆ
ಕುಡಿವ ಮೌನ ಕೊಲ್ಲುವ ಮುನ್ನ
ತಿರುಗಿ ಒಮ್ಮೆ ನೋಡು ನನ್ನ
ಹೇಳು ಹೇಗೆ
ಬದುಕಲಿ ದೂರಾಗಿ ನಿನ್ನಿಂದ ನಾ…
ಬೀಳ್ಕೊಡುಗೆಗೆ ಬಂದವನಿಗೆ
ಬರಿದಾಗುವ ಭಯವಾಗಿದೆ
ಬೊಗಸೆಲಿರೊ ಬೆಳದಿಂಗಳ
ಅರಿವಿಲ್ಲದೆ ಕೈ ಚೆಲ್ಲಿದೆ
ಎದೆಯಲ್ಲಿರೊ ನೋವೆಲ್ಲವ
ಹುಸಿ ನಗುವಳೆ ಮರೆಮಾಚಿದೆ
ಕುದಿವ ಮೌನ ಕೊಲ್ಲುವ ಮುನ್ನ
ತಿರುಗಿ ಒಮ್ಮೆ ನೋಡು ನನ್ನ
ಹೇಳು ಹೇಗೆ
ಬದುಕಲಿ ದೂರಾಗಿ ನಿನ್ನಿಂದ ನಾ
ಭೇಟಿಯಾದೆ ಯಾಕೆ ನನ್ನ
ಹೋಗ ಬೇಕೆ ಬಿಟ್ಟು ನಿನ್ನ…