Yennegu hennigu song details
- Song : Yennegu hennigu
- Singer : Mangli, Kailash Kher
- Lyrics : Prems
- Movie : Ek love ya
- Music : Arjun janya
- Label : A2 music
Yennegu hennigu lyrics in kannada
ಅರೆ ಎಣ್ಣೆಗು ಹೆಣ್ಣಿಗೂ
ಎಣ್ಣೆಗು ಹೆಣ್ಣಿಗೂ
ಎಲ್ಲಿಂದ ಲಿಂಕ್ ಇಟ್ಟೆ ಹೇಳೋ ಭಗವಂತ
ಬಾರ್ ಅಲ್ಲಿ ಹೆಣ್ಮಕ್ಳು ಕುಡಿಯೋದು ತಪ್ಪಂತ
ಯಾರನ ಬೋರ್ಡ್ ಹಾಕವ್ರ
ಅಯ್ಯೋ ನಮ್ಗುನು ಲವ್ ಅಲ್ಲಿ
ಬ್ರೇಕ್ ಅಪ್ ಆಗೈತೆ
ಒಂದೆರಡು ಪೆಗ್ ಹಾಕ್ತೀರಾ
ಶಿವನೆ.. ಒಂದೆರಡು ಪೆಗ್ ಹಾಕ್ತೀರಾ
ಎಣ್ಣೆಗು ಹೆಣ್ಣಿಗೂ
ಎಣ್ಣೆಗು ಹೆಣ್ಣಿಗೂ
ಎಲ್ಲಿಂದ ಲಿಂಕ್ ಇಟ್ಟೆ ಹೇಳೋ ಭಗವಂತ
ಫೇಸ್ಬುಕ್ ಅಲ್ಲಿ ರಿಕ್ವೆಸ್ಟ್ ಕಳ್ಸ್ತೀರ
ವಾಟ್ಸಪ್ ನಂಬರ್ ಕೇಳ್ತೀರಾ
ಸ್ಟೇಟಸ್ ಅಲ್ಲಿ ಸಿಂಗಲ್ ಅಂತ ಹಾಕ್ತೀರಾ
ನೀವೇನೇ ಸಿಗ್ನಲ್ ಕೊಡ್ತೀರ
ಮೀಟಿಂಗ್ ಮಾಡಲ್ವ ಅಂತೀರಾ
ಮಾಡುದ್ರೆ ಐ ಲವ್ ಯು ಹೇಳ್ತೀರಾ
ಕರುದ್ ತಕ್ಷಣ ಯಾಕಾದ್ರು ಬರ್ತೀರ
ಬಂದಮೇಲೆ ಡವ್ ಮಾಡ್ಕೊಂಡ್ ಇರ್ತೀರ
ಲಾಂಗ್ ಡ್ರೈವ್ ಹೋಗಣ ಅಂತೀರಾ
ಪಾರ್ಕಿಂಗ್ ಅಲ್ಲಿ ಕಾರ್ ಹಾಕ್ತೀರಾ
ಆಣೆ ಭಾಷೆ ಕೊಡ್ತೀರ
ನೀವಿಲ್ದೆ ಬದುಕಲ್ಲ ಅಂತೀರಾ
ಹಂಗೆ ಹಿಂಗೆ ಕುಸುರಾಡಿ ಬೇಡಪ್ಪ ಅಂತಂದ್ರು
ಎಲ್ಲಾನು ಮಾಡ್ತೀರಲ್ಲ
ಅಯ್ಯೋ ಬೆಳೆಗೆದ್ದು ಮೀಟ್ ಆಗಿ ಮದ್ಯಾನ ಟಚ್ ಆಗಿ
ಸಂಜೆನೇ ಎಂಡ್ ಆಯ್ತಲ್ಲ
ಲವ್ ಸೆಕ್ಸ್ ಅಲ್ಲೇ ಮುಗಿದು ಹೋಯ್ತಲ್ಲ
ಎಣ್ಣೆಗು ಹೆಣ್ಣಿಗೂ
ಎಣ್ಣೆಗು ಹೆಣ್ಣಿಗೂ
ಎಲ್ಲಿಂದ ಲಿಂಕ್ ಇಟ್ಟೆ ಹೇಳೋ ಭಗವಂತ
ಲವ್ ಫೇಲ್ಯೂರ್ ಅನ್ಕೊಂಡು ಊರ್ಗೆಲ್ಲ ಸಾರ್ತಿದ್ರೆ
ನೋವೆಲ್ಲ ಮರ್ತೊಯ್ತದ?
