Yaake sikke song details :
- Song : Yaake sikke
- Singer : Nihal Tauro
- Lyrics : Yogaraj Bhat
- Movie : Padavi Poorva
- Music : Arjun Janya
- Label : T series
Yaake sikke lyrics in kannada :
ಯಾಕೆ ಸಿಕ್ಕೆ ಸಾಂಗ್ ಲಿರಿಕ್ಸ್
ಎಂತದೆ ಮಿಡಿತ ಯಾವುದೆ ತುಡಿತ ಯಾತಕೆ ಸೆಳೆತ ಕಾಡಿದೆ ಸತತ ಯಾಕೆ ಸಿಕ್ಕೆ ನೀನು ಯಾಕೆ ಸಿಕ್ಕೆ
ಕಲಿಯದೆ ಕಲಿತ ಕಣ್ಣ ಕಾಗುಣಿತ
ಕಲಿಸಿದೆ ಕುಣಿತ ಕಚಗುಳಿ ಉಚಿತ ಯಾಕೆ ಸಿಕ್ಕೆ ನೀನು ಯಾಕೆ ನಕ್ಕೆ
ಕಲ್ಪನೆಯಲ್ಲಿ ಕಣ್ಣು ಹೊಡೆ ಹೊಡೆದು ಕಷ್ಟ ಪಟ್ಟಿರುವೆನು
ಚಂದ್ರನ ಹಿಡಿದು ನಿನ್ನ ಹಣೆಮೇಲೆ ಬೊಟ್ಟು ಇಟ್ಟಿರುವೆನು
ಕ್ಯೂಟಾ ಕ್ಯೂಟಾ ಕ್ಯೂಟು ನೀನು
ಯಾಕೆ ಸಿಕ್ಕೆ ನೀನು
ಯಾಕೆ ಸಿಕ್ಕೆ
ಯಾಕೆ ನಕ್ಕೆ ನೀನು ಯಾಕೆ ನಕ್ಕೆ
supercinelyrics.com
ಹೇಳದೆ ಕೇಳದೆ ನೋಟಕೆ
ನೋಟವು ಸೇರಿಕೊಂಡಾಗ ಮೈತುಂಬಾ ಉನ್ಮಾದ ಗೆಳೆಯರು
ಹಳಿವರು ನೋಡುತ ನನ್ನನು
ಯಾಕೊ ಗೊತ್ತಿಲ್ಲ ನಮ್
ಹುಡುಗ ಹಿಂಗಾದ
ಕದ್ದು ಕಲಿತ ಮುದ್ದ ಮಾತು
ಹೇಳಿ ಬಿಡಲೆ ಎದ್ದು ನಿಂತು
ಗೊತ್ತೇ ಇಲ್ಲ ನನಗೂ ಕೂಡ
ನಂಗ್ಯಾವತ್ತು ಲವ್ ಆಯಿತು
ಸುಮ್ಮನೆ ಇರದೆ ಹೃದಯಕೆ ಬಣ್ಣ ಬಳಿದು ಕೊಂಡಿರುವೆನು
ಹೀಗೆಯೆ ನಿನ್ನ ಮನೆಯ ಬೀದೀಲಿ ಕುಳಿತು ಕೊಂಡಿರುವೆನು
ಮೆಂಟಲ್ ಮೆಂಟಲ್
ಮೆಂಟಲ್ ನಾನು
ಯಾಕೆ ಸಿಕ್ಕೆ ನಾನು ಯಾಕೆ ಸಿಕ್ಕೆ
ಯಾಕೆ ನಕ್ಕೆ ನೀನು ಯಾಕೆ ನಕ್ಕೆ
ಢವ ಢವ ಸದ್ದಿದು ಬಗ್ಗದ ಊರಿಗೆ
ಕೇಳುತಿರುವಾಗ ನಿಂಗ್ಯಾಕೆ ಕೇಳಲ್ಲ
ಪದಗಳ ಜೊತೆಯಲ್ಲಿ
ಪದಗಳ ಪೋಣಿಸಿ
ನಿಂಗೆ ಹೇಳೋಕೆ ನಾನಂತು ಕವಿಯಲ್ಲ
ನಿನ್ನ ಬೆರಳು ಕೊರಳಿಗೆ ಸೋಕಿ ಜೀವ ಹೋದ ಹಾಗಾಯಿತು
ಕುಳಿತುಕೊಂಡೆ ಕಾಲು ನಡುಗಿ
ನಂಗೊತ್ತಿಲ್ಲ ಏನಾಯಿತು
ಕನಸಲಿ ನಿಂಗೆ ಕಾಮನಬಿಲ್ಲು ಗಿಪ್ಟು ಕೊಟ್ಟಿರುವೆನು
ಕಂಗಳ ಮುಚ್ಚಿ ನಿನ್ನ ತುಟಿ ಮೇಲೆ ನನ್ನ ತುಟಿಯನ್ನಿಟ್ಟಿರುವೆನು
ಸ್ವೀಟು ಸ್ವೀಟು ಸ್ವೀಟು ನೀನು
ಯಾಕೆ ಸಿಕ್ಕೆ ನೀನು ಯಾಕೆ ಸಿಕ್ಕೆ
ಯಾಕೆ ನಕ್ಕೆ ನೀನು ಯಾಕೆ ನಕ್ಕೆ