Sanju Mattu Geetha music info :
Song | Sanju Mattu Geetha |
Singers | Sonu Nigam, Shreya Goshal |
Lyrics | Kaviraj |
Movie | Sanju weds Geetha |
Music | Jessie Gift |
Label | Anand Audio |
Sanju Mattu Geetha song lyrics in Kannada :
ಸಂಜು ಮತ್ತು ಗೀತಾ
ಸೇರಬೇಕು ಅಂತಾ
ಬರೆದಾಗಿದೆ ಇಂದು ಬ್ರಹ್ಮನೂ…
ನನ್ನ ಜೀವಕ್ಕಿಂತಾ
ನೀನೆ ನನ್ನ ಸ್ವಂತಾ
ಇರುವಾಗ ನಾನು ಚಿಂತೆ ಏನು?
ನಿನ್ನ ಎಲ್ಲ ನೋವನ್ನು
ಕೊಡುಗೇ ನೀಡು ನನಗಿನ್ನು
ನನ್ನ ಎಲ್ಲ ಖುಷಿಯನ್ನು
ಕೊಡುವೇ ನಿನ್ನ ವಶಕಿನ್ನು
ಮಳೆಯಾ ಹನಿ
ಕುರುಳೋ ದನಿ ತರವೇ?
ನಗಬಾರದೆ ನಗಬಾರದೆ ನನ್ನೊಲವೇ?
ಸಂಜು ಮತ್ತು ಗೀತಾ
ಸೇರಬೇಕು ಅಂತಾ
ಬರೆದಾಗಿದೆ ಇಂದು ಬ್ರಹ್ಮನೂ…
ಆ ಕಣ್ಣಿಗೊಂದು ಈ ಕಣ್ಣಿಗೊಂದು
ಸ್ವರ್ಗಾನ ತಂದು ಕೊಡಲೇನು ಇಂದು
ಏನಾಗಲಿ ನನ್ನ ಸಂಗಾತಿ ನೀ..
ನಿನ್ನ ಈ ಕಣ್ಣಲೀ ಇದೆ ಕೊನೆಯಾ ಹನಿ
ಎದೆಯ ಗೂಡಿನಲ್ಲಿ ಪುಟ್ಟ ಗುಬ್ಬಿಯಂತೆ ನಿನ್ನ
ಬೆಚ್ಚನೇಯ ಪ್ರೀತಿ ಕೊಟ್ಟು ಬಚ್ಚಿ ಇಡುವೆ ಚಿನ್ನ
ಇತಿಹಾಸದ ಪುತ ಕಾಣದ ಒಲುಮೆ ನೀಡುವೇ…
ಮಳೆಯಾ ಹನಿ ಕುರುಳೋ ದನಿ ತರವೇ?
ನಗಬಾರದೆ ನಗಬಾರದೆ ನನ್ನೊಲವೇ?
ಸಂಜು ಮತ್ತು ಗೀತಾ
ಸೇರಬೇಕು ಅಂತಾ
ಬರೆದಾಗಿದೆ ಇಂದು ಬ್ರಹ್ಮನೂ…
ಕಂಡಿಲ್ಲ ಯಾರು ಆ ದೇವರನ್ನು
ಇರಬಹುದೊ ಏನು ನಿನ್ನಂತೆ ಅವನು
ಗೆಳೆಯ ಎಂದರೆ ಅದಕು ಹತ್ತಿರ
ಇನಿಯ ಎಂದರೆ ಅದಕು ಎತ್ತರ
ಒರಗಿಕೊಳ್ಳಲೇನು ನಿನ್ನ ಎದೆಗೆ ಒಮ್ಮೆ ನಾನು
ಕರಗಿಹೋಗಲೇನು ನಿನ್ನ ಕರಗಳಲ್ಲಿ ನಾನು
ಯುಗದಾಚೆಗು ಜಗದಾಚೆಗು ಜೊತೆಗೆ ಸಾಗುವೆ
ಕಡಲೆಲ್ಲವ ಅಲೆ ಸುತ್ತುವ ತರವೆ
ನಿನ್ನ ಸೇರುವೆ ನಿನ್ನ ಸೇರುವೆ ನನ್ನೊಲವೆ
ಸಂಜು ಮತ್ತು ಗೀತಾ
ಸೇರಬೇಕು ಅಂತಾ
ಬರೆದಾಗಿದೆ ಇಂದು ಬ್ರಹ್ಮನೂ…