Sheshadrivasa sri thirumalesha lyrics ( ಕನ್ನಡ ) – Jeevanadhi

Sheshadrivasa sri thirumalesha song details

  • Song : Sheshadrivasa sri thirumalesha
  • Singer : Rajesh krishnan , Manjula Gururaj
  • Lyrics : R N Jayagopal
  • Movie : Jeevanadhi
  • Music : koti

Sheshadrivasa sri thirumalesha lyrics in kannada

ಓ…
ಶೇಷಾದ್ರಿವಾಸ , ಶ್ರೀ ತಿರುಮಲೇಶ ,
ಶ್ರೀ ಶ್ರೀನಿವಾಸ , ಶ್ರೀ ವೆಂಕಟೇಶ …
ನಮೋ ನಮೋ…
ಓ…
ಪದ್ಮಾವತೀಶ , ಭಕ್ತ ಹೃದಯೇಶ,
ಸಂಕಷ್ಟನಾಶ , ಗರುಡಾದ್ರಿವಾಸ
ನಮೋ ನಮೋ…

ಶೇಷಾದ್ರಿ ವಾಸ ಶ್ರೀ ತಿರುಮಲೇಶ
ಶೇಷಾದ್ರಿ ವಾಸ ಶ್ರೀ ತಿರುಮಲೇಶ
ಭಕ್ತ ಜನ ಮಂದಾರ ಹೇ ಶ್ರೀನಿವಾಸ
ನೀ ಒಲಿದರೆ ಮನೆಯು ಲಕ್ಷ್ಮೀ ನಿವಾಸ…
ನೀ ನೀಗುವೆ ಜನರ ಸಂಕಷ್ಟವ….
ನೀ ತರುವೆ ಮನಕೆ ಸಂತೋಷವ …
ಕಾರುಣ್ಯ ನಿಧಿಯೇ ಶ್ರೀ ವೆಂಕಟೇಶ …

ಶೇಷಾದ್ರಿ ವಾಸ ಶ್ರೀ ತಿರುಮಲೇಶ
ಶೇಷಾದ್ರಿ ವಾಸ ಶ್ರೀ ತಿರುಮಲೇಶ

ನಂಬಿದೆನು ನಾ ನಿನ್ನ ನೀನೆನ್ನ
ಶರಣೆಂದು ಉಸಿರುಸಿರು ತವನಾಮವು
ಕಾವಲಿಗೆ ಗೋವಿಂದ ಇರುವಾಗ
ನಮಗೆಲ್ಲ ಎಂದೆಂದೂ ಭಯ ದೂರವು

ಜೀವನದೆ ಆನಂದ ಅಳಿವುಳಿವು ನಿನ್ನಿಂದ
ಬಾಳಿಲ್ಲ ನೀನಿಲ್ಲದೆ
ಅರ್ಪಣೆಯ ಭಾವದಲಿ ನಿಂತಿರಲು
ಎದುರಿನಲ್ಲಿ ನೀನಿನ್ನ ಕೃಪೆ ತೋರಿದೆ…

ಭಾಗ್ಯದ ಮಳೆಯನ್ನೂ ನೀ ಕರೆಯುವೆ
ನಿಜಮುಕ್ತಿ ಬಾಗಿಲನು ನೀ ತೆರೆಯುವೆ

ನಮಗೆ….
ಒಲಿದೆ….
ಪ್ರಭುವೇ…..
ಅರಿಯೆ….

ಶೇಷಾದ್ರಿವಾಸ, ಶ್ರೀ ತಿರುಮಲೇಶ
ಶೇಷಾದ್ರಿವಾಸ, ಶ್ರೀ ತಿರುಮಲೇಶ

ಪದ್ಮಾವತಿ ದೇವಿ ಕೈ ಹಿಡಿದ ಮಹರಾಯ
ಪಾಲಿಸೋ ಮಹನೀಯನೆ
ಅರಿಶಿನ ಕುಂಕುಮದ ಸೌಭಾಗ್ಯನೀ ನೀಡು
ಕಾಪಾಡು ಲಕ್ಷ್ಮೀಶನೇ

ನಮಗೆಲ್ಲ ಶತವರುಷ ಬಾಳಿರಲಿ
ನಿಜ ಹರುಷ ನೀಡಯ್ಯಾ ಪ್ರಭು ಇಂದಿಗೂ
ನಮ್ಮ ಮನೆ ಅಂಗಳದಿ ನಗೆಯೆನೆಂಬ
ಸೌರಭವು ಸೂಸಿರಲಿ ಎಂದೆಂದಿಗೂ

ಕವಿದಿದ್ದ ಇರುಳನ್ನು ನೀ ನೀಗಿದೆ
ಹೊಸದೊಂದು ನಂಬಿಕೆಯ ನೀ ನೀಡಿದೆ

ನಮಗೆ
ಒಲಿದೆ
ಪ್ರಭುವೇ.
ಅರಿಯೆ.

ಶೇಷಾದ್ರಿ ವಾಸ ಶ್ರೀ ತಿರುಮಲೇಶ
ಶೇಷಾದ್ರಿ ವಾಸ ಶ್ರೀ ತಿರುಮಲೇಶ
ಭಕ್ತ ಜನ ಮಂದಾರ ಹೇ ಶ್ರೀನಿವಾಸ
ನೀ ಒಲಿದರೆ ಮನೆಯು ಲಕ್ಷ್ಮೀ ನಿವಾಸ
ನೀ ನೀಗುವೆ ಜನರ ಸಂಕಷ್ಟವ
ನೀ ತರುವೆ ಮನಕೆ ಸಂತೋಷವ …
ಕಾರುಣ್ಯ ನಿಧಿಯೇ ಶ್ರೀ ವೆಂಕಟೇಶ …

ಶೇಷಾದ್ರಿ ವಾಸ ಶ್ರೀ ತಿರುಮಲೇಶ
ಶೇಷಾದ್ರಿ ವಾಸ ಶ್ರೀ ತಿರುಮಲೇಶ

ಶೇಷಾದ್ರಿ ವಾಸ ಶ್ರೀ ತಿರುಮಲೇಶ
ಶೇಷಾದ್ರಿ ವಾಸ ಶ್ರೀ ತಿರುಮಲೇಶ
ಶೇಷಾದ್ರಿ ವಾಸ ಶ್ರೀ ತಿರುಮಲೇಶ
ಶೇಷಾದ್ರಿ ವಾಸ ಶ್ರೀ ತಿರುಮಲೇಶ

Sheshadrivasa sri thirumalesha song video :

Leave a Comment

Contact Us