Aagodide Aarambhavu song details :
- Song : Aagodide Aarambhavu
- Singer : Siddhartha Belmannu
- Lyrics : Sampath Sirimane, Shashank Soghal
- Movie : Daredevil Musthafa
- Music : Navaneeth Sham
- Label : PRK audio
Aagodide Aarambhavu lyrics in kannada :
ಆಗೋದಿದೆ ಆರಂಭವು ಆಲಿಂಗನದಲ್ಲಿ
ಆಗಂತುಕ ಕಾದಿಹನಿಲ್ಲಿ
ಜಗ ಬಯಲು ಅಡಗುವುದೆಲ್ಲಿ
ಇವ ಅಪಾಯಕಾರಿ
ಹಿರೀಕರಂತು ಭಾರಿ ದಮನಕಾರಿ
ಸೈಕಲ್ ರಿಪೇರಿ ಗುಜುರಿ
ಎದೇಲಿ ಅಕ್ಷರ
ಇಲ್ಲ.. ದಂಡು ದಾಳಿ
ಅಂತಾ ಹೇಳ್ತಾರೆ
ಟೆಕ್ಸ್ಟ್ ಬುಕ್ಲೂ ಬರ್ದಿದಾರೆ
ಅಪ್ಪ ಅಮ್ಮ ಮಾಮ ಮೇಷ್ಟ್ರು
ಎಲ್ರೂ ಹೀಗೆ ಹೇಳಿದ್ದಾರೆ
ಎಲ್ರೂ ಹೀಗ್ ಹೇಳಿ
ತಲೆಗ್ ರದ್ದಿ ತುಂಬಿದಾಗ
ಬುದ್ಧಿ ಭ್ರಮಣೆ ಆಗದೇನು ಆಗ
ಅದಕೆ..ಅವನಂದ್ರೆ ನಮ್ಗೆ ಭಯ
ಬೇಡ.. ಸವಾಸ ಬೇಡ್ವೇ ಬೇಡ
ಆಗೋದರೆ ಆರಂಭವು ಆಲಿಂಗನದಲ್ಲಿ
ಕದಡುವುದು ತಿಳಿನೀರು
ಭುಗಿಲೇಳುವ ಸುಳಿಗಳು ನೂರು
ಮಂಗನ ಜಾತಿ ಮಾನವನಾದ್ರೂ
ನಾಗರಿಕತೆಗಿಲ್ಲ ಕಣ್ಣು
ಮನುಜಗೆ ಮನುಜ ಬೆದರಿದ ಮೇಲೆ
ಹಾಕ್ಕೊಳ್ರಿ ಬಾಯಿಗ್ ಮಣ್ಣು
ಆಗಿದ್ದು ಆಗ್ಲಿ.. ಹೋಗಿದ್ದು ಹೋಗ್ಲಿ..
ಜಾತಿ ಎಂಬ ಗಾಯವ
ಕಾಲದಿಂದ ಪೋಷಿಸಿದ ಮಾನವ
ಮೆದುಳಿಗೇ ಕೀವು ತಗುಲಿದೆ
ರಾಜಿ ಎಂಬ ಸೂಜಿಯಿಂದ
ಪಂಚರ್ ಮಾಡ್ ಬಿಸಾಕು
ಈ ಹಗೆಗೆ ಹೊಗೆ ಹಾಕು
ಬೇಕು.. ಬೇಕೆ ಬೇಕು
ಸವಾಸ ಬೇಕೇ ಬೇಕು..
ಆಗೋಗಲಿ ಆರಂಭವು ಆಲಿಂಗನದಲ್ಲಿ
ಒಟ್ನಲ್ಲಿ ಕ್ರಾಂತಿ ಆಗ್ಲಿ
ನಿಮ್ ಬುದ್ಧಿ ನಿಮ್ ಕೈಲಿರ್ಲಿ