ಸಿಕ್ಕಿಲ್ಲ ಅನ್ಬಿಟ್ಟು ಸೂಸೈಡ್ ಮಾಡ್ಕೊಂಡ್ರೆ
ಎಲ್ಲಾನು ಸರಿ ಹೋಯ್ತದ?
ಅಯ್ಯಯ್ಯೋ ಸಾಯ್ಬೇಡ್ರಪ್ಪೋ..
ಹುಟ್ಸಿದ್ ದೇವ್ರು ಹುಲ್ಲು ಮೆಯ್ಸ್ತನಪ್ಪೋ
ಇನ್ನೊಬ್ಳು ಸಿಕ್ತಾಳಪ್ಪ
ಡೋಂಟ್ ವರಿ ಇನ್ನೊಬ್ಳು ಸಿಕ್ತಳಪ್ಪೋ
ನಿನ್ನ ಬಿಟ್ರೆ ಯಾರಿಲ್ಲ ಅಂತೀರಾ
ಗ್ಯಾಪ್ ಅಲ್ಲೇ ಇನ್ನೊಬ್ಲುನ್ನ ನೋಡ್ತೀರಾ
ಡೌಟ್ ಬಿದ್ದು ಯಾಕಂಗೆ ಸಾಯ್ತೀರಾ
ನೋಡಂಗೆ ನೀವೇ ಮಾಡ್ತೀರ
ಕೊನೆ ತನಕ ಇರ್ತೀನಿ ಅಂತೀರಾ
ಸೆಂಟರ್ ಅಲ್ಲೇ ಕೈ ಬಿಟ್ಟು ಹೋಗ್ತೀರಾ
ಅಯ್ಯೋ ಹಂಗಂತ ಯಾವ್ ಬಾಯಲ್ಲಿ ಹೇಳ್ತೀರಾ
ಹುಡುಗೀರ್ನ ದೇವದಾಸು ಅಂತಾರ?
ನೀವ್ ಎಷ್ಟೇ ಹುಡುಗೀರ್ನ ನೋಡುದ್ರು
ಎಲ್ರುನು ಫ್ರೆಂಡ್ಸ್ ಫ್ರೆಂಡ್ಸ್ ಅಂತೀರಾ
ನಾವ್ ಒಬ್ಬುನ್ ಜೊತೆ ಮಾತಾಡಿದ್ರು
ನಮ್ಮೇಲೆ ಡೌಟ್ ಯಾಕೆ ಬೀಳ್ತಿರ?
ಬಾತ್ರೂಮ್ ಅಲ್ಲಿ ಸ್ನಾನವ ಮಾಡುವ ಟೈಮ್ ಅಲ್ಲೂ
ಸೆಲ್ಫಿ ಕೇಳ್ತೀರಾ
ಅಯ್ಯೋ ಬೇಡಪ್ಪ ಲೀಕ್ ಆಗಿ ಟ್ರೊಲ್ ಆಯ್ತದಂತಂದ್ರು
ಬ್ರೇಕ್ ಅಪ್ ಅಂತೀರ
ಲವ್ ಸೆಲ್ಫಿ ಲೆ ಮುಗಿದು ಹೋಯ್ತಲ್ಲ
ಎಣ್ಣೆಗು ಹೆಣ್ಣಿಗೂ
ಎಣ್ಣೆಗು ಹೆಣ್ಣಿಗೂ
ಎಲ್ಲಿಂದ ಲಿಂಕ್ ಇಟ್ಟೆ ಹೇಳೋ ಭಗವಂತ