Bengaluru’s Suprabhata song details :
Song | Bengaluru’s Suprabhata song |
Singers | Rama Mani |
Lyrics | Trilok Trivikrama |
Movie | Aachar & Co |
Music | Bindhumalini |
Label | PRK audio |
Bengaluru’s Suprabhata song lyrics in Kannada :
ಬೆಂಗಳೂರು ಸುಪ್ರಭಾತ ಲಿರಿಕ್ಸ್
ಕೌಸಲ್ಯ ಪ್ರಾವಿಸನ್ ಸ್ಟೋರ್ ಮುಂದೆ ಕೋಳಿ ಕೋ ಎಂದಿತು
ಮತ್ತೊಂದು ಇರುಳಾ ಕಳೆದು
ಬೆಂಗಳೂರಿಗೆ ಬೆಳಗಾಯಿತು
ಚಿಕ್ಕಪೇಟೆ ದೊಡ್ಡಪೇಟೆ ಮಾರ್ಕೆಟ್ ಜಯನಗರ ಮಲ್ಲೇಶ್ವರಂ
ಎಲ್ಲೆಲ್ಲೂ ಜನಸಂಚಾರ
ಬೆಂಗಳೂರು ಬ್ಯುಸಿ ಆಯಿತು
ಸುಮಂಗಲಿಯರು ಎದ್ದು ಮುಂಜಾನೆ ಮಿಂದು
ಉಟ್ಟಿಹರು ಮಡಿಬಟ್ಟೆ
ಬಾಗಿಲನು ತೆರೆದು ರಂಗೋಲಿ ಎಳೆದು ಸುತ್ತಿದರು ತುಳಸಿ ಕಟ್ಟೆ
ಮನೆದೇವರನ್ನು ಮನದಲ್ಲಿ ನೆನೆದು
ಬೆಳಗಿದರು ಆರತಿ ತಟ್ಟೆ
ಮುಗಿದಾಗ ಪೂಜಾ ವಿಧಿ
ಏಳಾಯ್ತು ಗಂಟೆ ಕಣ್ಮುಚ್ಚಿ ಕುಳಿತ ಮನೆ ಮಕ್ಕಳೆಲ್ಲ ಎದ್ದರಾಗ
ಸಾಲಾಗಿ ನಿಂತು ಬಚ್ಚಲಿನ ಮುಂದೆ
ಸಿಗಲೆಂದು ಜಾಗ
ಬೆಂಗಳೂರು ಚಳಿಗೆ ಬಿಸಿನೀರ ಸ್ನಾನ ಮುಗಿಯದು ಅಷ್ಟು ಬೇಗ
ಮನೆತುಂಬ ಜನರಿದ್ದರೆ
ಇದೇ ನಿತ್ಯ ರಾಗ
ಓದುತ್ತ ಪೇಪರ್ ಕುಡಿಬೇಕು ಆಚ್ಚಾರು ಸಿಹಿ ಇರದ ಕಾಫಿಯನ್ನು
ಗ್ರಹಚಾರ ಎಂದು ತಡವಾಗಿ ಬಂದು
ಕೂಗಿದನು ಹಾಲಿನವನು
ಕೆಚ್ಚಲಲಿ ಕರೆದ ಬೆಚ್ಚನೆಯ ಹಾಲು ತುಂಬಿಸಲಿ ಕಾಮಧೇನು
ಅದುವರೆಗೂ ನೋಡೋಣ ಹೊಸ ಸುದ್ದಿ ಏನು
supercinelyrics.com
ನುಡಿದಂತೆ ನಡೆವ ಸರ್ಕಾರ ನಮದು ಎಂದರು ಬಿ ಡಿ ಜತ್ತಿ
ರಾಜ್ಯ ವಿಂಗಡಣೆ ಗಡಿನಾಡ ಜನರ ತಲೆ ಮೇಲೆ ತೂಗು ಕತ್ತಿ
ಚೀನಾದ ಜೊತೆಗೆ ಸಂಬಂಧಗಳನ್ನು ಸುಧಾರಿಸಲು ಹೊಸ ನೀತಿ
ಈ ದೇಶ ಎಂದಾದಿತೋ
ಜಾಗತಿಕ ಶಕ್ತಿ
ಮನೆ ಎದುರು ನಿಂತ ಅಂಬಾಸಿಡರ್ ಕಾರಿನಡೆ ಊರ ಚಿತ್ತ
ನೆರೆಹೊರೆಯ ಓನರಿನ ಪೈಡು ಎಲ್ಲರಿಗೂ ಕಣ್ಣು ಅದರತ್ತ
ಮೂರ್ನಾಲ್ಕು ಬಾರಿ ಹಾರನ್ ಬರಲು ತಡವಾಗಿದೆ ಎಂದು ಅರ್ಥ
ನಾನೀಗ ಮುಗಿಸುವೆನು
ಈ ಸುಪ್ರಭಾತ