Geleya nanna geleya song details
- Song : Geleya nanna geleya
- Singer : Vaish
- Lyrics : Chethan Kumar
- Movie : Madhagaja
- Music : Ravi Basrur
- Label : Anand audio
Geleya nanna geleya lyrics in kannada
ಗೆಳೆಯ ನನ್ನ ಗೆಳೆಯ ಸಾಂಗ್ ಲಿರಿಕ್ಸ್
ಗೆಳೆಯ ನನ್ನ ಗೆಳೆಯ
ಪೂರ್ತಿ ಸಮಯ ಹೃದಯ
ನಿನ್ನೊಂದಿಗಿರಬೇಕಿದೆ
ಗೆಳೆಯ ನನ್ನ ಗೆಳೆಯ
ಪೂರ್ತಿ ಸಮಯ ಹೃದಯ
ನಿನ್ನೊಂದಿಗಿರಬೇಕಿದೆ
ನನ್ನ ಬಹುದಿನಗಳ ಆಸೆ
ಈಡೇರಿದ ಹಾಗೆ
ದಿನ ಗರಿಗೆದರಿದೆ ಕನಸು
ನೀ ಬಳಿ ಇರಲು ಹೀಗೆ
ಜನುಮಕು ಜೊತೆ ಇರೋ
ಜೀವದ ಹಾಗೆ
ತೀರದ ಬಯಕೆಯಿದು
ಮುಗಿಯದ ಸೆಳೆತವಿದು
ಭೂಮಿ ಬಯಸಿ ಬರುವ
ಮಳೆಯ ಹನಿಯ ಪ್ರೀತಿ
ಕಡಲ ಹುಡುಕಿ ಬರುವ
ನದಿಯ ಅಲೆಯ ರೀತಿ
ಪದಕೆ ನಿಲುಕದ
ಸಪ್ತ ಸ್ವರದ ಸೆಳೆತವು
ನನಗೂ ನಿನಗೂ
ದೊರೆತ ಪ್ರೀತಿಯೆ ದೈವವು
ರೆಕ್ಕೆ ಬಿಚ್ಚಿ ಹಾರು
ನನ್ನ ಹೃದಯ ಬಾನು
ಮೀನಿನಂತೆ ಈಜು
ನೀರು ಈಗ ನಾನು
ಅಳಿದು ಹೋದರೂ
ಎಂದಿಗೂ ಅಳಿಸಲಾಗದ
ಅಮರ ಮಧುರ
ಪ್ರೀತಿ ನಮ್ಮದು ಎಂದಿಗೂ
ಗೆಳೆಯ ನನ್ನ ಗೆಳೆಯ
ಪೂರ್ತಿ ಸಮಯ ಹೃದಯ
ನಿನ್ನೊಂದಿಗಿರಬೇಕಿದೆ
ಗೆಳೆಯ ನನ್ನ ಗೆಳೆಯ
ನಿನ್ನ ಮನಸು ಮಗುವಂತೆ
ಬಿಗಿದಪ್ಪಿದೆ
ನನ್ನ ಬಹುದಿನಗಳ ಆಸೆ
ಈಡೇರಿದ ಹಾಗೆ
ದಿನ ಗರಿಗೆದರಿದೆ ಕನಸು
ನೀ ಬಳಿ ಇರಲು ಹೀಗೆ
ಜನುಮಕು ಜೊತೆ ಇರೋ
ಜೀವದ ಹಾಗೆ
ತೀರದ ಬಯಕೆಯಿದು
ಮುಗಿಯದ ಸೆಳೆತವಿದು